newsfirstkannada.com

ಸುಮಲತಾ ನನ್ನ ಶಾಶ್ವತ ಶತ್ರುನಾ? ಭೇಟಿ ಮಾಡುವ ಬಗ್ಗೆ ಮಾತಾಡಿದ ಕುಮಾರಸ್ವಾಮಿ

Share :

Published March 28, 2024 at 2:55pm

Update March 28, 2024 at 2:57pm

    ಮಂಡ್ಯ ಲೋಕಸಭೆ ಚುನಾವಣೆಯ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ

    ನಾವೆಲ್ಲ ಹುಲುಮಾನವರು ಎಂದ ಮಾಜಿ ಮುಖ್ಯಮಂತ್ರಿ HDK

    ಸುಮಲತಾ ಅಂಬರೀಶ್​ ‘ಮೈತ್ರಿ ಧರ್ಮ’ ಪಾಲನೆ ಮಾಡ್ತಾರಾ?

ಜೆಡಿಎಸ್‌ಗೆ ಸುಮಲತಾ ಬೆಂಬಲ ವಿಚಾರವಾಗಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮೈಸೂರಿನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸುಮಲತಾ ಏನು ನನ್ನ ಶಾಶ್ವತ ಶತ್ರುನಾ? ರಾಮಾಂಜನೇಯರ ಯುದ್ಧವೇ ಈ ಮಣ್ಣಿನಲ್ಲಿ ನಡೆದು ಹೋಗಿಲ್ವಾ ?ಅದರ ಮುಂದೆ ಯಾವ ಲೆಕ್ಕ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ‘ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕುಮಾರಣ್ಣ’ ವಿಜಯೇಂದ್ರ ಅಧಿಕೃತ ಘೋಷಣೆ

ನಾವೆಲ್ಲ ಹುಲುಮಾನವರು. ರಾಜಕೀಯದಲ್ಲಿ ಹೋರಾಟ ಜಗಳ ಎಲ್ಲವೂ ಇದ್ದೇ ಇರುತ್ತೆ. ಅವನ್ನೆಲ್ಲಾ ದಾಟಿ ಹೋಗಬೇಕು. ನಮಗೇನು ಸುಮಲತಾ ಬಹಳ ದೂರದವರೇನೂ ಅಲ್ಲ. ಅಂಬರೀಷ್ ಇದ್ದ ಕಾಲದಲ್ಲಿ ಪರಸ್ಪರ ಜತೆಯಲ್ಲಿದ್ದವರು. ರಾಜಕಾರಣಕ್ಕಾಗಿ ಕೆಲವು ವ್ಯತ್ಯಾಸಗಳಾಗಿತ್ತು, ಅಗತ್ಯವಿದ್ದರೆ ಅವರನ್ನ ಭೇಟಿ ಮಾಡುತ್ತೇವೆ ಎಂದಿದ್ದಾರೆ.

ಇನ್ನು ಮಂಡ್ಯ ಲೋಕಸಭೆ ಕ್ಷೇತ್ರದಿಂದ ಹೆಚ್​ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡೋದು ಖಚಿತವಾಗಿದೆ. ಇಂದು ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಘೋಷಣೆ ಮಾಡಿದ್ದಾರೆ. ಅಂತೆಯೇ ಕುಮಾರಸ್ವಾಮಿ, ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಮೈತ್ರಿ ಟಿಕೆಟ್ ಜೆಡಿಎಸ್​ಗೆ ಸಿಕ್ಕಿರುವ ಹಿನ್ನೆಲೆಯಲ್ಲಿ ಹಾಲಿ ಸಂಸದೆ, ಬಿಜೆಪಿ ಟಿಕೆಟ್ ಆಕಾಂಕ್ಷಿ ಸುಮಲತಾ ಅಂಬರೀಶ್​ ‘ಮೈತ್ರಿ ಧರ್ಮ’ ಪಾಲನೆ ಮಾಡ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸುಮಲತಾ ನನ್ನ ಶಾಶ್ವತ ಶತ್ರುನಾ? ಭೇಟಿ ಮಾಡುವ ಬಗ್ಗೆ ಮಾತಾಡಿದ ಕುಮಾರಸ್ವಾಮಿ

https://newsfirstlive.com/wp-content/uploads/2024/03/Sumalatha-HDK.jpg

Load More