ನಿಖಿಲ್​​ ವಿರುದ್ಧ ಸೋಲು ಒಪ್ಪಿಕೊಂಡ್ರಾ ಸೈನಿಕ? CPY​​ ಗೆಲುವಿನ ಬಗ್ಗೆ HDK ಅಚ್ಚರಿ ಮಾತು

author-image
Ganesh Nachikethu
Updated On
ಚನ್ನಪಟ್ಟಣ ಟಿಕೆಟ್ ರೇಸ್​​​ನಿಂದ CPY ಔಟ್? ಯೋಗೇಶ್ವರ್ ಮೇಲೆ ಕುಮಾರಸ್ವಾಮಿ ಗರಂ? ಕಾರಣವೇನು?
Advertisment
  • ಫಲಿತಾಂಶಕ್ಕೂ ಮೊದಲೇ ಸೋಲೊಪ್ಪಿಕೊಂಡ್ರಾ ಸೈನಿಕ?
  • ಉಲ್ಟಾ ಹೊಡೀತಾ ಲೆಕ್ಕಾಚಾರ? ಸಿಪಿವೈಗೆ ಸಿಕ್ಕ ಸುಳಿವೇನು?
  • ಎಲ್ಲರಲ್ಲೂ ಅಚ್ಚರಿ ಮೂಡಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ

ರಾಮನಗರ: ರಾಜ್ಯದಲ್ಲಿ ನಡೆದ ಮೂರು ಕ್ಷೇತ್ರಗಳ ಉಪ ಕದನದಲ್ಲಿ ಚನ್ನಪಟ್ಟಣ ಅಖಾಡ ಭಾರೀ ಕುತೂಹಲ ಕೆರಳಿಸಿತ್ತು, ಕದನ ಕಣದಲ್ಲಿ ಕಾಂಗ್ರೆಸ್‌ನಿಂದ ಸಿಪಿ ಯೋಗೇಶ್ವರ್‌, ಮೈತ್ರಿಯಿಂದ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದರು. ಇಬ್ಬರು ಕೂಡ ಗೆಲುವಿಗಾಗಿ ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ. ಇಬ್ಬರೂ ಕೂಡ ಗೆಲುವಿಗಾಗಿ ಏನೇನ್‌ ಬೇಕೋ ಅದೆಲ್ಲ ಸ್ಟ್ರಾಟರ್ಜಿಯನ್ನು ಮಾಡಿದರು. ಆದ್ರೆ ಅದ್ಯಾಕೋ ಗೊತ್ತಿಲ್ಲ. ಮತದಾನ ಮುಗಿದ ಮರುದಿನವೇ ಸೈನಿಕ ಸೋಲಿನ ಮಾತುಗಳನ್ನು ಆಡಿದ್ದು, ಕಾಂಗ್ರೆಸ್​ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ಸೋಲಿನ ಭೀತಿ.. ಜಮೀರ್​ ಕಡೆ ಬೊಟ್ಟು..!

ಗೆದ್ರೆ ಆಟ ಆಡೋಕೆ ಬಂದಿದ್ದೆ. ಸೋತ್ರೆ ನೋಡೋಕೆ ಬಂದಿದ್ದ ಎಂಬ ಮಾತು ಇದೆ. ಇದೀಗ ಸಿ.ಪಿ.ಯೋಗೇಶ್ವರ್​ ಮಾತು ಕೇಳ್ತಿದ್ರೆ, ಆ ಮಾತು ನೆನಪಿಗೆ ಬರುತ್ತೆ. ನಾನು ಕಾನ್ಫಿಡೆನ್ಸ್ ಕಳೆದುಕೊಂಡಿಲ್ಲ ಎನ್ನುತ್ತಲೇ ಸೈನಿಕ ಸೋಲಿನ ಭವಿಷ್ಯವನ್ನು ನುಡಿದಿದ್ದಾರೆ. ಅಷ್ಟೇ ಅಲ್ಲ ಸೋಲಿನ ಹೊಣೆಯಿಂದ ನುಣಿಚಿಕೊಳ್ಳಲು ಸೇಫ್​ಗೇಮ್​ ಶುರು ಮಾಡಿದ್ದಾರೆ. ದೇವೇಗೌಡರು, ಕುಮಾರಸ್ವಾಮಿಗೆ ಬೈದರೆ ಸಮುದಾಯ ಸಹಿಸೋದಿಲ್ಲ. ಕೆಲವು ಸ್ಟೇಟ್ಮೆಂಟ್, ಮಾತುಗಳಿಂದ ಜನರ ಭಾವನೆಗಳಿಗೆ ಘಾಸಿಯಾಗಿದೆ. ಜಮೀರ್ ಹೇಳಿಕೆಯಿಂದ ಒಂದಷ್ಟು ಲಾಭವಾದ್ರೆ, ಒಂದಷ್ಟು ನಷ್ಟವಾಗಿದೆ. ಒಂದ್ವೇಳೆ ಸೋಲಾದ್ರೆ, ಅದಕ್ಕೆ ನಾನಲ್ಲ ಪಕ್ಷದ ನಾಯಕರೇ ಕಾರಣ ಎನ್ನುವ ಮೂಲಕ ಜಮೀರ್​ ಅಹ್ಮದ್​ ಕಡೆ ಕೈ ತೋರಿದ್ರಾ ಎಂಬ ಗುಸುಗುಸು ಕೇಳಿ ಬಂದಿದೆ.

ಇನ್ನು ಸಿಪಿವೈ ಗೆಲ್ಲಿಸುವ ಹೊಣೆ ಹೊತ್ತಿದ್ದ ಮಾಜಿ ಸಂಸದ ಡಿ.ಕೆ.ಸುರೇಶ್​, ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯೋಗೇಶ್ವರ್​ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಜಮೀರ್​ ಹೇಳಿಕೆ ಜನರ ಮೇಲೆ ಪರಿಣಾಮ ಬೀರಿಲ್ಲ ಎಂದಿದ್ದಾರೆ. ಇತ್ತ ಬಿಜೆಪಿ ಶಾಸಕ ಎಸ್​.ಟಿ ಸೋಮಶೇಖರ್​ ಯೋಗೇಶ್ವರ್​ ಸೋಲುವ ಪ್ರಶ್ನೆಯೇ ಇಲ್ಲ ಎಂದು ಮೈತ್ರಿಗೆ ಕುಟುಕಿದ್ದಾರೆ.

ಅಚ್ಚರಿ ಮೂಡಿಸಿದ ಹೆಚ್​​ಡಿಕೆ

ಕಾಂಗ್ರೆಸ್​ ಅಭ್ಯರ್ಥಿಯೇ ಜಮೀರ್​ ಹೇಳಿಕೆಯಿಂದ ಕಾಂಗ್ರೆಸ್​ಗೆ ನಷ್ಟ ಆಗಿದೆ ಅಂತಿದ್ರೆ, ಇತ್ತ ದಳಪತಿ ಮಾತು ಅಚ್ಚರಿ ಮೂಡಿಸಿದೆ. ಜಮೀರ್​ ಹೇಳಿಕೆಗೂ ನಿಖಿಲ್​​ಗೂ ಸಂಬಂಧ ಇಲ್ಲ. ಅದರಿಂದ ಪ್ರಯೋಜನ ಆಗಿಲ್ಲ ಎಂದಿದ್ದು ಅಚ್ಚರಿ ಮೂಡಿಸಿದೆ. ಜನ ಈಗಾಗಲೇ ತೀರ್ಪು ನೀಡಿದ್ದು, ನವೆಂಬರ್​ 23ರವರೆಗೆ ಕಾಯೋಣ ಎಂದಿದ್ದು, ತಾಯಿ ಚಾಮುಂಡೇಶ್ವರಿ ಮೊರೆ ಹೋಗಿದ್ದಾರೆ. ಕಳೆದ ಚುನಾವಣೆಯೂ ಸಿ.ಪಿ.ಯೋಗೇಶ್ವರ್​ ಇದೇ ರೀತಿ ಸೋಲಿನ ಭವಿಷ್ಯ ನುಡಿದಿದ್ರು. ಸದ್ಯ ಸೈನಿಕನ ಶಾಕಿಂಗ್​ ಹೇಳಿಕೆ, ಕಾಂಗ್ರೆಸ್​ನಲ್ಲಿ ಗೊಂದಲ ಸೃಷ್ಟಿಸಿದ್ರೆ, ದಳಪತಿಗೆ ಧೈರ್ಯ ಹೆಚ್ಚಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment