newsfirstkannada.com

ರೇವಣ್ಣ ಅರೆಸ್ಟ್​ ಬೆನ್ನಲ್ಲೇ ತಡರಾತ್ರಿ ದೇವೇಗೌಡರ ನಿವಾಸದಲ್ಲಿ ಏನೆಲ್ಲ ನಡೀತು..? ಕಂಪ್ಲೀಟ್ ಮಾಹಿತಿ..!

Share :

Published May 5, 2024 at 7:00am

    ಇಡೀ ಬೆಳವಣಿಗೆ ಬಗ್ಗೆ ಖಾಸಗಿ ಹೋಟೆಲ್​ನಿಂದ ವೀಕ್ಷಣೆ!

    ತಮ್ಮ ಆಪ್ತರ ಜೊತೆಗೆ ಕುಮಾರಸ್ವಾಮಿ ರಹಸ್ಯ ಮಾತುಕತೆ

    ಕುಮಾರಸ್ವಾಮಿ ನಡೆಸಿದ ಮಾತುಕತೆ ವೇಳೆ ಯಾರೆಲ್ಲ ಬಂದಿದ್ದರು?

ಹಾಸನ ಅಶ್ಲೀಲ ವಿಡಿಯೋ ಪ್ರಕರಣವು ದೇವೇಗೌಡರ ಕುಟುಂಭಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಪ್ರಜ್ವಲ್​ ಪೆನ್​ಡ್ರೈವ್​ ಕೇಸ್​​ ಇಡೀ ಕುಟುಂಬವನ್ನ ಮುಜುಗರಕ್ಕೆ ತಳ್ಳಿದೆ. ಕುಟುಂಬದ ಘನತೆ-ಗೌರವಕ್ಕೆ ಧಕ್ಕೆ ತಂದಿದೆ. ಇದೀಗ ಹಿರಿಯ ಪುತ್ರ ಹೆಚ್​.ಡಿ.ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿರೋದು ಬರಸಿಡಿಲಿನಂತೆ ಆಗಿದೆ.

ಪದ್ಮನಾಭ ನಗರದ ಗೌಡರ ನಿವಾಸಕ್ಕೆ ಮಕ್ಕಳ ಭೇಟಿ..!
ಬೆಳಗ್ಗೆಯಿಂದ ಹೆಣ್ಣುಮಕ್ಕಳೇ ಮನೆಯ ಮೇಲ್ವಿಚಾರಣೆ ನಡೆಸ್ತಿದ್ರು. ಸಂಜೆ 6 ಗಂಟೆ 50 ನಿಮಿಷಕ್ಕೆ ಎಸ್​​ಐಟಿ ಮುಂದೆ ರೇವಣ್ಣ ಶರಣಾಗಿದ್ದಾರೆ. ಈ ಬೆನ್ನಲ್ಲೆ ಪದ್ಮನಾಭ ನಗರದ ಗೌಡರ ಮನೆಗೆ ಕುಟುಂಬದ ಎಲ್ಲಾ ಸದಸ್ಯರು ಒಬ್ಬೊಬ್ಬರಾಗೇ ಧಾವಿಸಿದ್ರು. ಮಧ್ಯಾಹ್ನದಿಂದ ತಾಜ್​ವೆಸ್ಟ್​ನಲ್ಲಿದ್ದ ಮಾಜಿ ಸಿಎಂ ಹೆಚ್​ಡಿಕೆ, ನೇರವಾಗಿ ಪದ್ಮನಾಭನಗರ ನಿವಾಸಕ್ಕೆ ಬಂದ್ರು.. ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದ್ರು.. ಕೆಲ ನಿಮಿಷಗಳಲ್ಲಿ ಗೌಡರ ಪುತ್ರಿ, ಡಾ.ಮಂಜುನಾಥ್​ ಪತ್ನಿ ಅನಸೂಯ ಆಗಮಿಸಿದ್ರು. ಇನ್ನಿಬ್ಬರು ಪುತ್ರರಾದ ಡಾ.ಬಾಲಕೃಷ್ಣಗೌಡ, ರಮೇಶ್​​ಗೌಡ ಸಹ ಆಗಮಿಸಿ ತಡರಾತ್ರಿ ವರೆಗೆ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ:ಮಳೆಯಿಂದ ಭಾರೀ ಪ್ರವಾಹ.. 350ಕ್ಕೂ ಹೆಚ್ಚು ಮಂದಿ ಸಾವು, 90 ಜನರು ನಾಪತ್ತೆ

ಮಧ್ಯಾಹ್ನ ಒಂದು ಗಂಟೆಯಿಂದ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೊಟೇಲ್‌ನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದರು. ಇಡೀ ಬೆಳವಣಿಗೆ ಮೇಲೆ ನಿರಂತರ ಮಾಹಿತಿ ಪಡೆಯುತ್ತಿದ್ದ ಹೆಚ್​ಡಿಕೆ, ಆಪ್ತರ ಜೊತೆಗೆ ರಹಸ್ಯ ಸಭೆ ನಡೆಸಿದ್ರು. ಸಭೆಯಲ್ಲಿ ಜಿ.ಟಿ.ದೇವೇಗೌಡ, ಸಿ.ಎಸ್​​​.ಪುಟ್ಟರಾಜು, ನಿಖಿಲ್ ಕುಮಾರಸ್ವಾಮಿ ಸೇರಿ ಕೆಲ ಆಪ್ತರು ಭಾಗಿಯಾಗಿದ್ದರು.

ಒಟ್ಟಾರೆ, ಪೆನ್​​ಡ್ರೈವ್​ ಪ್ರಕರಣ ದಳದ ಮಾನವನ್ನೇ ಭಂಗ ಮಾಡಿದೆ. ಪಕ್ಷದ ಹಿರಿಯ ನಾಯಕ ರೇವಣ್ಣ, ಕಿಡ್ನಾಪ್​​ ಕೇಸ್​ನಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಲೋಕಸಭೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಯತ್ನಿಸಿದ್ದ ದಳಪತಿಗಳಿಗೆ ಪೆನ್​ಡ್ರೈವ್​ ಪ್ರಕರಣ ಬಹುದೊಡ್ಡ ಆಘಾತ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇವಣ್ಣ ಅರೆಸ್ಟ್​ ಬೆನ್ನಲ್ಲೇ ತಡರಾತ್ರಿ ದೇವೇಗೌಡರ ನಿವಾಸದಲ್ಲಿ ಏನೆಲ್ಲ ನಡೀತು..? ಕಂಪ್ಲೀಟ್ ಮಾಹಿತಿ..!

https://newsfirstlive.com/wp-content/uploads/2024/05/HD-DEVEGOWDA-2.jpg

Load More