newsfirstkannada.com

ಟೀಂ ಇಂಡಿಯಾಗೆ ಸಿಕ್ಕ ಯಂಗ್​ ಗನ್​ ಈತ! ಪಂತ್ ರಿಪ್ಲೇಸರ್​​​​ ಯಾರು ಅನ್ನೋ ಪ್ರಶ್ನೆಗೆ ಸಿಕ್ತು ಉತ್ತರ

Share :

Published January 27, 2024 at 11:53am

Update January 27, 2024 at 11:55am

  ಟೀಮ್ ಇಂಡಿಯಾಗೆ ಸಿಕ್ಕೆ ಬಿಟ್ಟ ಪಂತ್ ಪರ್ಯಾಯ​​​​

  ಸ್ಪೋಟಕ ಅರ್ಧಶತಕ ಸಿಡಿಸಿ ಶೈನ್​​ ಆದ ಯಂಗ್​ ಗನ್

  ಈ ಯಶಸ್ವಿ ಆಟಗಾರನ ಬಗ್ಗೆ ಆರ್ ಅಶ್ವಿನ್ ಏನಂದ್ರು ಗೊತ್ತಾ?

ಸಚಿನ್​ ತೆಂಡುಲ್ಕರ್​ ಉತ್ತರಾಧಿಕಾರಿ ಯಾರು? ಇದಕ್ಕೆ ಸಿಕ್ಕ ಉತ್ತರ ವಿರಾಟ್ ಕೊಹ್ಲಿ. ಹಾಗೇ ರಿಷಬ್​ ಪಂತ್​ಗೆ ಪರ್ಯಾಯ ಯಾರು ಅನ್ನೋ ಪ್ರಶ್ನೆ ಕ್ರಿಕೆಟ್ ಪ್ರೇಮಿಗಳನ್ನ ಕಾಡ್ತಿದೆ. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ಹಾಗಾದ್ರೆ ಫಿಯರ್​​ಲೆಸ್​​​​​​​​ ಪಂತ್​​​​​​​​​ ಕೊರಗನ್ನ ನೀಗಿಸೋ ಆ ಆಟಗಾರು ಯಾರು ? ಇಲ್ಲಿದೆ ನೋಡಿ ಉತ್ತರ. ​

ಇದು ಡೇರಿಂಗ್​ ರಿಷಬ್​ ಪಂತ್​​​ರ ಅಸಲಿ ಆಟ..! ಈ ವಿಧ್ವಂಸಕ ಬ್ಯಾಟ್ಸ್​​ಮನ್​​​​​​​​​​ಗೆ ಭಯ ಅನ್ನೋದು ಗೊತ್ತಿಲ್ಲ. ಏನಿದ್ರೂ ದಂಡಂ ದಶಗುಣಂ ವೀರಾವೇಶ. ಮೂರು ಫಾರ್ಮೆಟ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​​​. ಸದ್ಯ ಈ ಪಿಯರ್​ಲೆಸ್​ ಬ್ಯಾಟ್ಸ್​​ಮನ್ ಟೀಮ್ ಇಂಡಿಯಾದಲ್ಲಿಲ್ಲ. ಆದರೆ ಈತನನ್ನ ರಿಪ್ಲೇಸ್​ ಮಾಡಿದ ಆಟಗಾರ ತಂಡದಲ್ಲಿದ್ದಾನೆ. ಆತ ಬೇರಾರು ಅಲ್ಲ, ಮುಂಬೈನ ಸಿಡಿಗುಂಡು ಯಶಸ್ವಿ ಜೈಸ್ವಾಲ್​​​.

ರಿಷಬ್ ಕೊರಗು ನೀಗಿಸಿದ ಯಶಸ್ವಿ ಜೈಸ್ವಾಲ್​

ರಿಷಬ್​ ಪಂತ್​ ಕಾರು ಅಪಘಾತದಲ್ಲಿ ಗಾಯಗೊಂಡು ತಂಡದಿಂದ ಹೊರಬಿದ್ದಾಗ ಇವರ ಸ್ಥಾನ ತುಂಬರೋರು ಯಾರು ಅನ್ನೋದು ಯಕ್ಷಪ್ರಶ್ನೆಯಾಗಿತ್ತು. ಸದ್ಯ ಆ ಪ್ರಶ್ನೆಗೆ ಉತ್ತರವಾಗಿ ಯಂಗ್​ಗನ್ ಜೈಸ್ವಾಲ್ ಸಿಕ್ಕಿದ್ದಾರೆ. ವರ್ಷದಿಂದ ಭಾರತಕ್ಕೆ ಕಾಡ್ತಿದ್ದ ಪಂತ್​ ಕೊರಗನ್ನ ಮುಂಬೈಕರ್ ದೂರವಾಗಿಸಿದ್ದಾರೆ. ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ಎದುರಿನ ಟೆಸ್ಟ್​ ಸರಣಿಯಲ್ಲಿ ಕಂಪ್ಲೀಟ್​ ಅಟ್ಯಾಕಿಂಗ್ ಆಟವಾಡಿ ನಾನು ಪಂತ್ ರಿಪ್ಲೇಸರ್ ಅನ್ನೋ ಸಂದೇಶ ಕೊಟ್ಟಿದ್ದಾರೆ.

ಜೈಸ್ವಾಲ್ ಕೊಟ್ಟ ಏಟಿಗೆ ಆಂಗ್ಲರು ಥಂಡಾ..!

ಹೈದ್ರಾಬಾದ್​​ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಮೊಳಗಿದ್ದು ಒಂದೇ ಘೋಷಣೆ. ಕೇಳಿದ್ದು ಒಂದೇ ಕೂಗು. ಅದೇನಂದ್ರೆ ಜೈಸ್ವಾಲ್​.. ಜೈಸ್ವಾಲ್​.​​. ಬ್ಯಾಟ್​ ಅನ್ನೋ ವೆಪನ್​ ಹಿಡಿದು ಅಂಗಳಕ್ಕಿದ ಜೈಸ್ವಾಲ್ ಆಂಗ್ಲರ ಬೌಲರ್​ಗಳನ್ನ ಉಡೀಸ್ ಮಾಡಿದ್ರು. ನಿರ್ಭಿತಿ ಆಟವಾಡಿದ ಜೈಸ್ವಾಲ್​ 74 ಎಸೆತಗಳಲ್ಲಿ 80 ರನ್ ಗಳಿಸಿ ಭಾರತದ ಇನ್ನಿಂಗ್ಸ್ ಮುನ್ನಡೆಗೆ ಕಾರಣರಾದ್ರು. ​

ಸದ್ಯ ಜೈಸ್ವಾಲ್​, ಪಂತ್​ಗೆ ಪರ್ಯಾಯ​​ ಆಗಬಲ್ಲರು ಅನ್ನೋದಕ್ಕೆ ಇದೊಂದೇ ಶತಕ ಸಾಕು. ಇಬ್ಬರ​ ಬ್ಯಾಟಿಂಗ್ನಲ್ಲಿ ಸಾಮ್ಯತೆಯಿದೆ. ಬರೀ ನಾವಷ್ಟೇ ಅಲ್ಲ. ಟೀಮ್ ಇಂಡಿಯಾದ ಲೆಜೆಂಡ್ರಿ ಸ್ಪಿನ್ನರ್ ಆರ್ ಅಶ್ವಿನ್ ಕೂಡ ಜೈಸ್ವಾಲ್​​​​​​​ ಕೂಡ ಥೇಟ್​ ಪಂತ್​ರಂತೆ ಬ್ಯಾಟಿಂಗ್ ಮಾಡ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಯಶಸ್ವಿ ಜೈಸ್ವಾಲ್ ಆಡುವ ಕೆಲ ಶಾಟ್ಸ್​​​ಗಳಲ್ಲಿ ತಪ್ಪು ಹೆಜ್ಜೆ ಇಟ್ಟಿಲ್ಲ. ಆತನ ಆಟವನ್ನ ನಾನು ತುಂಬಾ ಎಂಜಾಯ್ ಮಾಡುತ್ತೇನೆ. ಜೈಸ್ವಾಲ್ ಬ್ಯಾಟಿಂಗ್​ನಲ್ಲಿ ರಿಷಬ್​​ ಪಂತ್​​ ರನ್ನ ಕಾಣುತ್ತೇನೆ. ಇಬ್ಬರು ಜೊತೆಯಾಗಿ ಎಡಗೈ ಸ್ಪಿನ್ನರ್​ಗಳ ವಿರುದ್ಧ ಆಡುವುದನ್ನ ಬಯಸುತ್ತೇನೆ.
ಆರ್​ ಅಶ್ವಿನ್​​​, ಟೀಮ್ ಇಂಡಿಯಾ ಕ್ರಿಕೆಟಿಗ

ಕೇಳಿದ್ರಲ್ಲ ವೀಕ್ಷಕರೇ, ಅಶ್ವಿನ್​​​, ಜೈಸ್ವಾಲ್​​ ಬಗ್ಗೆ ಹೇಳಿದ ಮಾತುಗಳನ್ನ. ಅಶ್ವಿನ್​ ಹೇಳಿದ್ದು 100 ಪರ್ಸಂಟ್​ ಕರೆಕ್ಟ್​​​​. ಅತಿಶಯೋಕ್ತಿ ಏನಲ್ಲ. ಹಾಗಾದ್ರೆ ಪಂತ್ ಹಾಗೂ ಜೈಸ್ವಾಲ್​​​​​ಗೆ ಇರುವ ಸಿಮಿಲಾರಿಟಿ ಏನು ಅನ್ನೋದನ್ನ ತೋರಿಸ್ತೀವಿ ನೋಡಿ

ಜೈಸ್ವಾಲ್​​-ಪಂತ್​ಗಿರೋ ಸಾಮ್ಯತೆಗಳು 

– ಅಟ್ಯಾಕಿಂಗ್ ಬ್ಯಾಟ್ಸ್​​ಮನ್
– ಇಬ್ಬರು ಎಡಗೈ ಬ್ಯಾಟರ್ಸ್​
– ಎಲ್ಲ ಸಂದರ್ಭದಲ್ಲಿ ನಿರ್ಭೀತ ಆಟ
– ಕಂಡಿಷನ್​​​, ಬೌಲರ್ಸ್​ ಮ್ಯಾಟರ್​ ಆಗಲ್ಲ
– ಪಂದ್ಯದ ಗತಿ ಬದಲಿಸುವ ಸಾಮರ್ಥ್ಯ

ರಿಷಬ್​ ಪಂತ್ ಹಾಗೂ ಜೈಸ್ವಾಲ್​ ಬೇಸಿಕಲಿ ಅಟ್ಯಾಕಿಂಗ್ ಬ್ಯಾಟ್ಸ್​​ಮನ್​​​. ಇಬ್ಬರು ಎಡಗೈ ಬ್ಯಾಟ್ಸ್​​​ಮನ್​​ಗಳು ಹೌದು. ಎಲ್ಲಾ ಸಂದರ್ಭಗಳಲ್ಲಿ ಕೊಂಚವು ಭಯವಿಲ್ಲದೇ ಬ್ಯಾಟ್ ಬೀಸ್ತಾರೆ. ಇವರಿಗೆ ಕಂಡಿಷನ್ ಹಾಗೂ ಎದುರಾಳಿ ಬೌಲರ್ ಮ್ಯಾಟರ್ ಆಗಲ್ಲ. ಯಾವುದೇ ಕ್ಷಣದಲ್ಲಿ ಪಂದ್ಯದ ಗತಿ ಬದಲಿಸುವ ಕೆಪಾಸಿಟಿ ಹೊಂದಿದ್ದಾರೆ.

ಅದೇನೆ ಇರಲಿ. ಭಾರತ ತಂಡದಲ್ಲಿ ಪಂತ್ ಇಲ್ಲ ಅನ್ನೋ ಕೊರಗು ಕಳೆದ ವರ್ಷದಿಂದ ಕಾಡ್ತಿದೆ. ಇದೀಗ ಆ ಕೊರಗನ್ನ ಜೈಸ್ವಾಲ್​ ನೀಗಿಸಿದ್ದಾರೆ. ಪಂತ್​ ಕಮ್​​ಬ್ಯಾಕ್​ ಮಾಡಿದಾಗ ಇಬ್ಬರೂ ಟೀಮ್​ ಇಂಡಿಯಾದಲ್ಲಿ ಒಂದಾದ್ರೆ, ಎದುರಾಳಿ ಬೌಲರ್​ಗಳು ನಿದ್ದೇನೆ ಮಾಡಲ್ಲ.

​​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೀಂ ಇಂಡಿಯಾಗೆ ಸಿಕ್ಕ ಯಂಗ್​ ಗನ್​ ಈತ! ಪಂತ್ ರಿಪ್ಲೇಸರ್​​​​ ಯಾರು ಅನ್ನೋ ಪ್ರಶ್ನೆಗೆ ಸಿಕ್ತು ಉತ್ತರ

https://newsfirstlive.com/wp-content/uploads/2024/01/jaisawal.jpg

Load More