newsfirstkannada.com

‘ಕೊಟ್ರೆ ಕೊಡಿ, ಬಿಟ್ರೆ ಬಿಡಿ, ಇಷ್ಟಕ್ಕೆಲ್ಲಾ ಮೈತ್ರಿ ಬೇಕಿತ್ತಾ?’- ಬಿಜೆಪಿ ವಿರುದ್ಧ ಹೆಚ್​​​ಡಿಕೆ ಆಕ್ರೋಶ

Share :

Published March 19, 2024 at 8:44pm

Update March 19, 2024 at 9:22pm

    ಕೋಲಾರಕ್ಕಾಗಿ ಶುರುವಾಯ್ತಾ ದೋಸ್ತಿಯಲ್ಲೇ ಕದನ?

    ಸಂಪರ್ಕ, ವಿಶ್ವಾಸ, ಸ್ಪಷ್ಟತೆ.. ಏನಿದು ಹೆಚ್​ಡಿಕೆ ಏಟು?

    ರಣಕಣದಲ್ಲಿ ಕೋಲಾಹಲ ಎಬ್ಬಿಸಿದ ದಳಪತಿಯ ಮಾತು

ಬೆಂಗಳೂರು: ಮೈತ್ರಿಗೆ ಸೀಲು ಹೊಡೆದ ಬಳಿಕ ದಳಪತಿ ತಗಾದೆ ತಗೆದಿದ್ದಾರೆ. ಎರಡು ಮತ್ತೊಂದು ಸೀಟು ಬೇಕು ಅಂತ ಡೆಲ್ಲಿಯಲ್ಲಿ ಒಪ್ಪಂದ ಮಾಡ್ಕೊಂಡ ಜೆಡಿಎಸ್​ಗೆ ನಂಬಿಸಿ ಬಿಜೆಪಿ ಕುತ್ತಿಗೆಗೆ ಕೈಹಾಕಿದೆ. ಕೋಲಾರ ಕೊಡಲ್ಲ ಅಂತ ತಕರಾರು ತಗೆದಿದೆ. ಈ ತಕರಾರೇ ದಳಪತಿಯನ್ನ ರೊಚ್ಚಿಗೆಬ್ಬಿಸಿದೆ. ಆಡ್ಕೊಂಡವರ ಬಾಯಿಗೆ ಆಹಾರ ಆಗುವಂತೆ ಮಾಡಿದೆ.

ಇದೊಂದೇ ಒಂದು ದಳಪತಿಯ ಮಾತು ರಣಕಣದಲ್ಲಿ ಕೋಲಾಹಲ ಎಬ್ಬಿಸಿದೆ. ದೋಸ್ತಿ ಮಾಡಿ ಜಾತಿ ಕೆಡಿಸಿಕೊಂಡ ದಳಪತಿ, ಎರಡು ಮತ್ತೊಂದು ಸೀಟ್​ಗಾಗಿ ಭಿಕ್ಷೆ ಬೇಡುವ ಸ್ಥಿತಿ ತಲುಪಿದೆ. ಅದರಲ್ಲೂ ಕೋಲಾರ ಕ್ಷೇತ್ರ ವಿಚಾರವಾಗಿ ನಾ ಘರ್​ ಕಾ, ನಾ ಘಾಟ್​ ಕಾ ಅನ್ನೊಂಗಾಗಿದೆ. ಕಾಂಗ್ರೆಸ್​​ ಮೇಲಿನ ಸಿಟ್ಟಿನಿಂದ ರಟ್ಟೆಗೆ ಬಲ ತುಂಬ್ಕೊಕೊಳ್ಳಲು ಬಿಜೆಪಿ ಜೊತೆ ರೊಟ್ಟಿ ಬಡಿದ ಜೆಡಿಎಸ್​, ಈಗ ರಟ್ಟೆ ನೋವಾಗ್ತಿದೆ ಅಂತ ಮಾನಸಿಕವಾಗಿ ಗೋಳಾಡ್ತಿದೆ.

ಕೋಲಾರಕ್ಕಾಗಿ ಶುರುವಾಯ್ತಾ ದೋಸ್ತಿಯಲ್ಲೇ ಕದನ?

ಕಳೆದ ಸಲ ಮುನಿಯಪ್ಪ ಜೊತೆ ಬಗೆಹರಿಸದ ಬಣ ಗಲಾಟೆಯಿಂದ ಕೋಲಾರದಲ್ಲಿ ಕಾಂಗ್ರೆಸ್​​ ಅಂಡು ಸುಟ್ಟುಕೊಂಡ ಬೆಕ್ಕಿನಂತೆ ದಬ್ಬಾಕೊಂಡಿತ್ತು. ಕೈಕಿತ್ತಾಟದಲ್ಲಿ ಮತಕ್ಕಾಗಿ ಸ್ವಾಮಿ ಅಂತ ಭಿಕ್ಷೆ ಬೇಡಿದ ಮುನಿಸ್ವಾಮಿ ಬಾಯಿಗೆ ಬಿದ್ದಿದ್ದು ಐದು ವರ್ಷದ ಲಾಡು. ಈಗ ಮೈತ್ರಿ ಬಂಧ ಅಂತ ಹೋದ ದಳಕ್ಕೆ ಮೂರು ಕ್ಷೇತ್ರದ ಆಫರ್​ ಕೊಟ್ಟು ಮುಗಿಗೆ ತುಪ್ಪ ಸವರಿದ ಬಿಜೆಪಿ, ಎಲ್ಲಾ ಮುಗಿದ ಮೇಲೆ ಕೋಲಾರ ನಮಗೆ ಇರಲಿ ಅಂತ ವರಸೆ ತಗೆದಿದೆ. ಬಿಜೆಪಿಯ ಈ ಡಬಲ್​ ಸ್ಟ್ಯಾಂಡ್​​​, ಒಣಗಿದ ತೆನೆಗೆ ಕಿಡಿ ಸೋಕಿಸಿದೆ. ಈ ಕೋಲಾರದ ಕಿಡಿಯೇ ಮೈತ್ರಿ ಬುಡಕ್ಕೆ ಬೆಂಕಿ ತುರುಕಿದೆ.

ಆರಂಭದಿಂದಲೂ ನಾವು ಕೇಳಿದ್ದು ಮೂರು. ಅವರು ಹೇಳಿದ್ದು ಮೂರು. ಈಗ ಎರಡೇ ಅಂತಿರೋದು ಯಾಕೆ ಅಂತ ಕುಮಾರಸ್ವಾಮಿ ಮುಖ ಸಿಂಡರಿಸಿದ್ದಾರೆ. ಕೇವಲ ಎರಡಕ್ಕಾಗಿ ಮೈತ್ರಿ ಬೇಕಿತ್ತಾ? ಸಂಪರ್ಕದ ಕೊರತೆ ಇರಬಹುದೇನೋ ಅಂತ ತಮ್ಮನ್ನೇ ಸಮಾಧಾನ ಮಾಡ್ಕೋತಿದ್ದಾರೆ ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ. ಆದ್ರೆ, ಬಿಜೆಪಿ ಸಾರಥಿ ವಿಜಯೇಂದ್ರ, ಮೈತ್ರಿಯಲ್ಲಿ ಇದೆಲ್ಲ ಸಹಜ ಬಿಡ್ರಿ, ಎಲ್ಲಾ ಸರಿಹೋಗುತ್ತೆ. ನಮ್ಮ ಹೈಕಮಾಂಡ್​ ಇದೆ ಯಾಕೆ ಚಿಂತೆ ಅಂತ ಅನ್ನೋ ರೀತಿ ಮಾತಾಡಿದ್ದಾರೆ.

ಈ ಮೈತ್ರಿಯನ್ನ ಅಪವಿತ್ರ ಅಂತ ಹಳದಿ ಕಣ್ಣು ಬಿಟ್ಟು ನೋಡ್ತಿದ್ದ ಕಾಂಗ್ರೆಸ್​​​ ಕಲಿ ಡಿಸಿಎಂ ಡಿಕೆಶಿ, ದಳದ ಬಿರುಕು ಹಿರಿಹಿರಿ ಹಿಗ್ಗುವಂತೆ ಮಾಡಿದೆ. ನಾನ್​ ಹೇಳಿರಲಿಲ್ವಾ ಅನ್ನೋ ರೀತಿ ದಳಪತಿಗೆ ಬೆವರು ಇಳಿಸಿದ್ದಾರೆ. ಬೆಂಗಳೂರು ರೂರಲ್​​ನಲ್ಲಿ ಮಂಜುನಾಥ್ ಸ್ಪರ್ಧೆ ಒಂದ್​​ ರೀತಿ ಜೆಡಿಎಸ್​ನ​ ಸೂಸೈಡ್ ಅಟೆಂಮ್ಟ್ ಅಂತ ಗುದ್ದಿದ ಡಿಕೆಶಿ, ಏನ್ರಿ ಇದು ಗೌಡ್ರ ಅಳಿಯನ್ನ ಬಿಜೆಪಿಯಿಂದ ನಿಲ್ಲಿಸೋದಾ? ಬಿಜೆಪಿ ಸ್ಟೈಲೇ ಅದು ಅಂತ ಎಲ್ಲಾ ರಾಜ್ಯದಲ್ಲಿ ಅದು ಬೆಳೆದ ಇತಿಹಾಸದ ಗುಟ್ಟು ಹೇಳಿದ್ದಾರೆ.

ಹೀಗೆ ಮಾಜಿ ಜೋಡೆತ್ತು ಡಿಚ್ಚಿ ಕೊಡ್ತಿದ್ದಂತೆ ಸಿಟ್ಟಿಗೆದ್ದ ದಳಪತಿ, ಈ ಮೈತ್ರಿಗೆಲ್ಲಾ ಮೂಲ ಕಾರಣ ಕಾಂಗ್ರೆಸ್. ನನ್ನ ಚಾರಿತ್ರ್ಯ ಹರಣ ಮಾಡಿದ್ದು ಕಾಂಗ್ರೆಸ್​​. ನಮ್ಮನ್ನ ಬಿಜೆಪಿಗೆ ಕಳಿಸಿದ್ದೇ ಕಾಂಗ್ರೆಸ್. ಹನುಮಂತನ ಬಾಲದ ರೀತಿ ಪಟ್ಟಿ ಕೊಟ್ರು ಎಂದಿದ್ದಾರೆ ಹೆಚ್​​ಡಿಕೆ.
ಕುಮಾರಸ್ವಾಮಿ ಅದೆಷ್ಟೇ ಅರಚಾಡಿದ್ರೂ ಡೋಂಟ್​​ಕೇರ್​​ ಮನಸ್ಥಿತಿಯ ಬಿಜೆಪಿ ಹೈಕಮಾಂಡ್​ ಮಾತ್ರ ತಕ್ಕಡಿ ಆಟಕ್ಕೆ ಇಳಿದಿದೆ.

ಮಂಡ್ಯ, ಹಾಸನ ಕೊಟ್ಟಿದ್ದಿವಿ. ಕೋಲಾರ ನಮಗೆ ಇರಲಿ, ನಮ್ಮ ಅಭ್ಯರ್ಥಿ ಕಣಕ್ಕೆ ಇಳೀತಾರೆ ಅನ್ನೋ ರೀತಿ ನ್ಯಾಯ ಪಂಚಾಯ್ತಿ ಅಲ್ಲಿಗೆ ಸಮಾಪ್ತಿ ಮಾಡಿದೆ. ಇಷ್ಟೆಲ್ಲಾ ಕೂಗಿ ಕೂಗಿ ಗಂಟಲು ನೋವು ಮಾಡ್ಕೊಂಡ ಜೆಡಿಎಸ್​​ ಬಾಸ್​​, 25ರ ನಂತ್ರ ಕ್ಲೈಮ್ಯಾಕ್ಸ್​​ ಅಂತ ಫಸ್ಟ್​​ ಎಪಿಸೋಡ್​​ ಮುಗಿಸಿ ಚೈನ್ನೈಗೆ ಹೊರಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಕೊಟ್ರೆ ಕೊಡಿ, ಬಿಟ್ರೆ ಬಿಡಿ, ಇಷ್ಟಕ್ಕೆಲ್ಲಾ ಮೈತ್ರಿ ಬೇಕಿತ್ತಾ?’- ಬಿಜೆಪಿ ವಿರುದ್ಧ ಹೆಚ್​​​ಡಿಕೆ ಆಕ್ರೋಶ

https://newsfirstlive.com/wp-content/uploads/2024/03/HDK-2.jpg

Load More