newsfirstkannada.com

’ಕೈ ಮುಗಿತೀನಿ ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿ’- ರಾಜ್ಯಸಭೆಯಲ್ಲಿ ಕರ್ನಾಟಕಕ್ಕಾಗಿ HDD ಹೋರಾಟ

Share :

Published February 7, 2024 at 8:01am

    ರಾಜ್ಯಸಭೆಯಲ್ಲಿ ಕರ್ನಾಟಕದ ಪರ ಹೆಚ್​.ಡಿ.ದೇವೇಗೌಡ ದನಿ

    ಮೇಕೆದಾಟು ಯೋಜನೆಗೆ ಅನುಮತಿ ಕೋರಿದ ಮಾಜಿ ಪ್ರಧಾನಿ

    ತಮಿಳುನಾಡಿನ ಡಿಎಂಕೆ ಸಂಸದ ಗಿರಿರಾಜನ್ ತೀವ್ರ ಆಕ್ಷೇಪ..!

ಬೆಂಗಳೂರು: ಕಾವೇರಿ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮತ್ತೆ ಧ್ವನಿ ಎತ್ತಿದ್ದಾರೆ. ಮೇಕೆದಾಟು ಯೋಜನೆಗೆ ಅನುಮತಿ ನೀಡುವಂತೆ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮಾಜಿ ಪ್ರಧಾನಿ ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ತಮಿಳುನಾಡು ಸಂಸದರು ಅಪಸ್ವರ ಎತ್ತಿದ್ದಾರೆ.

ರಾಜ್ಯಸಭೆಯಲ್ಲಿ ಕರ್ನಾಟಕದ ಪರ ಹೆಚ್​.ಡಿ ದೇವೇಗೌಡ ದನಿ

ಕರ್ನಾಟಕ.. ತಮಿಳುನಾಡಿನ ನಡುವೆ ಕಾವೇರಿ ಕಾದಾಟ ಮುಂದುವರಿಯತ್ತಲೇ ಇದೆ. ರಾಜ್ಯದ ಜನರಿಗೆ ಕುಡಿಯಲು ನೀರು ಇಲ್ಲ ಅಂದ್ರೂ ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರದ ಆಜ್ಞೆಗೆ ಕರುನಾಡಿನ ಡ್ಯಾಮ್​ಗಳಿಂದ ಟಿಎಂಸಿಗಳ ಮೇಲೆ ಟಿಎಂಸಿಗಳಷ್ಟು ನೀರನ್ನ ಹರಿ ಬಿಡಬೇಕಾದ ಪರಿಸ್ಥಿತಿ ಇದೆ. ಇದಕ್ಕೆ ಒಂದು ರೀತಿಯ ಪರಿಹಾರ ಅಂದ್ರೆ ಮೇಕೆದಾಟು ಯೋಜನೆ. ಈ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಮೇಕೆದಾಟು ಮಹಾಯುದ್ಧವೇ ನಡೆಯುತ್ತಿದೆ. ರಾಜ್ಯದಲ್ಲಿ ನೀರಿನ ಪರಿಸ್ಥಿತಿ ಕುರಿತು ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಧ್ವನಿ ಎತ್ತಿದ್ದಾರೆ.

ಮೇಕೆದಾಟುಗಾಗಿ ಮಾಜಿ ಪ್ರಧಾನಿ ಕೈ ಮುಗಿದು ಮನವಿ

ಕಾವೇರಿ ಸೇರಿದಂತೆ ರಾಜ್ಯದ ನೀರಾವರಿ ವಿಷ್ಯದಲ್ಲಿ ದೇವೇಗೌಡರ ಸದಾ ದನಿ ಎತ್ತುತ್ತಾರೆ. ಕಾವೇರಿ ವಿಚಾರದಲ್ಲಿ ಇಳಿ ವಯಸ್ಸಿನಲ್ಲೂ ದೇವೇಗೌಡರ ಹುಮ್ಮಸ್ಸು ಮಾತ್ರ ಕಮ್ಮಿ ಆಗಿಲ್ಲ. ಇದಕ್ಕೆ ರಾಜ್ಯಸಭೆಯಲ್ಲಿ ದೇವೇಗೌಡರ ಈ ಭಾಷಣವೇ ಸಾಕ್ಷಿ. ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದಲ್ಲಿ ಭಾಗಿಯಾದ್ದ ದೇವೇಗೌಡರು, ಮೇಕೆದಾಟು ಯೋಜನೆ ವಿಚಾರ ಪ್ರಸ್ತಾಪಿಸಿದ್ರು. ಕರ್ನಾಟಕದಲ್ಲಿ ಕುಡಿಯುವ ನೀರಿನ ಪ್ರಮುಖ ಸಮಸ್ಯೆಯಾಗಿದೆ. ಕೇಂದ್ರ ಸರ್ಕಾರವು ಕೇವಲ 30 ಟಿಎಂಸಿ ನೀರಿನ ಅಣೆಕಟ್ಟನ್ನು ನಿರ್ಮಿಸಲು ಅನುಮತಿ ನೀಡಬೇಕೆಂದು ನಾನು ಪ್ರಧಾನಿ ಹಾಗೂ ನಮ್ಮ ತಮಿಳುನಾಡು ಸ್ನೇಹಿತರಲ್ಲಿ ಮನವಿ ಮಾಡುತ್ತೇನೆ ಅಂತ ಕೈ ಮುಗಿದು ಮನವಿ ಮಾಡಿಕೊಂಡ್ರು.

ನಾನು 60 ವರ್ಷಗಳಿಂದ ಇದಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ನನಗೆ 91 ವಯಸ್ಸು. 10 ವರ್ಷದಲ್ಲಿ 4 ವರ್ಷಗಳು ಮಾತ್ರ ಸಮಸ್ಯೆ ಇರುತ್ತೆ. ಪ್ರಧಾನಿ ಮಂತ್ರಿಗಳ ಬಳಿ ಮನವಿ ಮಾಡುತ್ತೇನೆ. ಈ ಸಮಸ್ಯೆಯನ್ನ ಆಲಿಸಿ, ಏನಾದ್ರು ಮಾಡಿ ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನ ಬಗೆಹರಿಸಿ ಕೊಡಲಿ ಅಂತ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ ಹೆಚ್​​ಡಿಡಿ.

ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು ರಾಜ್ಯಸಭೆಯಲ್ಲಿ ಕರ್ನಾಟಕದಲ್ಲಿ ನೀರಿನ ಸಮಸ್ಯೆ ಮತ್ತು ಕಾವೇರಿ ಜಲ ವಿವಾದ ಪ್ರಸ್ತಾಪಿಸುವ ಮೂಲಕ ಸದನದ ಗಮನ ಸೆಳೆದರು. ದೇವೇಗೌಡ ಭಾಷಣದ ನಡುವೆ ಎದ್ದು ನಿಂತು. ತಮಿಳುನಾಡಿನ ಡಿಎಂಕೆ ಸಂಸದ ಗಿರಿರಾಜನ್ ಆಕ್ಷೇಪ ವ್ಯಕ್ತಪಡಿಸಿದ್ರು.

ಸುಪ್ರೀಂ ಕೋರ್ಟ್​ ಟ್ರಿಬ್ಯೂನಲ್​ ರಚನೆ ಮಾಡಿದೆ. ಆ ನ್ಯಾಯಮಂಡಳಿಯು ಈ ಸಮಸ್ಯೆ ಬಗ್ಗೆ ಸವಿಸ್ತಾರವಾದ ಆದೇಶವನ್ನ ಹೊರಡಿಸಿದೆ. ಹಲವು ವರ್ಷಗಳಿಂದ ಕಾದಿರಿಸಲಾಗಿದೆ. ಇದೀಗ ಕರ್ನಾಟಕವೇ ಆಗಲಿ, ತಮಿಳುನಾಡೇ ಆಗಲಿ, ಟ್ರಿಬ್ಯೂನಲ್​ ಬಳಿ ಮನವಿಗಳನ್ನ ಮಾಡಿಕೊಳ್ಳಬೇಕು. ಮಾಜಿ ಪ್ರಧಾನಿಗಳಾದ ದೇವೇಗೌಡರ ಮೇಲೆ ನಮಗೆ ಗೌರವವಿದೆ. ಅವರಿಗೆ ಎಲ್ಲಾ ಗೊತ್ತಿದೆ. ಆದ್ರೆ ಅವರು, ಎರಡು ರಾಜ್ಯಗಳ ನಡುವೆ ಗೊಂದಲವನ್ನ ಉಂಟು ಮಾಡುತ್ತಿದ್ದಾರೆ. ಇದನ್ನ ದಯವಿಟ್ಟು ಕಲಾಪದಲ್ಲಿ ಈ ವಿಷಯವನ್ನ ಮತ್ತೆ ಪ್ರಸ್ತಾಪಿಸ ಬಾರದು. ಎಲ್ಲಾ ಮುಗಿದಿದೆ. ಏನಾದ್ರು ಬೇಡಿಕೆ ಇದ್ದರೆ. ಟ್ರಿಬ್ಯೂನಲ್​ ಮುಂದೆ ಹೋಗಲಿ ಎಂದರು.

ಮೇಕೆದಾಟು ಯೋಜನೆಗೆ ದೇವೇಗೌಡರು ಅನುಮತಿ ಕೇಳಿರುವ ವಿಚಾರಕ್ಕೆ ಕಾಂಗ್ರೆಸ್​ ಪರಿಷತ್ ಸದಸ್ಯ ನಾಗರಾಜ್ ಯಾದವ್ ಪ್ರತಿಕ್ರಿಯಿಸಿದ್ದಾರೆ. ಮೇಕೆದಾಟು ಯೋಜನೆಗೆ ಕಾಂಗ್ರೆಸ್ ನಿರಂತರವಾಗಿ ಒತ್ತಾಯಿಸುತ್ತಲೇ ಬಂದಿದೆ. ಪಾದಯಾತ್ರೆಯನ್ನು ನಡೆಸಿದ್ದೇವೆ.. ದೇರ್ವೇಗೌಡರ ಮೊದಲೇ ಈ ಕೆಲಸ ಮಾಡಬಹುದಾಗಿತ್ತು ಎಂದು ಹೇಳಿದ್ದಾರೆ.

ಕರ್ನಾಟಕದ ಕುಡಿಯುವ ನೀರಿನ ಸಂಕಷ್ಟವನ್ನು ಪರಿಹಾರಕ್ಕೆ ರಾಜ್ಯಸಬೆಯಲ್ಲಿ ದೇವೇಗೌಡರ ಧ್ವನಿ ಎತ್ತಿದ್ದಾರೆ. ಇದಕ್ಕೆ ತಮಿಳುನಾಡು ಅಪಸ್ವರ ಎತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

’ಕೈ ಮುಗಿತೀನಿ ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿ’- ರಾಜ್ಯಸಭೆಯಲ್ಲಿ ಕರ್ನಾಟಕಕ್ಕಾಗಿ HDD ಹೋರಾಟ

https://newsfirstlive.com/wp-content/uploads/2024/02/HD-Devegowda-1.jpg

Load More