newsfirstkannada.com

ಜಾಮೀನು ಸಿಕ್ಕರೂ ಮಾಜಿ ಸಚಿವ ಹೆಚ್.ಡಿ ರೇವಣ್ಣ ಇಂದು ಬಿಡುಗಡೆ ಡೌಟ್; ಕಾರಣವೇನು?

Share :

Published May 13, 2024 at 7:21pm

Update May 13, 2024 at 7:52pm

    ಮೈಸೂರು ಮೂಲದ ಮಹಿಳೆ ಕಿಡ್ನ್ಯಾಪ್ ಕೇಸ್​ಗೆ ಸಿಕ್ತು ಬಿಗ್​ ಟ್ವಿಸ್ಟ್​​

    ಮಾಜಿ ಸಚಿವ ಹೆಚ್.ಡಿ. ರೇವಣ್ಣಗೆ ಷರತ್ತುಬದ್ದ ಜಾಮೀನು ಮಂಜೂರಾಗಿದೆ

    ಷರತ್ತು ಬದ್ಧ ಜಾಮೀನಿನಲ್ಲಿ ಪರ್ಸನಲ್ ಬಾಂಡ್ ಶ್ಯೂರಿಟಿ ನೀಡಲು ಸೂಚನೆ

ಬೆಂಗಳೂರು: ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರಿಗೆ ಕಡೆಗೂ ಬಿಗ್ ರಿಲೀಫ್ ಸಿಕ್ಕಿದೆ. ಸುದೀರ್ಘ ವಾದ, ಪ್ರತಿವಾದವನ್ನು ಆಲಿಸಿದ ಜನಪ್ರತಿನಿಧಿಗಳ ನ್ಯಾಯಾಲಯ ಇಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಹೆಚ್‌.ಡಿ ರೇವಣ್ಣ ಅವರಿಗೆ ಜಾಮೀನು  ಸಿಕ್ಕರೂ ಇಂದು ಬಿಡುಗಡೆಯ ಭಾಗ್ಯವಿಲ್ಲ.

ಇದನ್ನೂ ಓದಿ: BREAKING: ಮಾಜಿ ಸಚಿವ ಹೆಚ್‌.ಡಿ ರೇವಣ್ಣಗೆ ಷರತ್ತುಬದ್ಧ ಜಾಮೀನು

ಇಂದು ಇಡೀ ದಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಪೀಠ ಮಾಜಿ ಸಚಿವ ಹೆಚ್.​ಡಿ ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ನೀಡಿದ್ದಾರೆ. ಷರತ್ತು ಬದ್ಧ ಜಾಮೀನಿನಲ್ಲಿ ಪರ್ಸನಲ್ ಬಾಂಡ್ ಶ್ಯೂರಿಟಿ ನೀಡಲು ಸೂಚನೆ ನೀಡಲಾಗಿದೆ. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ದೇಶ ಬಿಟ್ಟು ಹೋಗದಂತೆ ಸೂಚಿಸಲಾಗಿದೆ.

ಜಾಮೀನು ಮಂಜೂರಾದ ವಿಚಾರದ ಬಗ್ಗೆ ಜೈಲಿನ ಅಧಿಕಾರಿಗಳು ಹೆಚ್​.ಡಿ ರೇವಣ್ಣ ಅವರಿಗೆ ತಿಳಿಸಿದ್ದಾರೆ. ಜಾಮೀನು ಸಿಕ್ಕುತ್ತಿದ್ದಂತೆ ರೇವಣ್ಣ ಅವರು ದೇವರನ್ನು ಪಾರ್ಥಿಸಿದ್ದಾರೆ. ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರ ಬೇಲ್ ಆರ್ಡರ್ ಕಾಪಿಯನ್ನು ವಕೀಲರು ಪಡೆದುಕೊಂಡಿದ್ದಾರೆ. ಇಂದು ಜಾಮೀನು ಮಂಜೂರು ಆದರೂ ಕೂಡ ರೇವಣ್ಣ ಅವರು ಪರಪ್ಪನ ಅಗ್ರಹಾರದಿಂದ ಬಿಡುಗಡೆ ಭಾಗ್ಯವಿಲ್ಲ. ನಾಳೆ 42ನೇ ಜನಪ್ರತಿನಿಧಿ‌ ನ್ಯಾಯಾಲಯದಲ್ಲಿ ಜಾಮೀನು ಪ್ರಕ್ರಿಯೆ ನಡೆಯುತ್ತಿದೆ. ಇಂದು ಜಾಮೀನು ಅರ್ಜಿಯ ಎಲ್ಲಾ ಪ್ರಕ್ರಿಯೆಗಳನ್ನು‌ ಮುಗಿಸಿ ಬಳಿಕ ನಾಳೆ ಬೆಳಗ್ಗೆ ಜಾಮೀನು ಪ್ರತಿ ಜೈಲಿಗೆ ತಲುಪಿಸಬೇಕಾಗುತ್ತದೆ. ಇದಾದ ಬಳಿಕ ಹೆಚ್​.ಡಿ ರೇವಣ್ಣ ಅವರಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಾಮೀನು ಸಿಕ್ಕರೂ ಮಾಜಿ ಸಚಿವ ಹೆಚ್.ಡಿ ರೇವಣ್ಣ ಇಂದು ಬಿಡುಗಡೆ ಡೌಟ್; ಕಾರಣವೇನು?

https://newsfirstlive.com/wp-content/uploads/2024/05/REVANNA-3-1.jpg

Load More