Advertisment

ನಾಗಮಂಗಲ ಗಲಾಟೆ ನೋವು ಇನ್ನೂ ಮುಗಿದಿಲ್ಲ; ಒಬ್ಬರದ್ದು ಒಂದೊಂದು ಕತೆ, HDK ಮುಂದೆ ಕಣ್ಣೀರಿಟ್ಟ ಹಿರಿಯ ಜೀವಗಳು

author-image
Ganesh
Updated On
ನಾಗಮಂಗಲ ಗಲಾಟೆ ನೋವು ಇನ್ನೂ ಮುಗಿದಿಲ್ಲ; ಒಬ್ಬರದ್ದು ಒಂದೊಂದು ಕತೆ, HDK ಮುಂದೆ ಕಣ್ಣೀರಿಟ್ಟ ಹಿರಿಯ ಜೀವಗಳು
Advertisment
  • ಬದ್ರಿಕೊಪ್ಪಲು ಗ್ರಾಮಕ್ಕೆ ಹೆಚ್.ಡಿ.ಕುಮಾರಸ್ವಾಮಿ ಭೇಟಿ
  • ಹೆಚ್‌ಡಿಕೆ ಮುಂದೆ ಬಂಧಿತ ಆರೋಪಿಗಳ ಹೆತ್ತವರ ಕಣ್ಣೀರು
  • ಗೃಹ ಸಚಿವರು ಎಚ್ಚರಿಕೆ ವಹಿಸಿದ್ರೆ ಹೀಗಾಗ್ತಿರ್ಲಿಲ್ಲ ಎಂದ ಹೆಚ್‌ಡಿಕೆ

ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಕಿಡಿಗೇಡಿಗಳ ಪುಂಡಾಟದಿಂದ ಆಗಿರೋ ಅನಾಹುತ, ನಷ್ಟದ ನೋವು ಮಾತ್ರ ಕಡಿಮೆಯಾಗಿಲ್ಲ. ಈ ಮಧ್ಯೆ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಮತ್ತೆ ನಾಗಮಂಗಲಕ್ಕೆ ಭೇಟಿ ನೀಡಿದ್ರು. ಈ ವೇಳೆ ಸುಖಾಸುಮ್ಮನೆ ನಮ್ಮ ಮಕ್ಕಳನ್ನ ಬಂಧಿಸಿದ್ದಾರೆ ಅಂತ ಕುಟುಂಬಸ್ಥರು ಹೆಚ್‌ಡಿಕೆ ಮುಂದೆ ಕಣ್ಣೀರಿಟ್ರು. ಜೊತೆಗೆ ಕಷ್ಟದಲ್ಲಿ ಇರುವವರಿಗೆ ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದಾರೆ.

Advertisment

ನಾಗಮಂಗಲದಲ್ಲಿ ಕಿಡಿಗೇಡಿಗಳ ದುಷ್ಟಕಾರ್ಯದಿಂದ ಧರ್ಮದ ಕಿಚ್ಚು ಧಗಧಗಿಸಿತ್ತು. ಹಿಂದೂ-ಮುಸ್ಲಿಂ ಗಲಾಟೆಯಲ್ಲಿ ಗಣೇಶನ ಮೇಲೆ ಕಲ್ಲು ತೂರಾಟ ನಡೆದಿತ್ತು. ಈ ಕೇಸ್‌ನಲ್ಲಿ ಸುಮಾರು 53 ಮಂದಿಯ ಬಂಧನವಾಗಿತ್ತು. ಇದೀಗ ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಬಂಧಿಸಿರೋ ಆರೋಪ ಕೇಳಿಬಂದಿದೆ.

ಇದನ್ನೂ ಓದಿ:ನಾಗಮಂಗಲ ಪ್ರಕರಣಕ್ಕೆ ಕೇರಳ ಲಿಂಕ್.. ಕಿಡಿಗೇಡಿಗಳು ಹಾರೆ ಬಳಸಿ ಮಾಡಿದ್ದೇನು ಗೊತ್ತಾ..?

Advertisment

ಹೆಚ್‌ಡಿಕೆ ಮುಂದೆ ಬಂಧಿತ ಆರೋಪಿಗಳ ಹೆತ್ತವರ ಕಣ್ಣೀರು
ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ನಿನ್ನೆ ನಾಗಮಂಗಲದ ಬದ್ರಿಕೊಪ್ಪಲು ಗ್ರಾಮಕ್ಕೆ ಭೇಟಿ ನೀಡಿದ್ರು. ಬಂಧಿತ ಹಿಂದೂ ಯುವಕರ ಮನೆಗಳಿಗೆ ಭೇಟಿ ನೀಡಿದ್ರು. ಈ ವೇಳೆ ಸುಖಾಸುಮ್ಮನೆ ನಮ್ಮ ಮಕ್ಕಳನ್ನ ಬಂಧಿಸಲಾಗಿದೆ ಅಂತ ಹೆತ್ತವರು ಕಣ್ಣೀರು ಹಾಕಿದ್ರು. ನಮ್ಮ ಕುಟುಂಬ ಆಧಾರವಾಗಿದ್ದ ಮಗನನ್ನ ಬಂಧಿಸಿದ್ದಾರೆ. ಇದ್ರಿಂದ ನಮಗೆ ತೊಂದರೆ ಆಗುತ್ತಿದೆ ಅಂತ ಮಹಿಳೆಯರು ಹೆಚ್‌ಡಿಕೆ ಬಳಿ ತಮ್ಮ ನೋವನ್ನ ತೋಡಿಕೊಂಡಿದ್ದಾರೆ. ಇದೇ ವೇಳೆ‌ ನೊಂದ ಕುಟುಂಬ‌ಗಳಿಗೆ ಹೆಚ್‌ಡಿಕುಮಾರಸ್ವಾಮಿ ಆರ್ಥಿಕ ಸಹಾಯ ಮಾಡಿದ್ದಾರೆ. ಪೊಲೀಸರಿಗೆ ಹೆದರಿ ಊರು ಬಿಟ್ಟಿರುವ ಕುಟುಂಬಗಳಿಗೂ ಸೇರಿ ಸುಮಾರು 20 ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಿದ್ರು.

publive-image

ಗೃಹ ಸಚಿವರು ಎಚ್ಚರಿಕೆ ವಹಿಸಿದ್ರೆ ಹೀಗಾಗ್ತಿರ್ಲಿಲ್ಲ ಎಂದ ಹೆಚ್‌ಡಿಕೆ
ಬಂಧಿತ ಆರೋಪಿಗಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಮಾತನಾಡಿದ ಹೆಚ್‌.ಡಿ.ಕುಮಾರಸ್ವಾಮಿ, ಗೃಹ ಸಚಿವರು ಎಚ್ಚರಿಕೆ ವಹಿಸಿದ್ರೆ ಹೀಗೆ ಆಗ್ತಾ ಇರಲಿಲ್ಲ. ಮುಗ್ಧ ಜನರನ್ನು ಪೊಲೀಸರು ಬಂದಿಸೋದು ಬೇಡಾ ಅಂತ ಮನವಿ ಮಾಡಿದ್ದಾರೆ. ಒಟ್ಟಾರೆ, ಕಿಡಿಗೇಡಿಗಳ ಕೃತ್ಯಕ್ಕೆ ಅಮಾಯಕರ ಬಂಧನವಾಗಿದೆ ಅನ್ನೋದು ಹೆತ್ತವರ ಅಳಲು. ಆದ್ರೀಗ ಕೃತ್ಯ ನಡೆಸಿದ್ದು ಯಾರು? ಯಾರ ಕೈವಾಡ ಅನ್ನೋದನ್ನ ಪೊಲೀಸರು ತನಿಖೆ ಮಾಡಬೇಕಿದೆ. ಅಮಾಯಕರು ಅನಿಸಿದವರನ್ನ ಕೇಸ್‌ನಿಂದ ಮುಕ್ತಿಕೊಡಬೇಕಿದೆ.

ಇದನ್ನೂ ಓದಿ:‘ವ್ಯವಸ್ಥಿತ ಸಂಚು’! ನಾಗಮಂಗಲ ಪ್ರಕರಣಕ್ಕೆ ಚನ್ನಪಟ್ಟಣ ಬೈಎಲೆಕ್ಷನ್ ಲಿಂಕ್ ಕೊಟ್ಟ ಕುಮಾರಸ್ವಾಮಿ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment