newsfirstkannada.com

‘1 ಲಕ್ಷ ಪೆನ್‌ಡ್ರೈವ್‌ ಗಲ್ಲಿ, ಗಲ್ಲಿಗೆ ಹಂಚಿದ್ದಾರೆ’- ಹಾಸನ ಅಶ್ಲೀಲ ವಿಡಿಯೋ ಕೇಸ್‌ಗೆ HDK ಸ್ಫೋಟಕ ಹೇಳಿಕೆ

Share :

Published April 29, 2024 at 5:42pm

    ಹೆಣ್ಣು ಮಕ್ಕಳ ಮೇಲೆ ಬಲವಂತ ಆಗಿದ್ರೆ ಕಾನೂನು ರೀತಿಯ ಕ್ರಮ ಆಗಲಿ

    ಹೆಚ್‌.ಡಿ ರೇವಣ್ಣ ಕುಟುಂಬ ಬೇರೆ ನಮ್ಮ ಕುಟುಂಬ ಬೇರೆ ಎಂದ HDK

    ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದ ಕುಮಾರಸ್ವಾಮಿ

ಶಿವಮೊಗ್ಗ: ಹಾಸನದ ಅಶ್ಲೀಲ ವಿಡಿಯೋ ವೈರಲ್ ಕೇಸ್‌ಗೆ ಸಂಬಂಧಪಟ್ಟಂತೆ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಅವರನ್ನ ಪಕ್ಷದಿಂದ ಉಚ್ಛಾಟನೆ ಮಾಡುವುದು ನಿನ್ನೆಯೇ ತೀರ್ಮಾನ ಆಗಿತ್ತು. ಈ ಬಗ್ಗೆ ನಿನ್ನೆ ರಾತ್ರಿಯೇ ದೇವೇಗೌಡರ ಬಳಿ ಚರ್ಚೆ ಮಾಡಿದ್ದೆ ಎಂದು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಈ ಪ್ರಕರಣದಲ್ಲಿ ದೇವೇಗೌಡರನ್ನು ಹಾಗೂ ನನ್ನನ್ನ ಯಾಕೆ ತರ್ತೀರಾ. ಹೆಚ್‌.ಡಿ ರೇವಣ್ಣ ಕುಟುಂಬ ಅಂದ್ರೆ ಅವರು ಅವರಿಬ್ಬರ ಮಕ್ಕಳು. ಈಗಾಗಲೇ ನಾವು ಬೇರೆ ಆಗಿದ್ದೇವೆ. ನಮ್ಮ ವ್ಯವಹಾರ ಅವರ ವ್ಯವಹಾರ ಬೇರೆ ಬೇರೆ ನಡೆಯುತ್ತೆ. ಈ ನೆಲದ ಕಾನೂನಿನಲ್ಲಿ ತಪ್ಪು ಆಗಿದ್ರೆ ಶಿಕ್ಷೆ ಆಗಬೇಕು ಎಂದರು.

ರಾಜ್ಯದ ಹೆಣ್ಣು ಮಕ್ಕಳ ಧ್ವನಿಯಾಗಿ ನಾನು ಧ್ವನಿ ಎತ್ತುತ್ತೇನೆ. ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ತಪ್ಪು ಆಗಿದ್ರೆ ಈ ನೆಲ್ಲದಲ್ಲಿ ಶಿಕ್ಷೆ ಆಗಬೇಕು. ಈ ನಿಟ್ಟಿನಲ್ಲಿ ನನ್ನ ನಿಲುವು ಒಂದೇ ಆಗಿದೆ. ಕಾನೂನು ಉಲ್ಲಂಘನೆ ಆಗಿದ್ರೆ, ಬಲವಂತ ಆಗಿದ್ರೆ ಕಾನೂನು ರೀತಿಯ ಕ್ರಮ ಆಗಲಿ. ಬಿಜೆಪಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಹೆಚ್‌ಡಿಕೆ ಹೇಳಿದ್ದಾರೆ.

ಇನ್ನು, ಚುನಾವಣೆಗೂ ಮುಂಚೆ ಲಕ್ಷಾಂತರ ಪೆನ್ ಡ್ರೈವ್‌ಗಳನ್ನು ಹಾಸನದ ಗಲ್ಲಿ, ಗಲ್ಲಿಯಲ್ಲಿ ಹಂಚಿದ್ದಾರೆ. ಯಾರಿಂದ ವಿಡಿಯೋ ಹೊರ ಬಂದಿದೆ. ಯಾರು ಲಕ್ಷಾಂತರ ಪೆನ್ ಡ್ರೈವ್‌ ಹಂಚಿದವರು ಅಂತ ತಿಳಿಯಬೇಕು. ಪೆನ್ ಡ್ರೈವ್‌ ಹಂಚಿದ್ದು ಕೂಡ ದೊಡ್ಡ ಅಪರಾಧ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಹೊಸ ಟ್ವಿಸ್ಟ್‌; ಪೆನ್ ಡ್ರೈವ್ ಮನೆ, ಮನೆಗೂ ಹಂಚಿದ್ದು ಯಾರು? 

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಈ ವಿಚಾರಕ್ಕೂ ಸಂಬಂಧ ಇಲ್ಲ. ಮೋದಿ ಅವರು ಪ್ರಜ್ವಲ್ ರೇವಣ್ಣ ಅವರ ಪರ ಪ್ರಚಾರ ಕೂಡ ಮಾಡಿಲ್ಲ. ಮೋದಿ, ಬಿಜೆಪಿ, ದೇವೇಗೌಡರಿಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ. 2012ರ ಪ್ರಕರಣ ಅಂದ ಮೇಲೆ ಇಷ್ಟು ವರ್ಷ ಏನ್ ಮಾಡುತ್ತಿದ್ದರು. ನನ್ನ ಹಾಗೂ ನನ್ನ ತಂದೆಯ ಬಗ್ಗೆ ಯಾರು ಸಂಶಯ ಪಡಬೇಡಿ. ಇದನ್ನೇ ದೊಡ್ಡ ವಿಷಯ ಮಾಡೋಕೆ ಕಾಂಗ್ರೆಸ್ ಷಡ್ಯಂತ್ರ ನಡೆಸಿದೆ. ನೇರವಾಗಿ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಯಾರು ಆಪಾದನೆ ಮಾಡಿಲ್ಲ. ಆದರೂ ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘1 ಲಕ್ಷ ಪೆನ್‌ಡ್ರೈವ್‌ ಗಲ್ಲಿ, ಗಲ್ಲಿಗೆ ಹಂಚಿದ್ದಾರೆ’- ಹಾಸನ ಅಶ್ಲೀಲ ವಿಡಿಯೋ ಕೇಸ್‌ಗೆ HDK ಸ್ಫೋಟಕ ಹೇಳಿಕೆ

https://newsfirstlive.com/wp-content/uploads/2024/04/H-D-Kumaraswamy.jpg

Load More