newsfirstkannada.com

ನಮಗೆ ಎರಡು ಸಚಿವ ಸ್ಥಾನಬೇಕು -ಸಭೆಯಲ್ಲಿ ಕುಮಾರಸ್ವಾಮಿ ಕೇಳಿದ ಇನ್ನೊಂದು ಸ್ಥಾನ ಯಾರಿಗೆ..?

Share :

Published June 6, 2024 at 2:20pm

    ನಿನ್ನೆ NDA ಒಕ್ಕೂಟದಿಂದ ಮಹತ್ವದ ಸಭೆ ನಡೆದಿತ್ತು

    ಮೋದಿ, ಅಮಿತ್ ಶಾ, ನಡ್ಡಾ ನೇತೃತ್ವದಲ್ಲಿ ನಡೆದ ಸಭೆ

    ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಕೂಡ ಭಾಗಿ

ನಿನ್ನೆ ನಡೆದ ಎನ್​ಡಿಎ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಭಾಗಿಯಾಗಿದ್ದರು. ಈ ವೇಳೆ ನಮಗೆ ಎರಡು ಸಚಿವ ಸ್ಥಾನ ಬೇಕು ಎಂದು ಮೋದಿ ಹಾಗೂ ಅಮಿತ್​ ಶಾರನ್ನು ಒತ್ತಾಯಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

NDA ನಾಯಕರ ಬಳಿ ಹೇಳಿದ್ದೇನು ಕುಮಾರಸ್ವಾಮಿ..?
ಮೂಲಗಳ ಮಾಹಿತಿ ಪ್ರಕಾರ.. ನಾವು NDA ಮೈತ್ರಿಕೂಟದ ಭಾಗವಾಗಿದ್ದೇವೆ. ನಮ್ಮನ್ನು ಪರಿಗಣಿಸಿ ಸೂಕ್ತ ಸ್ಥಾನ ಮಾನ ನೀಡಬೇಕು. ಜೆಡಿಎಸ್​ಗೆ ಒಂದು ಸ್ಥಾನ ನೀಡಬೇಕು. ನನಗೆ ಕೃಷಿ ಖಾತೆಯಲ್ಲಿ ಬಹಳ ಆಸಕ್ತಿ ಇದೆ. ಹಾಗಾಗಿ ನನಗೆ ಕೃಷಿ ಖಾತೆಯನ್ನು ನೀಡಿ ಎಂದು ಬಿಜೆಪಿ ಹೈಕಮಾಂಡ್​ ಅನ್ನು ಒತ್ತಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಅಪ್ಪ, ಅಮ್ಮ ಇಬ್ಬರೂ IAS; 10ನೇ ಮಹಡಿಯಿಂದ ಜಿಗಿದು ಪುತ್ರಿ ಸಾವು.. ಡೆತ್​ನೋಟ್​ನಲ್ಲಿ ಕಾರಣ ರಿವೀಲ್..

ಸಿ.ಎನ್.ಮಂಜುನಾಥ್ ಪರವೂ ಬ್ಯಾಟ್ ಮಾಡಿರುವ ಕುಮಾರಸ್ವಾಮಿ.. ಆರೋಗ್ಯ ಖಾತೆಯನ್ನು ಸಿ.ಎನ್.ಮಂಜುನಾಥ್​ಗೆ ನೀಡಬೇಕು. ಈ ಎರಡು ಖಾತೆ ಬೇಕು ನಮಗೆ ಕೊಡಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎನ್ನಲಾಗಿದೆ.

ಅಂದ್ಹಾಗೆ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು. ಮಂಡ್ಯ, ಹಾಸನ ಹಾಗೂ ಕೋಲಾರದಲ್ಲಿ ಜೆಡಿಎಸ್​ ಸ್ಪರ್ಧೆ ಮಾಡಿತ್ತು. ಅದರಲ್ಲಿ ಕೋಲಾರ ಹಾಗೂ ಮಂಡ್ಯದಲ್ಲಿ ಜೆಡಿಎಸ್​ಗೆ ಗೆಲುವು ಸಿಕ್ಕಿದೆ. ಇನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕುಮಾರಸ್ವಾಮಿ ಸಂಬಂಧಿ ಸಿಎನ್ ಮಂಜುನಾಥ್ ಅವರು ಬಿಜೆಪಿ ಪಕ್ಷದ ಅಡಿಯಲ್ಲಿ ಟಿಕೆಟ್ ಪಡೆದು ಸ್ಪರ್ಧೆ ಮಾಡಿದ್ದರು.

ಇದನ್ನೂ ಓದಿ:ಪಾಕ್ ವಿರುದ್ಧದ ಪಂದ್ಯಕ್ಕೂ ಮೊದಲೇ ದೊಡ್ಡ ಆಘಾತ.. ಕ್ಯಾಪ್ಟನ್ ರೋಹಿತ್ ಆಡೋದು ಡೌಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಮಗೆ ಎರಡು ಸಚಿವ ಸ್ಥಾನಬೇಕು -ಸಭೆಯಲ್ಲಿ ಕುಮಾರಸ್ವಾಮಿ ಕೇಳಿದ ಇನ್ನೊಂದು ಸ್ಥಾನ ಯಾರಿಗೆ..?

https://newsfirstlive.com/wp-content/uploads/2023/07/HDK-Modi.jpg

Load More