newsfirstkannada.com

BREAKING: ಹೆಚ್.ಡಿ ರೇವಣ್ಣ ಆರೋಗ್ಯದಲ್ಲಿ ಏರುಪೇರು; SIT ವಶದಿಂದ ಜೈಲಿಗಾ? ಆಸ್ಪತ್ರೆಗಾ?

Share :

Published May 5, 2024 at 4:08pm

    ರಾತ್ರಿಯಿಂದ ಸಿಐಡಿ ಕಚೇರಿಯಲ್ಲಿರುವ ಹೆಚ್.ಡಿ ರೇವಣ್ಣಗೆ ಮೆಡಿಕಲ್ ಟೆಸ್ಟ್

    ಇಂದು ಇಸಿಜಿಯಲ್ಲಿ ಜಾಸ್ತಿ ವ್ಯತ್ಯಾಸ ಕಂಡು ಬಂದಲ್ಲಿ ಆಸ್ಪತ್ರೆಗೆ ದಾಖಲು

    ನ್ಯಾಯಾಧೀಶರ ಮುಂದೆ ಹಾಜರುಪಡಿಸೋ ಮುನ್ನ ರೇವಣ್ಣಗೆ ವೈದ್ಯಕೀಯ ಪರೀಕ್ಷೆ

ಬೆಂಗಳೂರು: ಮಹಿಳೆಯ ಕಿಡ್ನಾಪ್‌ ಕೇಸ್‌ನಲ್ಲಿ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರ ಬಂಧನವಾಗಿದೆ. ಬಂಧನದ ಬಳಿಕ ಹೆಚ್‌.ಡಿ ರೇವಣ್ಣ ಅವರ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ನಿನ್ನೆ ದೇವೇಗೌಡರ ಮನೆಯಲ್ಲಿ ರೇವಣ್ಣ ಅವರನ್ನು ವಶಕ್ಕೆ ಪಡೆಿದಿದ್ದ ಎಸ್‌ಐಟಿ, ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿತ್ತು. ನಿನ್ನೆ ರೇವಣ್ಣ ಅವರ ಬಿಪಿ, ಶುಗರ್ ಲೆವಲ್ ನಾರ್ಮಲ್ ಇತ್ತು. ಆದರೆ ಇಸಿಜಿಯಲ್ಲಿ ವ್ಯತ್ಯಾಸ ಕಂಡು ಬಂದಿತ್ತು.

ನಿನ್ನೆ ರಾತ್ರಿಯಿಂದ ಸಿಐಡಿ ಕಚೇರಿಯಲ್ಲಿರುವ ಹೆಚ್.ಡಿ ರೇವಣ್ಣ ಅವರಿಗೆ ಸದ್ಯ ಆರೋಗ್ಯ ಕೈಕೊಟ್ಟಿದೆ. ಇವತ್ತು ಮತ್ತೆ ರೇವಣ್ಣ ಅವರಿಗೆ ಎಸ್‌ಐಟಿ ಅಧಿಕಾರಿಗಳು ಇಸಿಜಿ ಮಾಡಿಸಲಿದ್ದಾರೆ. ಇಸಿಜಿಯಲ್ಲಿ ಜಾಸ್ತಿ ವ್ಯತ್ಯಾಸ ಕಂಡು ಬಂದಲ್ಲಿ ಹೆಚ್.ಡಿ ರೇವಣ್ಣ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸೋ ಸಾಧ್ಯತೆ ಇದೆ.

ಹೆಚ್‌.ಡಿ ರೇವಣ್ಣ ಅವರನ್ನು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕಿದೆ. ಇದಕ್ಕೂ ಮುನ್ನ ಮತ್ತೊಮ್ಮೆ ರೇವಣ್ಣ ಅವರ ಮೆಡಿಕಲ್ ಚೆಕಪ್‌ ಮಾಡಲಾಗುತ್ತಿದೆ. ನಿನ್ನೆ ಬೌರಿಂಗ್ ಆಸ್ಪತ್ರೆಯ ವೈದ್ಯರು ಪರೀಕ್ಷೆ ಮಾಡಿ ಹೃದಯ ತಜ್ಞರು ಮತ್ತು ಗ್ಯಾಸ್ಟ್ರೋಲಾಜಿಸ್ಟ್ ತಜ್ಞರು ಸಂಪರ್ಕ ಮಾಡುವಂತೆ ತಿಳಿಸಿದ್ದರು.

ಇದನ್ನೂ ಓದಿ: ಶರಣಾಗತಿ ಒಂದೇ ಉಳಿದಿರೋ ದಾರಿ? ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬರಲು ರೆಡಿ; ಯಾವಾಗ? 

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಸಿಜಿ ಮಾಡಿದ ಬಳಿಕ ಅಲ್ಲಿನ ನುರಿತ ವೈದ್ಯರ ಸಲಹೆ ಪಡೆಯುವಂತೆ ಸೂಚಿಸಲಾಗಿದೆ. ಬೌರಿಂಗ್ ಆಸ್ಪತ್ರೆ ವೈದ್ಯರ ಸಲಹೆಯ ಮೇರೆಗೆ ರೇವಣ್ಣ ಅವರನ್ನು ಇಂದು ನ್ಯಾಯಧೀಶರ ಮುಂದೆ ಹಾಜರು ಪಡಿಸೋ ಮುನ್ನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ. ಒಂದು ವೇಳೆ ಆರೋಗ್ಯದಲ್ಲಿ ಏರುಪೇರು ಕಂಡು ಬಂದರೆ ಜೈಲಿನ ಬದಲು ರೇವಣ್ಣ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಹೆಚ್.ಡಿ ರೇವಣ್ಣ ಆರೋಗ್ಯದಲ್ಲಿ ಏರುಪೇರು; SIT ವಶದಿಂದ ಜೈಲಿಗಾ? ಆಸ್ಪತ್ರೆಗಾ?

https://newsfirstlive.com/wp-content/uploads/2024/05/REVANNA_NEW.jpg

Load More