newsfirstkannada.com

BREAKING: ಕಿಡ್ನ್ಯಾಪ್​ ಆಗಿದ್ದ ಸಂತ್ರಸ್ತೆ ಕೊನೆಗೂ ರಕ್ಷಣೆ; HD ರೇವಣ್ಣಗೆ ಜೈಲು ಶಿಕ್ಷೆ ಪಕ್ಕಾನಾ?

Share :

Published May 4, 2024 at 5:42pm

Update May 4, 2024 at 6:14pm

    ಜೆಡಿಎಸ್​ ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣ ಕೇಸ್​​ಗೆ ಟ್ವಿಸ್ಟ್​​

    ಸಂಕಷ್ಟ ಎದುರಿಸುತ್ತಿರುವ ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಶಾಕ್​​

    ಕೆ.ಆರ್​ ನಗರದಲ್ಲಿ ಕಿಡ್ನ್ಯಾಪ್​ ಆಗಿದ್ದ ಸಂತ್ರಸ್ತೆ ಪೊಲೀಸರಿಂದ ರಕ್ಷಣೆ

ಮೈಸೂರು: ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣ ಕೇಸಲ್ಲಿ ಸಂಕಷ್ಟ ಎದುರಿಸುತ್ತಿರುವ ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಿಡ್ನ್ಯಾಪ್​ ಆಗಿದ್ದ ಸಂತ್ರಸ್ತೆ ಕೊನೆಗೂ ಪತ್ತೆಯಾಗಿದ್ದಾಳೆ. ಎಸ್​ಐಟಿ ಅಧಿಕಾರಿಗಳೇ ಸಂತ್ರಸ್ತೆಯನ್ನು ರಕ್ಷಣೆ ಮಾಡಿ ಕರೆ ತಂದಿದ್ದಾರೆ.

ಹುಣಸೂರು ತಾಲೂಕಿನ ಕಾಳೇನಹಳ್ಳಿಯಲ್ಲಿ ರೇವಣ್ಣ ಆಪ್ತ ಸಹಾಯಕ ರಾಜಶೇಖರ್​ ಅನ್ನೋರ ತೋಟದ ಮನೆಯಲ್ಲಿ ಸಂತ್ರಸ್ತೆ ಇದ್ದಳು. ರೇವಣ್ಣ ಸಂಬಂಧಿ ಸತೀಶ್​ ಬಾಬು ಅನ್ನೋ ಆರೋಪಿ ಏಪ್ರಿಲ್​​ 29ನೇ ತಾರೀಕು ಸಂತ್ರಸ್ತೆಯನ್ನು ಕರೆದುಕೊಂಡು ಹೋಗಿದ್ದ. ಕರೆದುಕೊಂಡು ಹೋಗಿ ಸಂತ್ರಸ್ತೆಯನ್ನು ರಾಜಶೇಖರ್​ ತೋಟದ ಮನೆಯಲ್ಲೇ ಇರಿಸಲಾಗಿತ್ತು. ಈಗ ಸಂತ್ರಸ್ತೆ ರಕ್ಷಣೆಯಾಗಿದೆ. ಎಸ್​ಐಟಿ ಅಧಿಕಾರಿಗಳಿಂದಲೇ ಸಂತ್ರಸ್ತೆ ರಕ್ಷಣೆಯಾಗಿದೆ.

ಏನಿದು ಕೇಸ್​​..?

ತನ್ನ ತಾಯಿಯನ್ನು ಕಿಡ್ನ್ಯಾಪ್​ ಮಾಡಲಾಗಿದೆ ಎಂದು ಹೆಚ್​ಡಿ ರೇವಣ್ಣ ವಿರುದ್ಧ ವ್ಯಕ್ತಿಯೋರ್ವ ಕೇಸ್​ ಮಾಡಿದ್ದ. ಬಿಡುಗಡೆಯಾದ ಅಶ್ಲೀಲ ವಿಡಿಯೊದಲ್ಲಿ ನನ್ನ ತಾಯಿ ಚಿತ್ರವೂ ಇತ್ತು. ಬಳಿಕ ಅವರು ಕಣ್ಮರೆಯಾಗಿದ್ದಾರೆ ಎಂದು ಮೈಸೂರಿನ ಕೆಆರ್​​ ನಗರ ಠಾಣೆಯಲ್ಲಿ ದೂರು ನೀಡಿದ್ರು. ನಾಪತ್ತೆಯಾಗಿರುವ ಮಹಿಳೆ ಪುತ್ರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದಾಗಿದ್ದರು.

ಅಶ್ಲೀಲ ವಿಡಿಯೋ ವಿವಾದದಲ್ಲಿ ನನ್ನ ತಾಯಿಯ ಚಿತ್ರ ಇದೆ. ವಿಡಿಯೋಗಳು ರಿಲೀಸಾದ ಬಳಿಕ ತಾಯಿ ದಿಢೀರ್ ನಾಪತ್ತೆಯಾಗಿದ್ರು ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಅನ್ವಯ ಹೆಚ್​ಡಿ ರೇವಣ್ಣ ವಿರುದ್ಧ ಸೆಕ್ಷನ್ 364/A 365 ಹಾಗೂ 34 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ರೇವಣ್ಣ ಎ1 ಮತ್ತು ಸತೀಶ್ ಬಾಬು ಎ2 ಎಂದೂ ನಮೂದಿಸಲಾಗಿದೆ.

BREAKING: ಕಿಡ್ನ್ಯಾಪ್​ ಆಗಿದ್ದ ಸಂತ್ರಸ್ತೆ ಕೊನೆಗೂ ರಕ್ಷಣೆ; HD ರೇವಣ್ಣಗೆ ಜೈಲು ಶಿಕ್ಷೆ ಪಕ್ಕಾನಾ?

https://newsfirstlive.com/wp-content/uploads/2024/05/revanna1.jpg

Load More