/newsfirstlive-kannada/media/post_attachments/wp-content/uploads/2025/07/prajwal.jpg)
ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಪ್ರಜ್ವಲ್ ರೇವಣ್ಣ ಜೈಲುವಾಸ ಅನುಭವಿಸ್ತಿದ್ದಾರೆ. ತಂದೆ ಹೆಚ್.ಡಿ. ರೇವಣ್ಣ ತಮ್ಮ ಪುತ್ರನಿಗಾಗಿ ಶಪಥವೊಂದನ್ನ ಮಾಡಿದ್ದಾರೆ. ತಮ್ಮಿಷ್ಟದ ಖಾದ್ಯವನ್ನ ಬಿಟ್ಟು ಮಗನ ಬರುವಿಕೆಗೆ ಕಾಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹೆಚ್.ಡಿ. ರೇವಣ್ಣ ಅಪಾರ ದೈವಭಕ್ತ ಗಳಿಗೆ ನೋಡಿ ಹೆಜ್ಜೆ ಇಡುವಂತಹ ವ್ಯಕ್ತಿ. ಆದ್ರೆ, ಪುತ್ರರಿಗೆ ಬಂದಿರೋ ಸಂಕಷ್ಟ ರೇವಣ್ಣನನ್ನ ಕುಗ್ಗಿಸಿಬಿಟ್ಟಿದೆ. ಇದೀಗ ಲೈಂಗಿಕ ದೌರ್ಜನ್ಯ ಆರೋಪ ಹೊತ್ತು ಪರಪ್ಪನ ಅಗ್ರಹಾರ ವಾಸಿಯಾಗಿರೋ ಪುತ್ರನಿಗಾಗಿ ಮಾಜಿ ಸಚಿವರು ಹರಕೆ ಹೊತ್ತಿದ್ದಾರೆ. ಪ್ರಜ್ವಲ್ ರೇವಣ್ಣನ ಬಿಡುಗಡೆಗಾಗಿ ದೇವರ ಬಳಿ ವಿಶಿಷ್ಟ ಸಂಕಲ್ಪ ಮಾಡಿದ್ದಾರೆ.
ಇದನ್ನೂ ಓದಿ:ಕಾಲೇಜು ಉಪನ್ಯಾಸಕರಿಂದ ಬೆಂಗಳೂರಲ್ಲಿ ವಿದ್ಯಾರ್ಥಿನಿ ಮೇಲೆ ರೇಪ್.. ಮೂವರು ಕೀಚಕರು ಅರೆಸ್ಟ್..!
ಒಂದು ಕೇಸ್‌ನಲ್ಲಿ ಜಾಮೀನು ಸಿಕ್ರೆ ಮತ್ತೊಂದು ಕೇಸ್‌ನಲ್ಲಿ ಸಂಕಷ್ಟ ತಲೆದೋರುತ್ತಲೇ ಇದೆ. ಹೀಗಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಪುತ್ರನಿಗಾಗಿ ದೇವರ ಹರಕೆ ಹೊತ್ತಿದ್ದಾರೆ. ತಮ್ಮ ಇಷ್ಟದ ಖಾದ್ಯವನ್ನ ಪುತ್ರನಿಗಾಗಿ ತ್ಯಾಗ ಮಾಡಿದ್ದಾರೆ. ಪುತ್ರನ ಬಿಡುಗಡೆಗಾಗಿ ಹೆಚ್.ಡಿ.ರೇವಣ್ಣ ದೇವರ ಮುಂದೆ ಸಂಕಲ್ಪ ಮಾಡಿದ್ದಾರೆ. ಪ್ರಜ್ವಲ್ ಬಿಡುಗಡೆ ಆಗುವವರೆಗೆ ನಾನ್ ವೆಜ್ ತಿನ್ನೋದಿಲ್ಲ ಅಂತ ಹರಕೆ ಹೊತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಮಾಂಸಹಾರ ತ್ಯಜಿಸಿರೋ ಬಗ್ಗೆ ನ್ಯೂಸ್‌ಫಸ್ಟ್‌ಗೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮಾಹಿತಿ ನೀಡಿದ್ದಾರೆ.
ಮನೆ ಕೆಲಸದಾಕೆಯನ್ನು ಲೈಂಗಿಕ ದೌರ್ಜನ್ಯ ಆರೋಪ ಹೊತ್ತು ಪ್ರಜ್ವಲ್ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ರು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹೋಗುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಹೀಗಾಗಿ ಜಾಮೀನು ಕೋರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಸರ್ಕಾರಿ ವಕೀಲರಿಗೆ ನೋಟಿಸ್ ನೀಡಿದೆ. ಅಲ್ಲದೇ ಕೆಲವೊಂದು ಸರ್ಟಿಫೈ ದಾಖಲೆಗಳನ್ನು ಸಲ್ಲಿಸಲು ನ್ಯಾಯಾಲಯ ಆಕ್ಷೇಪಣೆ ಎತ್ತಿದೆ. ಮುಂದಿನ ವಿಚಾರಣೆ ವೇಳೆ ದಾಖಲೆಗಳನ್ನು ಸಲ್ಲಿಸುವುದಾಗಿ ಪ್ರಜ್ವಲ್ ಪರ ವಕೀಲರು ಮಾಹಿತಿ ನೀಡಿದ್ದಾರೆ. ಜಾಮೀನು ಅರ್ಜಿ ವಿಚಾರಣೆ ಜುಲೈ 18ಕ್ಕೆ ಮುಂದೂಡಿಕೆಯಾಗಿದೆ.
ಸದ್ಯ 10 ದಿನದಲ್ಲೇ ಅರ್ಜಿಯ ಇತ್ಯರ್ಥಕ್ಕೆ ಹೈಕೋರ್ಟ್ ಕೆಳಹಂತದ ನ್ಯಾಯಾಲಯಕ್ಕೆ ಡೆಡ್‌ಲೈನ್ ನೀಡಿದೆ. ಇದೆಲ್ಲದರ ಮಧ್ಯೆ ಪ್ರಜ್ವಲ್ ಬರುವಿಕೆಯ ನಿರೀಕ್ಷೆಯಲ್ಲಿ ರೇವಣ್ಣ ಇದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ