/newsfirstlive-kannada/media/post_attachments/wp-content/uploads/2024/04/HDK-Shivmogga.jpg)
ಜೆಡಿಎಸ್​ ಅಧ್ಯಕ್ಷ ಹೆಚ್​ ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಫಲಿತಾಂಶದ ಏರುಪೇರಿನಲ್ಲಿ ವಿದೇಶಿ ಶಕ್ತಿಗಳ ಕೈವಾಡವಿದೆ ಎಂದು ಹೇಳಿದ್ದಾರೆ.
ಫಲಿತಾಂಶದಲ್ಲಿ ಸ್ವಲ್ಪ ಏರು ಪೇರಾಗಿದೆ
ಭಾರೀ ಅಂತರದಲ್ಲಿ ಗೆಲುವು ಮುನ್ನಡೆ ಸಾಧಿಸಿದ ಕುಮಾರಸ್ವಾಮಿಯವರು ಪ್ರೆಸ್ ಮೀಟ್ ಮಾಡಿದ್ದಾರೆ. ಪ್ರೆಸ್​​ಮೀಟ್​ನಲ್ಲಿ ಮಾತನಾಡಿದ ಹೆಚ್​ ಡಿ ಕುಮಾರಸ್ವಾಮಿಯವರು, ಫಲಿತಾಂಶದಲ್ಲಿ ಸ್ವಲ್ಪ ಏರು ಪೇರಾಗಿರೋದನ್ನ ಗಮನಿಸಿದ್ದೇನೆ. ಕಾಂಗ್ರೆಸ್ ಮತ್ತು ಕೆಲ ಪಕ್ಷಗಳ ಅಪಪ್ರಚಾರದಿಂದ ಈ ರೀತಿಯಾಗಿದೆ. ಕಾಣದ ಕೈಗಳು, ವಿದೇಶಿ ಶಕ್ತಿಗಳು ಇದರಲ್ಲಿದೆ ಎಂದು ಹೇಳಿದ್ದಾರೆ.
ನಮ್ಮ ಓವರ್ ಕಾನ್ಫಿಡೆನ್ಸ್ ನಿಂದ ಸ್ವಲ್ಪ ಹಿನ್ನೆಡೆಯಾಗಿದೆ
ಬಳಿಕ ಮಾತು ಮುಂದುವರೆಸಿದ ಅವರು, ಮುಂದಿನ ದಿನಗಳು ಬಹುಶಃ ಸವಾಲಿನ ದಿನಗಳಾಗಿವೆ. ವಿರೋಧ ಪಕ್ಷದವರ ಸಂಖ್ಯಾ ಬಲ ಜಾಸ್ತಿಯಾಗಿದೆ. ಒಂದೊಂದು ಹೆಜ್ಜೆಯನ್ನ ಕೂಡ ಜಾಗರೂಕತೆಯಿಂದ ಇಡಬೇಕಾದ ಪರಿಸ್ಥಿತಿ ಇದೆ. ನಮ್ಮ ಓವರ್ ಕಾನ್ಫಿಡೆನ್ಸ್ ನಿಂದ ಸ್ವಲ್ಪ ಹಿನ್ನೆಡೆಯಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಮಣ್ಣು ಮುಕ್ಕಿಸಿದ ಹಾಸನದ ಜನ; ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮೊದಲ ಗೆಲುವು
ಮೋದಿಯನ್ನ ಅವಲಂಬನೆಯಾಗಿದ್ವಿ
ಸಂಪೂರ್ಣವಾಗಿ ಮೋದಿಯನ್ನ ಅವಲಂಬನೆಯಾಗಿದ್ವಿ. ಹಳೆಯ ಕರ್ನಾಟಕದಲ್ಲಿ ಮೈತ್ರಿಯನ್ನ ಬೆಂಬಲಿಸಿದ್ದಾರೆ. ಮೋದಿಯವರ ವರ್ಚಸ್ಸಿನಲ್ಲಿ ಗೆಲ್ತೀವಿ ಅನ್ನೋ ಓವರ್ ಕಾನ್ಫಿಡೆನ್ಸ್ ನಿಂದ ಕೆಲ ಕ್ಷೇತ್ರಗಳಲ್ಲಿ ಹಿನ್ನೆಡೆ ಅನುಭವಿಸಿದ್ವಿ. ಮೊದಲ ಹಂತದ ಚುನಾವಣೆ ನಡೆದ ಹದಿನಾಲ್ಕು ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ಇತ್ತು. ಎಲ್ಲಾ ಕಡೆ ಗೆಲ್ಲುವ ವಾತಾವರಣ ಇತ್ತು. ಬಟ್ ಫಲಿತಾಂಶ ಆ ರೀತಿಯಾಗಿಲ್ಲ ಎಂದು ಹೇಳಿದ್ದಾರೆ.
ನಿಮ್ಮ ಶ್ರಮ, ವ್ಯರ್ಥವಾಗದಂತೆ ಅಭಿವೃದ್ಧಿ ಕೆಲಸ ಮಾಡ್ತೀವಿ
ಮಂಡ್ಯದಲ್ಲಿ ಜೆಡಿಎಸ್ ಮುಗಿದೇ ಹೋಯ್ತೆಂದು ಭವಿಷ್ಯ ನುಡಿದಿದ್ರು. ಬಟ್ ಇವಯತ್ತು ದೊಡ್ಡ ಅಂತರದ ಗೆಲುವಿನ ಹತ್ತಿರದಲ್ಲಿದ್ದೇವೆ. ಬೆ.ಗ್ರಾಮಾಂತರ & ಮಂಡ್ಯದಲ್ಲಿ ಮೈತ್ರಿ ಪಕ್ಷಗಳ ಕಾರ್ಯಕರ್ತರು ತುಂಬಾ ಎಫರ್ಟ್ ಹಾಕಿದ್ದಾರೆ. ಪರಿಣಾಮ ಇವತ್ತು ದೊಡ್ಡ ಅಂತರದ ಗೆಲುವಿನ ಸನಿಹದಲ್ಲಿದ್ದೇವೆ. ನೀವು ಮತಹಾಕಿ ಆಶೀರ್ವಾದ ಮಾಡಿದ್ದೀರಿ. ನಿಮ್ಮ ಶ್ರಮ, ಭರವಸೆ ವ್ಯರ್ಥವಾಗದಂತೆ ಅಭಿವೃದ್ಧಿ ಕೆಲಸ ಮಾಡ್ತೀವಿ. ಪ್ರಾಮಾಣಿಕವಾಗಿ ಕೆಲಸ ಮಾಡೋ ಮೂಲಕ ಋಣವನ್ನ ತೀರಿಸ್ತೇವೆ ಎಂದು ಹೇಳಿದ್ದಾರೆ. ನಂತರ ತಾಜ್ ವೆಸ್ಟೆಂಡ್ ಹೋಟೆಲ್ ನಿಂದ ಜೆಡಿಎಸ್ ಕಚೇರಿಯತ್ತ ಕುಮಾರಸ್ವಾಮಿ ಹೊರಟರು.
250158 ಮತಗಳ ಮುನ್ನಡೆ
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಕುಮಾರಸ್ವಾಮಿ 250158 ಮತಗಳ ಮುನ್ನಡೆ ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಆರ್ ಚಂದ್ರು ವಿರುದ್ಧ ಕಣಕ್ಕಿಳಿದಿದ್ದ ಕುಮಾರಸ್ವಾಮಿ ಭಾರೀ ಅಂತರದಿಂದ ಗೆಲುವು ಕಂಡಿದ್ದಾರೆ.
ಬಾಕಿ ಸಮೇತ ತೀರಿಸಿಕೊಂಡ ಹೆಚ್​ಡಿಕೆ
ಇದಲ್ಲದೆ ಹೆಚ್​ಡಿಕೆ ಮಗನ ಸೋಲಿಗೆ ಬಾಕಿ ಸಮೇತ ಸೇಡು ತೀರಿಸಿಕೊಂಡಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್ ಕಾರ್ಯಕರ್ತರು ಸಂಭ್ರಮಾಚರಣೆ ಜೋರಾಗಿದ್ದು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us