newsfirstkannada.com

ಮಹಿಳೆ ಕಿಡ್ನಾಪ್ ಕೇಸ್‌.. ಮತ್ತೆ ಕೋರ್ಟ್ ಮೆಟ್ಟಿಲೇರಿದ ಹೆಚ್‌.ಡಿ ರೇವಣ್ಣ; ಜಾಮೀನು ಸಿಗುತ್ತಾ?

Share :

Published May 6, 2024 at 4:45pm

    ಜಾಮೀನಿಗಾಗಿ ಮತ್ತೆ ಕೋರ್ಟ್ ಮೆಟ್ಟಿಲೇರಿದ ಹೆಚ್‌.ಡಿ ರೇವಣ್ಣ

    ಮಹಿಳೆಯ ಕಿಡ್ನಾಪ್ ಕೇಸ್‌ನಲ್ಲಿ ಮೇ 8ರವರೆಗೂ ಎಸ್‌ಐಟಿ ವಶ

    ವಕೀಲ ಪವನ್ ಸಾಗರ್ ಮೂಲಕ ಸಿಟಿ ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಕೆ

ಬೆಂಗಳೂರು: ಮಹಿಳೆಯ ಕಿಡ್ನಾಪ್‌ ಕೇಸ್‌ನಲ್ಲಿ ಬಂಧನದಲ್ಲಿರುವ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರು ಜಾಮೀನಿಗಾಗಿ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ. ರೇವಣ್ಣ ಅವರನ್ನು ಬಂಧಿಸಿದ್ದ ಎಸ್‌ಐಟಿ ಅಧಿಕಾರಿಗಳು ನಿನ್ನೆ 17ನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ವಾದ ಆಲಿಸಿದ ನ್ಯಾಯಾಧೀಶರು ರೇವಣ್ಣ ಅವರನ್ನು 4 ದಿನಗಳ ಕಾಲ ಅಂದ್ರೆ ಮೇ 8ವರೆಗೆ ಎಸ್​ಐಟಿ ಕಸ್ಟಡಿಗೆ ನೀಡಿದ್ದಾರೆ.

ಎಸ್‌ಐಟಿ ವಶದಲ್ಲಿರುವ ಹೆಚ್‌.ಡಿ ರೇವಣ್ಣ ಅವರು ಮಹಿಳೆ ಕಿಡ್ನಾಪ್ ಕೇಸ್‌ನಲ್ಲಿ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಮೇ 8ರವರೆಗೂ ಎಸ್‌ಐಟಿ ಕಸ್ಟಡಿ ಇರುವುದರಿಂದ ಈಗಲೇ ಜಾಮೀನು ಅರ್ಜಿ ವಿಚಾರಣೆ ನಡೆಯುವುದು ಅನುಮಾನವಾಗಿದೆ.

ಇದನ್ನೂ ಓದಿ: ಭವಾನಿ ರೇವಣ್ಣಗೂ ಕಾದಿದೆಯಾ ಸಂಕಷ್ಟ.. JDS ಮುಖಂಡರ ಜೊತೆ​ ಮಹತ್ವದ ಚರ್ಚೆ 

CRPC ಸೆಕ್ಷನ್ 439 ಅಡಿಯಲ್ಲಿ ವಕೀಲ ಪವನ್ ಸಾಗರ್ ಮೂಲಕ ಹೆಚ್‌.ಡಿ ರೇವಣ್ಣ ಅವರು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಸದ್ಯ ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಎಸ್ಐಟಿ ಕಸ್ಟಡಿ ಮುಗಿಯುವ ದಿನವೇ ಜಾಮೀನು ಅರ್ಜಿಯು ವಿಚಾರಣೆಗೆ ಬರುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಿಳೆ ಕಿಡ್ನಾಪ್ ಕೇಸ್‌.. ಮತ್ತೆ ಕೋರ್ಟ್ ಮೆಟ್ಟಿಲೇರಿದ ಹೆಚ್‌.ಡಿ ರೇವಣ್ಣ; ಜಾಮೀನು ಸಿಗುತ್ತಾ?

https://newsfirstlive.com/wp-content/uploads/2024/05/hd-revanna6.jpg

Load More