newsfirstkannada.com

ಸುಳಿವೇ ಸಿಗದಂತೆ ತಲೆಮರೆಸಿಕೊಂಡ ಭವಾನಿ ರೇವಣ್ಣ; ಬಂದ ದಾರಿಗೆ ಸುಂಕವಿಲ್ಲ ಎನ್ನುವಂತಾಗಿದೆ SIT ಪಾಡು

Share :

Published June 2, 2024 at 7:53am

    ಭವಾನಿ ಸಾಪತ್ತೆ ಬೆನ್ನಲ್ಲೇ ಹಲವು ತಂಡಗಳನ್ನು ರಚಿಸಿ SITಯಿಂದ ಶೋಧ

    ಒಬ್ಬರಾದ ಮೇಲೆ ಒಬ್ಬರು ಲಾಕ್​ ಆಗುತ್ತಿದ್ದಾರೆ ರೇವಣ್ಣ ಕುಟುಂಬಸ್ಥರು

    ಬಂಧನ ಭೀತಿಯಿಂದ ಅಜ್ಞಾತವಾಸಿಯಾಗಿರುವ ಹೆಚ್​ಡಿ ರೇವಣ್ಣ ಪತ್ನಿ

ಹಾಸನ ಅಶ್ಲೀಲ ವಿಡಿಯೋ ಹಗರಣ ಮಾಜಿ ಸಚಿವ ಹೆಚ್​ಡಿ ರೇವಣ್ಣ ಕುಟುಂಬಕ್ಕೆ ಉರುಳಾಗಿ ಪರಿಣಮಿಸಿದೆ. ಒಬ್ಬೊಬ್ಬ ಸದಸ್ಯರು ಲಾಕ್​ ಆಗುತ್ತಿದ್ದಾರೆ. ಮೊದಲು ಹೆಚ್​ಡಿ ರೇವಣ್ಣ, ಮೊನ್ನೆ ಸಂಸದ ಪ್ರಜ್ವಲ್ ರೇವಣ್ಣ. ಈಗ ಭವಾನಿ ರೇವಣ್ಣ ಸರದಿ. ಕೆಆರ್ ನಗರ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.

ಇದನ್ನೂ ಓದಿ: ಚುನಾವಣೋತ್ತರ ಲೆಕ್ಕಾಚಾರ; ಬಿಜೆಪಿ ನೇತೃತ್ವದ ಎನ್​ಡಿಎ 400 ಸೀಟು ಗೆಲ್ಲೋದು ಗ್ಯಾರಂಟಿ!

ಈ ಬೆನ್ನಲ್ಲೇ ಬಂಧನ ಭೀತಿಯಿಂದ ಅಜ್ಞಾತವಾಸಿಯಾಗಿರುವ ಭವಾನಿ ರೇವಣ್ಣ ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಭವಾನಿ ರೇವಣ್ಣ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಬಂಧನದ ಭೀತಿಯಲ್ಲಿ ನಾಪತ್ತೆಯಾಗಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ನಿನ್ನೆ ಎಸ್​ಐಟಿ ಎದುರು ವಿಚಾರಣೆಗೆ ಭವಾನಿ ರೇವಣ್ಣ ಹಾಜರಾಗಬೇಕಿತ್ತು. ಖುದ್ದು ಹೊಳೆನರಸೀಪುರದ ಮನೆಗೆ ಎಸ್​ಐಟಿ ಅಧಿಕಾರಿಗಳ ತೆರಳಿದ್ದರು. ಆದ್ರೆ ಹೊಳೆನರಸೀಪುರದ ಮನೆಯಲ್ಲೂ ಭವಾನಿ ರೇವಣ್ಣ ಪತ್ತೆಯಾಗಿಲ್ಲ. ಯಾರ ಕೈಗೂ ಸಿಗದ ಕಾರಣ ಎಸ್​ಐಟಿ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲದೇ ವಾಪಸ್​ ಆಗಿದ್ದಾರೆ.

ಭವಾನಿ ಅವರನ್ನು ಬಂಧಿಸಿ ವಿಚಾರಣೆ ನಡೆಸಲು ತೀರ್ಮಾನಿಸಿರುವ ಎಸ್‌ಐಟಿ, ಹಲವು ತಂಡಗಳನ್ನು ರಚಿಸಿ ಶೋಧ ಮುಂದುವರಿಸಿದೆ. ಭವಾನಿ ನಿವಾಸಕ್ಕೆ ತೆರಳಿದ್ದ ಎಸ್‌ಐಟಿ ತಂಡ ಸಂಜೆವರೆಗೂ ಕಾದು ಕೂತಿದ್ದರಾದ್ರೂ ಭವಾನಿಯ ಸುಳಿವೇ ಇರಲಿಲ್ಲ. ವಿಚಾರಣೆಗೆ ಹಾಜರಾಗದೇ ಇದ್ರೆ ಬಂಧನ ಮಾಡೋದು ಅನಿವಾರ್ಯ ಅಂತಾನೂ ತನಿಖಾಧಿಕಾರಿಗಳು ಎಚ್ಚರಿಸಿದ್ದರು. ಇಷ್ಟಾದ್ರೂ ಭವಾನಿ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಅವರ ಬಂಧನವೂ ಫಿಕ್ಸ್‌ ಆದಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸುಳಿವೇ ಸಿಗದಂತೆ ತಲೆಮರೆಸಿಕೊಂಡ ಭವಾನಿ ರೇವಣ್ಣ; ಬಂದ ದಾರಿಗೆ ಸುಂಕವಿಲ್ಲ ಎನ್ನುವಂತಾಗಿದೆ SIT ಪಾಡು

https://newsfirstlive.com/wp-content/uploads/2024/06/BHAVANI.jpg

Load More