Advertisment

ಜೈಲಿನಲ್ಲಿ ಮಕ್ಕಳನ್ನು ಕಂಡು ರೇವಣ್ಣ ದಂಪತಿ ಕಣ್ಣೀರು.. ಅಪ್ಪ-ಅಮ್ಮನ ಕಂಡು ಭಾವುಕರಾದ ಪ್ರಜ್ವಲ್, ಸೂರಜ್..!

author-image
Ganesh
Updated On
ಜೈಲಿನಲ್ಲಿ ಮಕ್ಕಳನ್ನು ಕಂಡು ರೇವಣ್ಣ ದಂಪತಿ ಕಣ್ಣೀರು.. ಅಪ್ಪ-ಅಮ್ಮನ ಕಂಡು ಭಾವುಕರಾದ ಪ್ರಜ್ವಲ್, ಸೂರಜ್..!
Advertisment
  • 1 ಗಂಟೆ ಕಾಲ ಮಕ್ಕಳ ಭೇಟಿ ಮಾಡಿದ ರೇವಣ್ಣ ದಂಪತಿ
  • ಸ್ಪೇಷಲ್ ಎಂಟ್ರಿ ಗೇಟ್​ನಿಂದ ಜೈಲ್​ ಒಳಕ್ಕೆ ಹೋಗಿದ್ರು
  • ಗೇಟ್ ಬಳಿಯ ಸ್ಪೇಷಲ್ ಎಂಟ್ರಿ ಛೇಂಬರ್​​ನಲ್ಲಿ ಭೇಟಿ

ಅಶ್ಲೀಲ ವಿಡಿಯೋ, ಅಸಹಜ ಲೈಂಗಿಕ ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣ ಪುತ್ರರು ಜೈಲು ಪಾಲಾಗಿರೋದು ಗೊತ್ತೇ ಇದೆ. ಇದೇ ಮೊದಲ ಬಾರಿಗೆ ರೇವಣ್ಣ ದಂಪತಿ ನಿನ್ನೆ ಜೈಲಿಗೆ ಭೇಟಿ ನೀಡಿದ್ರು. ಮಕ್ಕಳಿಬ್ಬರನ್ನ ಕಂಡ ಅಪ್ಪ-ಅಮ್ಮ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

Advertisment

publive-image

ಸುಪುತ್ರರರನ್ನು ಭೇಟಿ ಮಾಡಿದ ರೇವಣ್ಣ ದಂಪತಿ
ಕಳೆದ ಕೆಲ ದಿನಗಳ ಹಿಂದೆ ಪ್ರತ್ಯೇಕವಾಗಿ ಸೆಂಟ್ರಲ್ ಜೈಲಿಗೆ ಬಂದು ಸೂರಜ್ ಮತ್ತು ಪ್ರಜ್ವಲ್ ನೋಡಿಕೊಂಡು ಹೋಗಿದ್ದ ರೇವಣ್ಣ ದಂಪತಿ ಇದೇ ಮೊದಲ ಬಾರಿಗೆ ಒಟ್ಟಿಗೆ ಆಗಮಿಸಿದ್ರು.. ಎರಡು ದಿನಗಳ ಹಿಂದೆ ಎಸ್​ಐಟಿ ಕಚೇರಿಯಿಂದ ಮುಖ್ಯ ಜೈಲಿಗೆ ಶಿಫ್ಟ್​​​ ಆಗಿರುವ ಪುತ್ರರನ್ನ ರೇವಣ್ಣ ಮತ್ತು ಭವಾನಿ, ಮಕ್ಕಳ ಸ್ಥಿತಿ ಕಂಡು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ:ಕಡಲತೀರ.. ಕೋಟಿಗಟ್ಟಲೇ ಖರ್ಚು.. ಕೊಹ್ಲಿ ಕಟ್ಟಿಸಿದ ಬಂಗಲೆ ವಾವ್ಹ್ .. ಅದ್ಭುತ..! ವಿಡಿಯೋ

publive-image

ಮಕ್ಕಳ ಕಂಡು ರೇವಣ್ಣ ಕಣ್ಣೀರು!
ನಿನ್ನೆ ರೇವಣ್ಣ ದಂಪತಿ ಜೈಲಿನಲ್ಲಿ ಒಂದು ಗಂಟೆಗಳ ಕಾಲ ಮಕ್ಕಳನ್ನು ಭೇಟಿ ಮಾಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಸ್ಪೇಷಲ್ ಎಂಟ್ರಿ ಗೇಟ್ ಮೂಲಕ ಹೋಗಿದ್ದ ರೇವಣ್ಣ ದಂಪತಿ, ಗೇಟ್ ಬಳಿ ಇರುವ ಸ್ಪೇಷಲ್ ಎಂಟ್ರಿ ಛೇಂಬರ್​​ನಲ್ಲಿ ಪ್ರಜ್ವಲ್​​​ ಹಾಗೂ ಸೂರಜ್​ನನ್ನ ಸ್ಪೇಷಲ್ ಎಂಟ್ರಿ ರೂಂನಲ್ಲಿ ಫೇಸ್ ಟೂ ಫೇಸ್ ಭೇಟಿಯಾಗಿದ್ದಾರೆ. ಈ ವೇಳೆ ಜೈಲಿನಲ್ಲಿ ಇಬ್ಬರು ಮಕ್ಕಳನ್ನು ಕಂಡ ತಕ್ಷಣ ರೇವಣ್ಣ ದಂಪತಿ ಕಣ್ಣೀರಿಟ್ಟಿದ್ದಾರೆ. ಅಪ್ಪ ಅಮ್ಮನ ಕಂಡು ಮಕ್ಕಳು ಕೂಡ ಭಾವುಕರಾಗಿದ್ದಾರೆ ಎಂದು ಗೊತ್ತಾಗಿದೆ.

Advertisment

ಇದನ್ನೂ ಓದಿ:ರೋಹಿತ್-ಕೊಹ್ಲಿ ಫ್ಯಾನ್ಸ್​ಗೆ ಶಾಕಿಂಗ್ ನ್ಯೂಸ್.. ಜೋಡೆತ್ತುಗಳಿಂದ ಮತ್ತೊಂದು ನಿರ್ಧಾರ..!

publive-image

ಪ್ರಸಾದ ನೀಡಿ ದೇವರ ಮೇಲೆ ರೇವಣ್ಣ ಭಾರ!
ಇದೇ ವೇಳೆ ದೈವಭಕ್ತ ರೇವಣ್ಣ, ದೇವಸ್ಥಾನದಿಂದ ತಂದಿದ್ದ ಪ್ರಸಾದವನ್ನ ಮಕ್ಕಳಿಗೆ ನೀಡಿದ್ದಾರೆ. ಪ್ರಸಾದ ನೀಡಿ ದೇವರಿದ್ದಾನೆ, ಎಲ್ಲಾ ಸರಿಹೋಗತ್ತೆ ಅಂತ ಸಮಾಧಾನ ಹೇಳಿದ್ದಾರೆ. ಈ ವೇಳೆ ಭವಾನಿ ಸಹ ಹೊರಗಿನ ವಿದ್ಯಮಾನಗಳು, ಜಾಮೀನು ಅರ್ಜಿ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ ಅಂತ ಗೊತ್ತಾಗಿದೆ.

ವಿಶೇಷ ವರದಿ: ವಿಷ್ಣು ಪ್ರಸಾದ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment