/newsfirstlive-kannada/media/post_attachments/wp-content/uploads/2024/07/Hd-Revanna-On-Prajwal-Revanna.jpg)
ವಿಧಾನಸಭೆಯಲ್ಲಿ ತಮ್ಮ ಹೆಸರು ಎತ್ತಿದ್ದಕ್ಕೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಕೆಂಡಾಮಂಡಲರಾಗಿದ್ದಾರೆ. ಸದನದಲ್ಲಿ ಆಡಳಿತ, ಪ್ರತಿಪಕ್ಷಗಳ ನಡುವೆ ವಾಕ್ಸಮರ ನಡೆದಿದ್ದು, ಸಭಾಧ್ಯಕ್ಷರೇ ನನ್ನ ಮಗ ತಪ್ಪು ಮಾಡಿದ್ರೆ ಗಲ್ಲಿಗೆ ಹಾಕಿ. ಆದರೆ ಯಾರೋ ಹೆಣ್ಣು ಮಗಳಿಂದ ಡಿಜಿ ಆಫೀಸಿನಲ್ಲಿ ಕಂಪ್ಲೇಂಟ್ ಬರೆಸುತ್ತಾರೆ. ಅವನೇನು ಡಿಜಿ ಆಗೋಕೆ ಲಾಯಕ್ ಏನ್ರೀ? ಎಂದು ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಜೈಲಿನಲ್ಲಿ ಮಕ್ಕಳನ್ನು ಕಂಡು ರೇವಣ್ಣ ದಂಪತಿ ಕಣ್ಣೀರು.. ಅಪ್ಪ-ಅಮ್ಮನ ಕಂಡು ಭಾವುಕರಾದ ಪ್ರಜ್ವಲ್, ಸೂರಜ್..!
ಸದನದಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು, ವಾಲ್ಮೀಕಿ ಹಗರಣದ ಬಗ್ಗೆ ಎಸ್ಐಟಿ ಮಾಡಿದ್ದಾರೆ. ಆದರೆ ಎಸ್ಐಟಿ ಏನು ಮಾಡುತ್ತಿದೆ. ಹೆಚ್.ಡಿ ರೇವಣ್ಣನವರನ್ನ ಕೂಡಲೇ ಅರೆಸ್ಟ್ ಮಾಡಿದರು. ಆದ್ರೆ ಈ ಪ್ರಕರಣದಲ್ಲಿ ನಿಧಾನ ಏಕೆ? ರೇವಣ್ಣಗೆ ಒಂದು ಕಾನೂನು ಬೇರೆಯವರಿಗೆ ಒಂದಾ ಎಂದು ಆರ್.ಅಶೋಕ್ ಪ್ರಶ್ನೆ ಮಾಡಿದರು.
ಇದನ್ನೂ ಓದಿ: ಟಿವಿ ಇಲ್ಲ, ಕಾಟ್ ಇಲ್ಲ.. ಚಾಪೆ ದಿಂಬು ಬಿಟ್ಟರೆ ಏನಿಲ್ಲ! ಒಂದೇ ರೂಂನಲ್ಲಿ ಪ್ರಜ್ವಲ್ ಮತ್ತು ಸೂರಜ್ ರೇವಣ್ಣ ಟೈಂ ಪಾಸ್
ಈ ವೇಳೆ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಅವರು ರೇವಣ್ಣ ಅವರ ಪ್ರಕರಣ ಇದಕ್ಕಿಂತ ಸಣ್ಣದಾ? ನೂರಾರು ಮಹಿಳೆಯರಿಗೆ ಅನ್ಯಾಯ ಆಗಿದೆಯಲ್ಲ. ಅದು ಇದಕ್ಕಿಂತ ಸಣ್ಣ ಪ್ರಕರಣವೇ ಎಂದು ಪ್ರಜ್ವಲ್ ರೇವಣ್ಣ ಅವರ ಪ್ರಕರಣವನ್ನು ಕೆದಕಿದರು. ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಅವರು ಪ್ರಜ್ವಲ್ ಪ್ರಕರಣ ಇಡೀ ಜಗತ್ತಿಗೆ ಗೊತ್ತಾಗಿದೆ. ಅಧ್ಯಕ್ಷರೇ ಹಣ ಹೋಗುತ್ತೆ ಬರುತ್ತೆ. ಆದರೆ ಹೋಗಿರುವ ಮಾನ ವಾಪಸ್ ಬರುತ್ತಾ? ಎಂದರು. ಆಗ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ವಾಗ್ವಾದ ಜೋರಾಯ್ತು.
ಸದನದಲ್ಲಿ ರೇವಣ್ಣ ರೌದ್ರಾವತಾರ!
ಸದನದಲ್ಲಿ ಆಡಳಿತ, ಪ್ರತಿಪಕ್ಷಗಳ ನಡುವೆ ವಾಕ್ಸಮರ ನಡೆಯುವಾಗ ಮಾಜಿ ಸಚಿವ ಹೆಚ್.ಡಿ ರೇವಣ್ಣ ಎದ್ದು ನಿಂತರು. ಅಧ್ಯಕ್ಷರೇ ನನ್ನ ಹೆಸರು ಪ್ರಸ್ತಾಪ ಆಗಿದೆ ಚರ್ಚೆ ಮಾಡ್ತೇನೆ. ಸಭಾಧ್ಯಕ್ಷರೇ ನನ್ನ ಮಗ ತಪ್ಪು ಮಾಡಿದ್ರೆ ಗಲ್ಲಿಗೆ ಹಾಕಿ. ಆದರೆ ಯಾರೋ ಹೆಣ್ಣು ಮಗಳಿಂದ ದೂರು ಬರೆಸುತ್ತಾರೆ. ಡಿಜಿ ಆಫೀಸ್‌ನಲ್ಲಿ ಕಂಪ್ಲೇಂಟ್ ಬರೆಸುತ್ತಾರೆ. ಅವನೇನು ಡಿಜಿ ಆಗೋಕೆ ಲಾಯಕ್ ಏನ್ರೀ? ಎಂದು ರೇವಣ್ಣ ಅವರು ಆವೇಶದಲ್ಲಿ ಮಾತನಾಡಿದರು. ಆಗ ಆಡಳಿತ ಪಕ್ಷದ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ