newsfirstkannada.com

ಕುಮಾರಸ್ವಾಮಿ ನಿವಾಸದಲ್ಲಿ ಮೈತ್ರಿ ನಾಯಕರ ಸಭೆ; ಆ ನಾಯಕನ ಸೋಲಿಸೋದೇ ಬಿಗ್ ಟಾರ್ಗೆಟ್​..!

Share :

Published March 6, 2024 at 7:10am

    ಕುಮಾರಸ್ವಾಮಿ ನೇತೃತ್ವದಲ್ಲಿ ರಣತಂತ್ರ ರೂಪಿಸಿದ ಜೆಡಿಎಸ್-ಬಿಜೆಪಿ

    ಎರಡು ಲೋಕಸಭೆ ಕ್ಷೇತ್ರದ ಬಗ್ಗೆ ನಡೆಯಿತು ಮಹತ್ವದ ಮಾತುಕತೆ

    ಸಭೆಯಲ್ಲಿ ಪ್ರತಿ ಸದಸ್ಯರ ಸಲಹೆ ಕೇಳಿದ ಹೆಚ್​.ಡಿ ಕುಮಾರಸ್ವಾಮಿ

ಲೋಕಸಭೆ ರಣರಂಗದೊಳ್ ಗೆಲ್ಲೋದಕ್ಕೆ ಸಕಲ ಶಸ್ತ್ರಾಸ್ತ್ರಗಳು ಪ್ರಯೋಗವಾಗ್ತಿವೆ. ಅದರಲ್ಲೂ ಮೈತ್ರಿ ಪಡೆ ಭರ್ಜರಿ ಕಸರತ್ತು ನಡೆಸ್ತಿದೆ. ಈ ನಡುವೆ ಬೆಂಗಳೂರು ಗ್ರಾಮಾಂತರ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಎರಡು ಮಹತ್ವದ ಸಭೆ ನಡೆದಿದೆ. ಸಾಕಷ್ಟು ಮಹತ್ವದ ಚರ್ಚೆಗಳೂ ಆಗಿವೆ. ಮಹತ್ವದ ರಣತಂತ್ರಗಳನ್ನೂ ಹೆಣೆಯಲಾಗಿದೆ.

ಡಿಕೆಶಿ ಸಹೋದರ ಡಿ.ಕೆ ಸುರೇಶ್ ಸೋಲಿಸಲು ಪಣ
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಗೆಲ್ಲೋ ನಿಟ್ಟಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ನಿವಾಸದಲ್ಲಿ ಮೈತ್ರಿ ನಾಯಕರ ಸಭೆ ನಡೆಸಲಾಯ್ತು. ಕ್ಷೇತ್ರದ ಜೆಡಿಎಸ್, ಬಿಜೆಪಿ ನಾಯಕರು ಸಭೆಯಲ್ಲಿ ಭಾಗಿಯಾಗಿದ್ರು. ಮಾಜಿ ಸಚಿವರಾದ ಸಿ.ಪಿ.ಯೋಗೇಶ್ವರ್, ಮುನಿರತ್ನ ಸೇರಿ ಹಲವರ ಸಾಕ್ಷಿಯಾಗಿ ನಡೆದ ಮೀಟಿಂಗ್​ನಲ್ಲಿ ಸಾಕಷ್ಟು ಚರ್ಚೆಯಾಯ್ತು. ಈ ವೇಳೆ ಡಾ.ಮಂಜುನಾಥ್ ಹೆಸರು ಮುನ್ನೆಲೆಗೆ ಬಂದಿದೆ.

ಡಿ.ಕೆ ಸುರೇಶ್ ವಿರುದ್ಧ ಡಾ.ಮಂಜುನಾಥ್?

  • ಹಾಲಿ ಸಂಸದ ಡಿ.ಕೆ ಸುರೇಶ್ ಸೋಲಿಸುವ ನಿಟ್ಟಿನಲ್ಲಿ ಚರ್ಚೆ
  • ಬಲ ಅಭ್ಯರ್ಥಿ ಕಣಕ್ಕೆ ಇಳಿಸಲು ತಂತ್ರ ರೂಪಿಸಿದ ನಾಯಕರು
  • ಡಾ.ಮಂಜುನಾಥ್ ಸ್ಪರ್ಧೆ ಕುರಿತು ಮೀಟಿಂಗ್​ನಲ್ಲಿ ಪ್ರಸ್ತಾಪ
  • ಬಿಜೆಪಿ ನಾಯಕರೇ ಮಂಜುನಾಥ್ ಹೆಸರು ಪ್ರಸ್ತಾಪಿಸಿದ್ದು ವಿಶೇಷ
  • ಮುನಿರತ್ನ ಮಂಜುನಾಥ್ ಹೆಸರು ಪ್ತಸ್ತಾಪಿಸಿದ್ದು, ಹಲವರಿಂದ ಜೈ
  • ಸಿ.ಪಿ.ಯೋಗೇಶ್ವರ್​ರಿಂದಲೂ ಡಾ.ಮಂಜುನಾಥ್ ಸ್ಪರ್ಧೆಗೆ ಒಲವು
  • ಸಭೆಯಲ್ಲಿ ಪ್ರತಿ ಸದಸ್ಯರ ಸಲಹೆ ಕೇಳಿದ ಹೆಚ್​.ಡಿ ಕುಮಾರಸ್ವಾಮಿ
  • ನಾವು ತೀರ್ಮಾನ ತೆಗೆದುಕೊಳ್ಳುವುದು ಬೇಡ ಎಂದ ಹೆಚ್​ಡಿಕೆ
  • ಹೈಕಮಾಂಡ್ ತೀರ್ಮಾನಕ್ಕೆ ಎಲ್ಲಾ ಬದ್ಧರಾಗೋಣ ಎಂದ ಹೆಚ್​ಡಿಕೆ
  • ಯಾರೇ ಸ್ಪರ್ಧಿಸಿದ್ರೂ ಗೆಲ್ಲಿಸಲು ಒಗ್ಗಟ್ಟಿನಿಂದ ಹೋರಾಡಲು ಕರೆ

ಸಂಸದೆ ಮಂಗಳಾ ಅಂಗಡಿ ನಿವಾಸಕ್ಕೆ ನಡ್ಡಾ ಭೇಟಿ

ಬೆಳಗಾವಿ ಟಿಕೆಟ್ ಜಗದೀಶ್ ಶೆಟ್ಟರ್​ಗೆ ಕೊಡೋ ಸಾಧ್ಯತೆ ಇದೆ ಅನ್ನೋ ಚರ್ಚೆ ನಡುವೆ ಮಂಗಳಾ ಅಂಗಡಿ ನಿವಾಸಕ್ಕೆ ಖುದ್ದು ನಡ್ಡಾ ಭೇಟಿ ಕೊಟ್ಟಿರೋದು ಕುತೂಹಲಕ್ಕೆ ಕಾರಣವಾಗಿದೆ. ಚರ್ಚೆಗೂ ದಾರಿಮಾಡಿಕೊಟ್ಟಿದೆ. ಒಟ್ಟಾರೆ ಲೋಕಸಭೆ ಎಲೆಕ್ಷನ್ ಡೇಟ್​ ಅನೌನ್ಸ್​ಗೂ ಮೊದಲೇ ಟಿಕೆಟ್ ಪಡೆಯಲು, ಗೆಲ್ಲಲು ತಂತ್ರಗಳು, ಕಸರತ್ತುಗಳು ಶುರುವಾಗಿವೆ. ಆದ್ರೆ ಹೈಕಮಾಂಡ್ ನಿರ್ಧಾರ ಏನು ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಮಾರಸ್ವಾಮಿ ನಿವಾಸದಲ್ಲಿ ಮೈತ್ರಿ ನಾಯಕರ ಸಭೆ; ಆ ನಾಯಕನ ಸೋಲಿಸೋದೇ ಬಿಗ್ ಟಾರ್ಗೆಟ್​..!

https://newsfirstlive.com/wp-content/uploads/2024/03/HDK-13.jpg

Load More