newsfirstkannada.com

ಸಂತ್ರಸ್ತೆ ಹೇಳಿಕೆಗೆ SIT ಕಕ್ಕಾಬಿಕ್ಕಿ.. ರೇವಣ್ಣ ಇವತ್ತು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ?​​

Share :

Published May 5, 2024 at 7:18am

    ಹಾಸನ ಅಶ್ಲೀಲ ವಿಡಿಯೋ ಕೇಸ್​​ನಲ್ಲಿ ರೇವಣ್ಣಗೆ ಮುಗಿಯದ ಸಂಕಷ್ಟ

    ಅಪಹರಣ ಆಗಿದ್ದರು ಎನ್ನಲಾದ ಸಂತ್ರಸ್ತೆ ರಕ್ಷಣೆ! ಆಕೆ ಎಲ್ಲಿದ್ದಳು ಗೊತ್ತಾ?

    ಮಹಿಳಾ ಸಾಂತ್ವನ ಕೇಂದ್ರಕ್ಕೆ ಮಹಿಳೆಯನ್ನ ಶಿಫ್ಟ್ ಮಾಡಲಾಗಿದೆ

ಬಂಧನದಲ್ಲಿರುವ ಮಾಜಿ ಸಚಿವ ರೇವಣ್ಣ ಅವರನ್ನ ಇವತ್ತು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದ್ದಾರೆ. ಅಲ್ಲದೇ, ಒಂದು ದಿನದ ಮಟ್ಟಿಗೆ ಪರಪ್ಪನ ಅಗ್ರಹಾರ ಜೈಲು ಸೇರುವ ಸಾಧ್ಯತೆ ಇದೆ. ಇನ್ನೊಂದ್ಕಡೆ ರೆಗ್ಯೂಲರ್ ಬೇಲ್​ಗಾಗಿ ನಾಳೆ ರೇವಣ್ಣ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಪುತ್ರ ಪ್ರಜ್ವಲ್​​​ ತುಳಿದ ರಾಂಗ್​​ ರೂಟ್​​ಗೆ ರೇವಣ್ಣ ಜೈಲ್​​ ಪರೇಡ್​​ ನಡೆಸಬೇಕಾಗಿದೆ. ಕೆ.ಆರ್​​​. ನಗರ ಕಿಡ್ನಾಪ್​​​ ಕೇಸ್​​ನಲ್ಲಿ ಜಾಮೀನು ಅರ್ಜಿ ವಜಾ ಆಗ್ತಿದ್ದಂತೆ ರೇವಣ್ಣ ಬಂಧನ ಖಚಿತ ಆಗೋಯ್ತು. ಮಧ್ಯಾಹ್ನದಿಂದ ಪದ್ಮನಾಭನಗರದ ಗೌಡರ ನಿವಾಸದಲ್ಲಿ ರೇವಣ್ಣ ಇದ್ದಾರೆ ಅನ್ನೋ ಕ್ಲ್ಯೂ ಎಸ್​​ಐಟಿಗೆ ಸಿಕ್ಕಿದೆ. ಕ್ಲ್ಯೂ ಸಿಗ್ತಿದ್ದಂತೆ ಎಸ್​ಐಟಿ ತಂಡ ಗೌಡರ ಮನೆಯ ಡೋರ್​​ ಬಡಿದಿದೆ. ಮುಂದಾಗಿದ್ದು ಮಾಜಿ ಸಚಿವ, ಮಾಜಿ ಪ್ರಧಾನಿಯ ಹಿರಿಯ ಪುತ್ರ ರೇವಣ್ಣ ಬಂಧನ.

ಪರಪ್ಪನ ಅಗ್ರಹಾರ ಜೈಲು

ನಿನ್ನೆ ಶನಿವಾರ ಕೋರ್ಟ್ ಸಮಯ ಮುಕ್ತಾಯ ಆಗಿದ್ರಿಂದ ಇವತ್ತು ಜಡ್ಜ್​ ಹೋಂ ಆಫೀಸ್​ಗೆ ಹಾಜರು ಮಾಡ್ಲಿದ್ದಾರೆ. ಈ ರೀತಿ ಮಾಡಿದಾಗ ಜಡ್ಜ್​ಗೆ ಪೊಲೀಸ್​​ ಕಸ್ಟಡಿ ನೀಡುವ ಅವಕಾಶವಿಲ್ಲ. ಹೀಗಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಿದ್ದಾರೆ. ಬಳಿಕ ಪರಪ್ಪನ ಅಗ್ರಹಾರ ಜೈಲಿಗೆ ಒಂದು ದಿನದ ಮಟ್ಟಿಗೆ ರೇವಣ್ಣ ಶಿಫ್ಟ್​ ಆಗಲಿದ್ದಾರೆ. ನಾಳೆ ಸೋಮವಾರ ಅರ್ಜಿ ಸಲ್ಲಿಸಿ SIT ಕಸ್ಟಡಿಗೆ ಕೇಳಲಿದ್ದಾರೆ.

ನಾಳೆ ರೆಗ್ಯೂಲರ್​​ ಬೇಲ್​ ಅರ್ಜಿ ಸಲ್ಲಿಕೆ

ಅಪಹರಣ ಪ್ರಕರಣದಲ್ಲಿ ರೇವಣ್ಣಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಮಧ್ಯಂತರ ನಿರೀಕ್ಷಣಾ ಜಾಮೀನು ವಜಾಗೊಳಿಸಿ ಅರ್ಜಿಯನ್ನ ಸೋಮವಾರಕ್ಕೆ ಮುಂದೂಡಿತ್ತು. ಇದೀಗ ರೆಗ್ಯೂಲರ್ ಬೇಲ್​ಗೆ ರೇವಣ್ಣ ಪರ ವಕೀಲರು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಸೋಮವಾರ ರೆಗ್ಯೂಲರ್ ಹಾಜರು ಪಡಿಸಲಿದ್ದಾರೆ.

ಮಹಿಳೆ ಹೇಳಿಕೆಗೆ ಕಕ್ಕಾಬಿಕ್ಕಿ ಆಯ್ತಾ ಎಸ್​​ಐಟಿ!?

ಕೆ.ಆರ್.ನಗರ ಠಾಣಾ ಕೇಸ್ ಸದ್ಯ ಎಸ್ಐಟಿಗೆ ವರ್ಗಾವಣೆ ಆಗಿದೆ. ಇತ್ತ, ಮೈಸೂರಿನ ಹುಣಸೂರಿನ ಫಾರ್ಮ್‌ಹೌಸ್​ನಲ್ಲಿದ್ದ ಸಂತ್ರಸ್ತ ಮಹಿಳೆಯನ್ನ ಅಧಿಕಾರಿಗಳು ರಕ್ಷಿಸಿದ್ದಾರೆ. ರೇವಣ್ಣ ಆಪ್ತ ರಾಜಶೇಖರ್‌ಗೆ ಸೇರಿದ ತೋಟದ ಮನೆ ಇದಾಗಿದೆ ಅಂತ ಗೊತ್ತಾಗಿದೆ. ಆದ್ರೆ, ಅಕ್ರಮವಾಗಿ ಫಾರ್ಮ್​ಹೌಸ್‌ನಲ್ಲಿ ಇರಿಸಿದ್ದ ಆರೋಪವನ್ನ ಸಂತ್ರಸ್ತ ಮಹಿಳೆ ತಳ್ಳಿಹಾಕಿದ್ದಾರೆ ಅಂತ ಗೊತ್ತಾಗಿದೆ. ಕಿಡ್ನಾಪ್​​​ ಮಾಡಿಲ್ಲ ಎಂಬ ಹೇಳಿಕೆ ನೀಡ್ತಿದ್ದು ಗೌಪ್ಯ ಸ್ಥಳದಲ್ಲಿ ಮಹಿಳೆಯ ವಿಚಾರಣೆ ನಡೆದಿದೆ.

ಇದನ್ನೂ ಓದಿ: ರೇವಣ್ಣ ಅರೆಸ್ಟ್.. ಭಾರತದತ್ತ ಪ್ರಜ್ವಲ್​ ಮುಖ.. ಇಂದು​ ಬೆಂಗಳೂರಿಗೆ ​ರಿಟರ್ನ್​? 

ಇನ್ನು, ಹುಣಸೂರಿನ ಫಾರ್ಮ್​​ಹೌಸ್​​ನಲ್ಲಿ ರಕ್ಷಣೆ ಮಾಡಲಾಗಿದ್ದ ಮಹಿಳೆಯನ್ನ ಬೆಂಗಳೂರಿಗೆ ಕರೆತರಲಾಗಿದೆ. ಮೈಸೂರಿನಿಂದ ನೇರವಾಗಿ ಬೆಂಗಳೂರಿನ ಸಿಐಡಿ ಕಚೇರಿಗೆ ಮಹಿಳೆಯನ್ನ ಎಸ್​​ಐಟಿ ಅಧಿಕಾರಿಗಳು ಕರೆತಂದಿದ್ದಾರೆ. ಬಳಿಕ ಮಹಿಳಾ ಸಾಂತ್ವನ ಕೇಂದ್ರಕ್ಕೆ ಮಹಿಳೆಯನ್ನ ಶಿಫ್ಟ್​​ ಮಾಡಲಾಗಿದೆ. ಘಟನೆಗಳಿಂದ ಮಹಿಳೆ ಗಾಬರಿಗೊಂಡಿರೋದು ಮೇಲ್ನೋಟಕ್ಕೆ ಕಾಣಿಸ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಂತ್ರಸ್ತೆ ಹೇಳಿಕೆಗೆ SIT ಕಕ್ಕಾಬಿಕ್ಕಿ.. ರೇವಣ್ಣ ಇವತ್ತು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ?​​

https://newsfirstlive.com/wp-content/uploads/2024/05/REVANNA_NEW.jpg

Load More