/newsfirstlive-kannada/media/post_attachments/wp-content/uploads/2024/05/HD-DEVEGOWDA-2.jpg)
ಹಾಸನ ಅಶ್ಲೀಲ ವಿಡಿಯೋ ಪ್ರಕರಣವು ದೇವೇಗೌಡರ ಕುಟುಂಭಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಪ್ರಜ್ವಲ್​ ಪೆನ್​ಡ್ರೈವ್​ ಕೇಸ್​​ ಇಡೀ ಕುಟುಂಬವನ್ನ ಮುಜುಗರಕ್ಕೆ ತಳ್ಳಿದೆ. ಕುಟುಂಬದ ಘನತೆ-ಗೌರವಕ್ಕೆ ಧಕ್ಕೆ ತಂದಿದೆ. ಇದೀಗ ಹಿರಿಯ ಪುತ್ರ ಹೆಚ್​.ಡಿ.ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿರೋದು ಬರಸಿಡಿಲಿನಂತೆ ಆಗಿದೆ.
ಪದ್ಮನಾಭ ನಗರದ ಗೌಡರ ನಿವಾಸಕ್ಕೆ ಮಕ್ಕಳ ಭೇಟಿ..!
ಬೆಳಗ್ಗೆಯಿಂದ ಹೆಣ್ಣುಮಕ್ಕಳೇ ಮನೆಯ ಮೇಲ್ವಿಚಾರಣೆ ನಡೆಸ್ತಿದ್ರು. ಸಂಜೆ 6 ಗಂಟೆ 50 ನಿಮಿಷಕ್ಕೆ ಎಸ್​​ಐಟಿ ಮುಂದೆ ರೇವಣ್ಣ ಶರಣಾಗಿದ್ದಾರೆ. ಈ ಬೆನ್ನಲ್ಲೆ ಪದ್ಮನಾಭ ನಗರದ ಗೌಡರ ಮನೆಗೆ ಕುಟುಂಬದ ಎಲ್ಲಾ ಸದಸ್ಯರು ಒಬ್ಬೊಬ್ಬರಾಗೇ ಧಾವಿಸಿದ್ರು. ಮಧ್ಯಾಹ್ನದಿಂದ ತಾಜ್​ವೆಸ್ಟ್​ನಲ್ಲಿದ್ದ ಮಾಜಿ ಸಿಎಂ ಹೆಚ್​ಡಿಕೆ, ನೇರವಾಗಿ ಪದ್ಮನಾಭನಗರ ನಿವಾಸಕ್ಕೆ ಬಂದ್ರು.. ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದ್ರು.. ಕೆಲ ನಿಮಿಷಗಳಲ್ಲಿ ಗೌಡರ ಪುತ್ರಿ, ಡಾ.ಮಂಜುನಾಥ್​ ಪತ್ನಿ ಅನಸೂಯ ಆಗಮಿಸಿದ್ರು. ಇನ್ನಿಬ್ಬರು ಪುತ್ರರಾದ ಡಾ.ಬಾಲಕೃಷ್ಣಗೌಡ, ರಮೇಶ್​​ಗೌಡ ಸಹ ಆಗಮಿಸಿ ತಡರಾತ್ರಿ ವರೆಗೆ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ:ಮಳೆಯಿಂದ ಭಾರೀ ಪ್ರವಾಹ.. 350ಕ್ಕೂ ಹೆಚ್ಚು ಮಂದಿ ಸಾವು, 90 ಜನರು ನಾಪತ್ತೆ
ತಮ್ಮ ಆಪ್ತರ ಜೊತೆಗೆ ಕುಮಾರಸ್ವಾಮಿ ರಹಸ್ಯ ಮಾತುಕತೆ
ಮಧ್ಯಾಹ್ನ ಒಂದು ಗಂಟೆಯಿಂದ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೊಟೇಲ್‌ನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದರು. ಇಡೀ ಬೆಳವಣಿಗೆ ಮೇಲೆ ನಿರಂತರ ಮಾಹಿತಿ ಪಡೆಯುತ್ತಿದ್ದ ಹೆಚ್​ಡಿಕೆ, ಆಪ್ತರ ಜೊತೆಗೆ ರಹಸ್ಯ ಸಭೆ ನಡೆಸಿದ್ರು. ಸಭೆಯಲ್ಲಿ ಜಿ.ಟಿ.ದೇವೇಗೌಡ, ಸಿ.ಎಸ್​​​.ಪುಟ್ಟರಾಜು, ನಿಖಿಲ್ ಕುಮಾರಸ್ವಾಮಿ ಸೇರಿ ಕೆಲ ಆಪ್ತರು ಭಾಗಿಯಾಗಿದ್ದರು.
ಒಟ್ಟಾರೆ, ಪೆನ್​​ಡ್ರೈವ್​ ಪ್ರಕರಣ ದಳದ ಮಾನವನ್ನೇ ಭಂಗ ಮಾಡಿದೆ. ಪಕ್ಷದ ಹಿರಿಯ ನಾಯಕ ರೇವಣ್ಣ, ಕಿಡ್ನಾಪ್​​ ಕೇಸ್​ನಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಲೋಕಸಭೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಯತ್ನಿಸಿದ್ದ ದಳಪತಿಗಳಿಗೆ ಪೆನ್​ಡ್ರೈವ್​ ಪ್ರಕರಣ ಬಹುದೊಡ್ಡ ಆಘಾತ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us