/newsfirstlive-kannada/media/post_attachments/wp-content/uploads/2024/02/HDK_CN_MANJUNATH.jpg)
ಬೆಂಗಳೂರು ಜಯದೇವ ಹೃದ್ರೋಗ ವಿಜ್ಞಾನ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿದ್ದ ಡಾಕ್ಟರ್ ಸಿಎನ್ ಮಂಜುನಾಥ್ ಸೇವೆಯಿಂದ ನಿವೃತ್ತರಾಗಿದ್ದಾರೆ. ಆಸ್ಪತ್ರೆಯ ಎಲ್ಲ ಸಿಬ್ಬಂದಿ ಕೂಡ ಭಾರವಾದ ಹೃದಯದಿಂದ ಬೀಳ್ಕೊಡುಗೆ ನೀಡಿದ್ದಾರೆ. ವೈದ್ಯ ಮಂಜುನಾಥ್ ಅವರ ನಿವೃತ್ತಿ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಡಾಕ್ಟರ್ CN ಮಂಜುನಾಥ್ ಅವರ ಬಗ್ಗೆ ನ್ಯೂಸ್ ಫಸ್ಟ್ನ ಸಂದರ್ಶನದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ.. ಅವರು (ಮಂಜುನಾಥ್) ಸುದೀರ್ಘವಾಗಿ ಕೆಲಸ ಮಾಡಿರುವುದು ಹಾಗೂ ಆಸ್ಪತ್ರೆಯನ್ನು ಆ ಮಟ್ಟಿಗೆ ಅಭಿವೃದ್ಧಿ ಮಾಡಿರುವುದು ನಮ್ಮ ದೇಶದ ಇತಿಹಾಸದಲ್ಲಿ ದಾಖಲೆ. ಅವರು ಬಡವರಿಗೆ ಕೊಟ್ಟಂತಹ ಚಿಕಿತ್ಸೆಗಳಿಂದ ಜನಸಾಮಾನ್ಯರು ಮಾತನಾಡುತ್ತಾರೆ. ಪ್ರತಿಯೊಬ್ಬರಿಗೂ ನಿವೃತ್ತಿ ಅನ್ನೋದು ಇರುತ್ತದೆ. ಅವರನ್ನು ಮುಂದುವರೆಸಬೇಕು ಎನ್ನುವಂತದ್ದು ತಪ್ಪಾಗುತ್ತದೆ. ಆದರೆ, ಮೊನ್ನೆ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರದ ಬಗ್ಗೆ ಇಲ್ಲಿ ಮಾತನಾಡಬೇಕು ಎಂದರು.
ಸರ್ಕಾರ ಬೇರೆಯವರನ್ನು ಪ್ರಭಾರ ನಿರ್ದೇಶಕರನ್ನು ನೇಮಕ ಮಾಡಿದೆ. ಅವರ ವಯಸ್ಸು 69 ಆಗಿದೆ. ಅವರು ವೈಸ್ ಚಾನ್ಸೆಲೆರ್ ಆಗಿ ಕೆಲಸ ಮಾಡಿ ಅವಧಿ ಮುಗಿದ ಮೇಲೆ ಅದೇ ಆಸ್ಪತ್ರೆಗೆ ಕಾಂಟ್ರ್ಯಾಕ್ಟ್ ಬೇಸ್ ಮೇಲೆ ನೇಮಕ ಮಾಡಿದ್ದಾರೆ. ಅಂತಹ ವ್ಯಕ್ತಿಯನ್ನು ಪ್ರಭಾರಿ ನಿರ್ದೇಶಕರನ್ನಾಗಿ ಮಾಡಬೇಕು ಎಂದರೆ ಯಾರು ಕಾರಣ ಎಂದು ಪ್ರಶ್ನೆ ಮಾಡಿದ್ದಾರೆ.
ಏನಾದರೂ ಮಾಡಿ ತೆಗೆಯಲೇಬೇಕು ಎನ್ನುವುದಿತ್ತು
ಡಾಕ್ಟರ್ ಸಿಎನ್ ಮಂಜುನಾಥ್ ಅವರ ವಯಸ್ಸು ಎಷ್ಟು? ಅವರ ಆರೋಗ್ಯ ಸರಿ ಇಲ್ವಾ? 66 ಆಸುಪಾಸಿನಲ್ಲಿರುವ ಮಂಜುನಾಥ್ ಅವರನ್ನೇ ಅಲ್ಲಿ ಮುಂದುವರೆಸಬಹುದಿತ್ತು. ಆದರೆ 69 ವರ್ಷದವರನ್ನು ತೆಗೆದುಕೊಂಡು ಹೋಗಿ ಅಲ್ಲಿ ಕೂರಿಸಿದ್ದರ ಉದ್ದೇಶವೇನು? ಆ ಹಿನ್ನೆಲೆಯಲ್ಲಿ ಅಲ್ಲಿ ಯಾಱರು ಇದ್ದಾರೆ. ಇನ್ನೊಬ್ಬರನ್ನು ನಿರ್ದೇಶಕರನ್ನಾಗಿ ನೇಮಕ ಮಾಡುವವರೆಗೆ ಮಂಜುನಾಥ್ ಅವರನ್ನೇ ಮುಂದುವರೆಸಬಹುದಿತ್ತಲ್ವಾ? ಇದರಲ್ಲಿ ಅಸೂಹೆ ಅನ್ನೋದು ಇದೆಯಲ್ಲ, ಮಂಜುನಾಥ್ರನ್ನ ಏನಾದರೂ ಮಾಡಿ ತೆಗೆಯಲೇಬೇಕು ಎನ್ನುವುದಿತ್ತು. ಮುಂದೆ ಆ ಸಂಸ್ಥೆ ಹೇಗೆ ಮುಂದುವರೆಸುತ್ತಾರೆ ನೋಡೋಣ. ಇದರಲ್ಲಿ ಸಂಶಯವೇ ಇಲ್ಲ. ಜಾತಿ ರಾಜಕಾರಣ ಮಾಡಿ ಮಂಜುನಾಥ್ರನ್ನ ತೆಗೆದಿದ್ದಾರೆ ಎಂದು ಹೇಳಿದ್ದಾರೆ.
2013ರಲ್ಲಿ ಮಂಜುನಾಥ್ರನ್ನು ತೆಗೆಯಲು ಹೋದ್ರು, ಆಗಲಿಲ್ಲ..!
ಕಳೆದ 2 ತಿಂಗಳಲ್ಲಿ ಸರ್ಕಾರದವರು ಫೈಲ್ಗಳನ್ನು ತರಿಸಿಕೊಳ್ಳುತ್ತಿದ್ದಾರೆ. ತಪ್ಪು ಮಾಡಿದ್ದಾರೆಂದು ತರಿಸಿಕೊಂಡರೋ ಅಥವಾ ಸರ್ಟಿಫಿಕೇಟ್ ಕೊಡಲು ತರಿಸಿಕೊಂಡರೋ. ಆ ಜಯದೇವ ಆಸ್ಪತ್ರೆ ಬೆಳೆದಿದ್ದೆ ಕೆಲವರಿಗೆ ಸಹಿಸಿಕೊಳ್ಳಲು ಆಗಲಿಲ್ಲ. 2013ರಲ್ಲಿ ಮಂಜುನಾಥ್ ಅವರನ್ನು ತೆಗೆಯಲು ಹೊರಟಿದ್ದರು. ಆದರೆ ಮಾಧ್ಯಮಗಳು ಹಾಗೂ ಜನರು ಟೀಕೆ ಮಾಡಿದ್ದಕ್ಕೆ ಮುಂದುವರೆಸಿದ್ದರು. ಸಿಎಂ ಸಿದ್ದರಾಮಯ್ಯರ ದುರುದ್ದೇಶದಿಂದ ಮಂಜುನಾಥ್ರನ್ನು ಹುದ್ದೆಯಿಂದ ಕೆಳಗೆ ಇಳಿಸಲಾಗಿದೆ, ಇದರಲ್ಲಿ ಯಾವುದೇ ಸಂಶಯವಿಲ್ಲ. ಮಂಜುನಾಥ್ರಿಂದ ಏನು ತಪ್ಪಾಗಿದೆ. 70 ವರ್ಷದವರೆಗೆ ಅವಕಾಶ ವಿತ್ತು. ಅಲ್ಲಿ ಯಾವ ರೀತಿ ನಡೆದುಕೊಂಡಿದ್ದಾರೆ ಎಂದು ಗೊತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ