Advertisment

ಎಸ್​ಐಟಿ ಬಂಧನದ ಬಳಿಕ ರೇವಣ್ಣ ಫಸ್ಟ್ ರಿಯಾಕ್ಷನ್​.. ಭಾರೀ ಆಕ್ರೋಶ..!

author-image
Ganesh
Updated On
BIG BREAKING: ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಜೈಲು ಪಾಲು
Advertisment
  • ರೇವಣ್ಣಗೆ ಕಿಡ್ನಾಪ್​, ಲೈಂಗಿಕ ದೌರ್ಜನ್ಯ ಆರೋಪದ ಮಸಿ!
  • ‘ಇದೊಂದು ರಾಜಕೀಯ ಷಡ್ಯಂತ್ರ’ ಎಂದ ರೇವಣ್ಣ..!
  • ಮಾಜಿ ಸಚಿವರನ್ನ ನಾಲ್ಕು ದಿನಗಳ ಕಸ್ಟಡಿ ಪಡೆದ ಎಸ್​​ಐಟಿ!

ಪ್ರಜ್ವಲ್ ಕೇಸ್‌ನ ಸಂತ್ರಸ್ತ ಮಹಿಳೆಯ ಕಿಡ್ನಾಪ್ ಆರೋಪ ಹೊತ್ತಿರುವ ಮಾಜಿ ಸಚಿವ ರೇವಣ್ಣಗೆ ಈಗ ಕಷ್ಟದ ಕಾಲ ಎದುರಾಗಿದೆ. ಮೊನ್ನೆ ಎಸ್‌ಐಟಿಗೆ ಶರಣಾಗಿದ್ದ ರೇವಣ್ಣರನ್ನು 4 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ, ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಅಂತ ಮೊದಲ ಸಲ ರೇವಣ್ಣ ಗುಡುಗಿದ್ದಾರೆ. ಇನ್ನ, ಇವತ್ತು ಕೆ.ಆರ್​​.ನಗರ, ಹುಣಸೂರಿಗೆ ಮಹಜರಿಗಾಗಿ ಕರೆದೊಯ್ಯುವ ಸಾಧ್ಯತೆ ಇದೆ.

Advertisment

ಮಾಜಿ ಸಚಿವರನ್ನ ನಾಲ್ಕು ದಿನಗಳ ಕಸ್ಟಡಿ ಪಡೆದ ಎಸ್​​ಐಟಿ!
ಮಹಿಳೆ ಕಿಡ್ನಾಪ್‌ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹೆಚ್‌.ಡಿ. ರೇವಣ್ಣ ಎಸ್​​ಐಟಿ ಸಂಕೋಲೆಗೆ ಸಿಲುಕಿದ್ದಾರೆ. ಮೊನ್ನೆ ವಶಕ್ಕೆ ಪಡೆದ ಎಸ್​​ಐಟಿ ನಿನ್ನೆ ಸಂಜೆ ನಾಲ್ಕು ದಿನಗಳ ಕಾಲ ವಿಚಾರಣೆಗಾಗಿ ತನ್ನ ಕಸ್ಟಡಿಗೆ ಪಡೆದಿದೆ.
ಸಂಜೆ ಬೆಂಗಳೂರಿನ ಕೋರಮಂಗಲದ 17ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ರೇವಣ್ಣರನ್ನ ಹಾಜರು ಪಡಿಸಲಾಯ್ತು. ಎಸ್‌ಐಟಿ ಪರ ವಕೀಲರು, ಹೆಚ್ಚಿನ ವಿಚಾರಣೆಗಾಗಿ ರೇವಣ್ಣ ಅವರನ್ನ ಪೊಲೀಸ್‌ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರಲ್ಲಿ ಮನವಿ ಮಾಡಿದ್ರು. ಮನವಿ ಪುರಸ್ಕರಿಸಿದ ನ್ಯಾಯಾಧೀಶ ರವೀಂದ್ರ ಕಟ್ಟಿಮನಿ, ಆರೋಪಿಯನ್ನ ಮೇ 8ರ ವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ರು.

ಇದನ್ನೂ ಓದಿ:ಮ್ಯಾಕ್ಸ್​ವೆಲ್ ವಿರುದ್ಧ ಭಾರೀ ಆಕ್ರೋಶ.. ಟ್ವಿಟರ್​ನಲ್ಲಿ ಪೋಲ್ ಹಾಕಿ ಅಭಿಯಾನ..!

ನ್ಯಾಯಾಧೀಶರ ಮುಂದೆ ಹಾಜರ್‌ಗೆ ಮುನ್ನ ರೇವಣ್ಣರ ಆರೋಗ್ಯ ತಪಾಸಣೆ ನಡೆಸಲಾಗಿದೆ. ನಗರದ ಬೌರಿಂಗ್‌ ಆಸ್ಪತ್ರೆಯಲ್ಲಿ ದಾಖಲಿಸಿ ಸಾಮಾನ್ಯ ಆರೋಗ್ಯ ಪರೀಕ್ಷೆಗಳನ್ನ ಮಾಡಲಾಯಿತು. ಸದ್ಯ ರೇವಣ್ಣ ಆರೋಗ್ಯ ಸ್ಥಿರವಾಗಿದೆ ಎಂದು ಗೊತ್ತಾಗಿದೆ.

Advertisment

‘ಪುರಾವೆಗಳು ಇಲ್ಲದೆ ನನ್ನ ಬಂಧನ ಮಾಡಲಾಗಿದೆ’
ವೈದ್ಯಕೀಯ ತಪಾಸಣೆಗಾಗಿ ಬೌರಿಂಗ್‌ ಆಸ್ಪತ್ರೆಗೆ ಕರೆತರಲಾಗಿತ್ತು.. ಈ ವೇಳೆ ಇಡೀ ಬೆಳವಣಿಗೆ ಬಗ್ಗೆ ರೇವಣ್ಣ ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.. ಯಾವುದೇ ಪುರಾವೆ ಇಲ್ಲದೇ ದುರುದ್ದೇಶದಿಂದ ನನ್ನ ಮೇಲೆ ಕೇಸ್‌ ದಾಖಲಿಸಲಾಗಿದೆ. ಇದು ಸುಳ್ಳು ಪ್ರಕರಣ, ರಾಜಕೀಯ ಷಡ್ಯಂತ್ರ ಅಂತ ಆರೋಪಿಸಿದ್ರು. ಮುಂದೆ ಎಲ್ಲಾ ಸತ್ಯ ಹೊರಬರಲಿದೆ ಅಂತ ಕಿಡಿಕಾರಿದ್ರು.

4 ದಿನಗಳ ಕಸ್ಟಡಿ ಪಡೆದ ಎಸ್​ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ಕೈಗೊಂಡಿದ್ದಾರೆ. 11 ಗಂಟೆ ಬಳಿಕ ಹಾಸನ, ಕೆ.ಆರ್​.ನಗರ, ಅಥವಾ ಹುಣಸೂರಿಗೆ ರೇವಣ್ಣರನ್ನ ಅಧಿಕಾರಿಗಳು ಕರೆದೊಯ್ಯುವ ಸಾಧ್ಯತೆ ಇದೆ. ಮಹಜರು ಪ್ರಕ್ರಿಯೆಗೆ ಕೆ.ಆರ್.ನಗರಕ್ಕೆ ಕರೆದೊಯ್ಯಬೇಕಾಗಿದೆ ಅಂತ ನ್ಯಾಯಾಧೀಶರೆದುರು ಎಸ್ಐಟಿ ಮನವಿ ಮಾಡಿತ್ತು. ಹೀಗಾಗಿ ಸಂತ್ರಸ್ತ ಮಹಿಳೆಯನ್ನು ಪಿಕ್ ಮಾಡಿದ ಸ್ಥಳ ಹಾಗೂ ಕೂಡಿಟ್ಟ ಸ್ಥಳದಲ್ಲಿ ಮಹಜರು ನಡೆಯೋ ಸಾಧ್ಯತೆ ಇದೆ. ಒಟ್ಟಾರೆ, ಪಕ್ಷದ ಸಂಪನ್ಮೂಲವಾದ ರೇವಣ್ಣ, ಬಂಧನ ಮಾತ್ರ ಜೆಡಿಎಸ್​​ಗೆ ಆಘಾತ ತಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment