newsfirstkannada.com

ಇನ್ನೂ ಆರದ ಹನುಮ ಧ್ವಜದ ಕಿಚ್ಚು.. ಹೋರಾಟಕ್ಕೆ ಧುಮುಕಿದ ಬಿಜೆಪಿಗೆ HDK ಸಾಥ್​​!

Share :

Published January 29, 2024 at 7:59pm

    ಜ್ವಾಲಾಮುಖಿಯಾದ ಕೆರಗೋಡಿನ ಹನುಮ ಕಿಚ್ಚು

    ರಾಜ್ಯದಗಲ ವ್ಯಾಪಿಸಿದ ಒಂದು ಹಳ್ಳಿಯ ಹೋರಾಟ

    ಹನುಮ ಧ್ವಜ ತೆರವು ವಿರೋಧಿಸಿ ಬೃಹತ್ ಪ್ರತಿಭಟನೆ

ಮಂಡ್ಯ: ಕೆರಗೋಡಿನಲ್ಲಿ ಹನುಮ ಕಿಚ್ಚು ಜ್ವಾಲಾಮುಖಿಯಾಗಿ ಬದಲಾಗಿದೆ. ಕೇವಲ ಕೆರಗೋಡಿನ ಹಳ್ಳಿಗೆ ಸಿಮೀತವಾಗಿದ್ದ ಈ ಹೋರಾಟ ರಾಜ್ಯದಗಲ ವ್ಯಾಪಿಸಿದೆ. ಪಾದಯಾತ್ರೆ ವೇಳೆ ಪ್ರತಿಭಟನಾಕಾರರ ಆಕ್ರೋಶದ ಕಟ್ಟೆಯೊಡೆದಿತ್ತು. ಈ ಹೋರಾಟಕ್ಕೆ ಬಿಜೆಪಿ-ಜೆಡಿಎಸ್-ಕೆಆರ್​ಪಿಪಿ ಒಗ್ಗಟ್ಟಿನಿಂದ ಧುಮುಕಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ.

ಹೌದು, ಕೆರಗೋಡು ಅಕ್ಷರಶಃ ರಣಾಂಗಣವಾಗಿ ಮಾರ್ಪಟ್ಟಿದೆ. ಗಲ್ಲಿ ಗಲ್ಲಿಯಲ್ಲೂ ಕೇಸರಿ ಪತಾಕೆಗಳು ರಾರಾಜಿಸುತ್ತಿವೆ. ಹನುಮಧ್ವಜ ಕೆಳಗಿಳಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಸರಿ ಕಲಿಗಳು ರೊಚ್ಚಿಗೆದ್ದಿದ್ದಾರೆ. ಮೊದಲು ಮಂಡ್ಯದ ಕೆರಗೋಡಿನಲ್ಲಿ ಮಾತ್ರ ಕವಲೊಡೆದಿದ್ದ ಈ ಹನುಮನ ಹೋರಾಟ ಈಗ ರಾಜ್ಯಾದ್ಯಂತ ವ್ಯಾಪಿಸಿದೆ.

ಕೆರೆಗೋಡಿನಲ್ಲಿ ಕೇಸರಿ ಕಿಚ್ಚು ಜ್ವಾಲಾಮುಖಿಯಂತೆ ಸ್ಫೋಟವಾಗಿದೆ. ಹನುಮ ಧ್ವಜ ತೆರವನ್ನ ವಿರೋಧಿಸಿ ಕೇಸರಿ ಕಲಿಗಳು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಮಂಡ್ಯ ಡಿಸಿ ಕಚೇರಿಯವರೆಗೆ 15 ಕಿಮೀ ಪಾದಯಾತ್ರೆ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು.. ಜೈ ಶ್ರೀರಾಮ್ ಅಂತ ಘೋಷಣೆ ಕೂಗ್ತಾ ಸರ್ಕಾರದ ವಿರುದ್ಧ ಧಿಕ್ಕಾರದ ಕಹಳೆ ಮೊಳಗಿಸಿದ್ದಾರೆ.

ಪಾದಯಾತ್ರೆ ವೇಳೆ ಶಾಸಕನ ಫ್ಲೆಕ್ಸ್ ಹರಿದು, ಬೆಂಕಿ ಹಚ್ಚಿ ಆಕ್ರೋಶ

ಇನ್ನು ಕೆರಗೋಡಿನಿಂದ ಮಂಡ್ಯಕ್ಕೆ ಆಗಮಿಸಿದ ಹನುಮ ಧ್ವಜ ಪಾದಯಾತ್ರೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಬಿಜೆಪಿ, ಜೆಡಿಎಸ್​ನ ನಾಯಕರು, ಕಾರ್ಯಕರ್ತರ ಜೊತೆ ಕೆರಗೋಡು ಗ್ರಾಮಸ್ಥರು ಹೋರಾಟಕ್ಕೆ ಧುಮುಕಿ ಸರ್ಕಾರದ ವಿರುದ್ಧ ಒಕ್ಕೊರಲಿನ ಕಿಚ್ಚು ಪ್ರದರ್ಶಿಸಿದ್ದಾರೆ. ಪಾದಯಾತ್ರೆ ವೇಳೆ ಶಾಸಕ ಗಣಿಗ ರವಿಯ ಫ್ಲೆಕ್ಸ್ ಹರಿದು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ರು.

ಫ್ಲೆಕ್ಸ್​ಗೆ ಹೊಡೆದ ಕಲ್ಲು ವ್ಯಕ್ತಿ ತಲೆಗೆ ಬಿದ್ದು ಗಂಭೀರ ಗಾಯ

ಇದೇ ವೇಳೆ ಮಂಡ್ಯದಲ್ಲಿ ಹನುಮನ ಕಿಚ್ಚು ತೀವ್ರ ಸ್ವರೂಪ ಪಡೆಯಿತು. ಕಾಂಗ್ರೆಸ್ ಶಾಸಕರ ಫ್ಲೆಕ್ಸ್​ಗಳು ಕಾಣ್ತಿದ್ದಂತೆ ಕಲ್ಲೆಸೆದು ಸಿಟ್ಟು ಪ್ರದರ್ಶಿಸಿದ್ದಾರೆ. ಹೀಗೆ ಫ್ಲೆಕ್ಸ್​ಗೆ ಹೊಡೆದ ಕಲ್ಲು ವ್ಯಕ್ತಿಯ ತಲೆಗೆ ಬಿದ್ದು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್

ಇನ್ನು ಪ್ರತಿಭಟನೆ ತಾರಕಕ್ಕೇರುತ್ತಿದ್ದಂತೆ ಅದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ರು. ಈ ವೇಳೆ ತಳ್ಳಾಟ-ನೂಕಾಟ ನಡೆದು ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ರು.

ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್-ಕೆಆರ್​ಪಿಪಿ ಸಮರ

ಇನ್ನು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಜಂಟಿಯಾಗಿ ಅಖಾಡಕ್ಕಿಳಿದಿದ್ದಾರೆ. ವಿಶೇಷ ಏನಂದ್ರೆ ಈ ಪ್ರತಿಭಟನೆಯಲ್ಲಿ ಕೆಆರ್​ಪಿಪಿ ಪಕ್ಷದ ಜನಾರ್ದನ ರೆಡ್ಡಿ ಕೂಡ ಭಾಗಿಯಾಗಿದ್ರು. ಮಾತ್ರವಲ್ಲದೆ ಪಾದಯತ್ರೆಯಲ್ಲಿ ಸಾಗಿದ ಸಾವಿರಾರು ಪ್ರತಿಭಟನಾಕಾರರು ಹನುಮ ಧ್ವಜ ಹಾರಾಟಕ್ಕೆ ಅನುಮತಿ ನೀಡುವಂತೆ ಮಂಡ್ಯದ ಡಿಸಿ ಕಚೇರಿ ಮುಂಭಾಗ ಆಗ್ರಹಿಸಿದ್ರು. ಈ ವೇಳೆ ಮಾತನಾಡಿದ ಮಾಜಿ ಸಿಎಂ ಹೆಚ್​ಡಿಕೆ ಇದು ರಾಜ್ಯ ಸರ್ಕಾರದ ಉದ್ಧಟತನ ಅಂತ ಕಿಡಿಕಾರಿದ್ರು.

ಹನುಮನ ಕಿಚ್ಚು ಕೇವಲ ಮಂಡ್ಯಕ್ಕೆ ಸಿಮೀತವಾಗದೇ ರಾಜ್ಯದ ಜಿಲ್ಲೆ ಜಿಲ್ಲೆಗೂ ವ್ಯಾಪಿಸಿದೆ. ಬೆಂಗಳೂರು, ಬೆಳಗಾವಿ, ಚಿಕ್ಕಮಗಳೂರು, ಹಾವೇರಿ ಸೇರಿದಂತೆ ಹಲವೆಡೆ ಕೇಸರಿ ವೀರರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದ ಘಟನೆಯೂ ನಡೆಯಿತು. ಇಷ್ಟಾದ್ರೂ ಗೃಹ ಸಚಿವ ಪರಮೇಶ್ವರ್‌ ಸರ್ಕಾರದ ಕ್ರಮವನ್ನ ಸಮರ್ಥಿಸಿಕೊಂಡಿದ್ದಾರೆ.

ಒಟ್ಟಾರೆ ಚುನಾವಣೆ ಸಮೀಪ ಇರುವಾಗಲೇ ಹನುಮ ಧ್ವಜ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಪೇಚಿಗೆ ಸಿಲುಕಿದೆ. ಇದೇ ವಿಚಾರ ಇಟ್ಕೊಂಡು ಕೈ​ ಕಟ್ಟಿ ಹಾಕಲು ಬಿಜೆಪಿ-ಜೆಡಿಎಸ್ ನಾಯಕರು ಅಖಾಡಕ್ಕಿಳಿದಿದ್ದಾರೆ. ಇದು ಸಹಜವಾಗಿಯೇ ಲೋಕ ಸಮರದಲ್ಲಿ ಹಸ್ತ ಪಡೆ ವಿರುದ್ಧ ಪ್ರತಿಕೂಲ ಪರಿಣಾಮ ಬೀರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್ನೂ ಆರದ ಹನುಮ ಧ್ವಜದ ಕಿಚ್ಚು.. ಹೋರಾಟಕ್ಕೆ ಧುಮುಕಿದ ಬಿಜೆಪಿಗೆ HDK ಸಾಥ್​​!

https://newsfirstlive.com/wp-content/uploads/2024/01/HDK_JDS.jpg

Load More