16ನೇ ವಯಸ್ಸಿಗೆ ಏಮ್ಸ್​ಗೆ ಎಂಟ್ರಿ, MBBS​ ಡಾಕ್ಟರ್​!22ಕ್ಕೆ IASಅಧಿಕಾರಿ! ಈಗ ಎಷ್ಟು ಸಾವಿರ ಕೋಟಿ ಒಡೆಯ?

author-image
Gopal Kulkarni
Updated On
16ನೇ ವಯಸ್ಸಿಗೆ ಏಮ್ಸ್​ಗೆ ಎಂಟ್ರಿ, MBBS​ ಡಾಕ್ಟರ್​!22ಕ್ಕೆ IASಅಧಿಕಾರಿ! ಈಗ ಎಷ್ಟು ಸಾವಿರ ಕೋಟಿ ಒಡೆಯ?
Advertisment
  • ಸದಾ ಅಗಾಧವಾದ ಗುರಿಯನ್ನೇ ಬೆನ್ನಟ್ಟಿ ತಲುಪಿದ ಪ್ರತಿಭೆ
  • ವೈದ್ಯ, ಐಐಎಸ್ ಅಧಿಕಾರಿಯಾದರೂ ಆಗಲಿಲ್ಲ ಸಂತೃಪ್ತಿ!
  • ಕೊನೆಗೂ ಅಂದುಕೊಂಡಿದ್ದನ್ನು ಸಾಧಿಸಿದ ಛಲಗಾರನ ಕಥೆಯಿದು

ಮಾಡುವ ಕೆಲಸದಲ್ಲಿ ಶ್ರದ್ಧೆ , ಪ್ರಾಮಾಣಿಕತೆ ಸಮರ್ಪಣಾ ಭಾವ ಇದ್ದಲ್ಲಿ, ಯಾರೇ ಇರಲಿ ಯಶಸ್ಸಿನ ತುತ್ತತುದಿಯನ್ನು ತಲುಪಿ, ಜಗತ್ತಿನ ಹುಬ್ಬೇರಿಸುವಂತೆ ಮಾಡುವುದರಲ್ಲಿ ಅನುಮಾನವೇ ಇಲ್ಲ. ಜೀವನ ಎಲ್ಲದಕ್ಕೂ ಕಠಿಣ ಪರಿಶ್ರಮ ಬೇಡುತ್ತದೆ. ಅದರಾಚೆ ಗೆಲುವು ಎಂದಿಗೂ ಮರೀಚಿಕೆಯೇ. ಗೆಲ್ಲಬೇಕಾದವನು ಶ್ರಮ ಇಳಿಸಲೇಬೇಕು. ಅದಕ್ಕೆ ಸಾಕ್ಷಿಯಾಗಿ ಹಲವು ಯಶೋಗಾಥೆಯ ಕಥೆಗಳು ನಮಗೆ ಸಿಗುತ್ತವೆ. ಈಗ ನಾವು ಹೇಳಲು ಹೊರಟಿದ್ದು ಕೂಡ ಅಂತಹುದೇ ಕಠಿಣ ಪರಿಶ್ರಮ, ಶ್ರದ್ಧೆಯಿಂದ ಅತ್ಯಂತ ಕಡಿಮೆ ವಯಸ್ಸಿನಲ್ಲಿ ಯಶಸ್ಸಿನ ಅಂಗಳ ಮುಟ್ಟಿದ ಯುವಕನ ಬಗ್ಗೆ.

ರೋಮನ್ ಸೈನಿ, ಈ ಯುವಕ ನಡೆದು ಬಂದ ಹಾದಿ ಅನೇಕರಿಗೆ ಸ್ಪೂರ್ತಿಯನ್ನು ತುಂಬುತ್ತದೆ. ಸಾಧನೆಗೆ, ಸಾಹಸಗಳಿಗೆ ವಯಸ್ಸಿನ ಹಂಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ರೋಮನ್ ಸೈನಿ ತನ್ನ 16ನೇ ವಯಸ್ಸಿಗೆ ಏಮ್ಸ್​ನ ಎಂಟರನ್ಸ್​ ಎಕ್ಸಾಂ ಪಾಸ್ ಮಾಡುತ್ತಾನೆ. ತನ್ನ 21ನೇ ವಯಸ್ಸಿಗೆ ಎಂಬಿಬಿಎಸ್​ ವೈದ್ಯನಾಗಿ ಸೇವೆ ಸಲ್ಲಿಸುತ್ತಾನೆ. ಇಷ್ಟಕ್ಕೆ ಆತನ ಕನಸುಗಳು ನಿಲ್ಲುವುದಿಲ್ಲ. ಮತ್ತೊಂದು ಎತ್ತರಕ್ಕೆ ನಾನು ಸಾಗಬೇಕು ಎಂದುಕೊಂಡ ಸೈನಿ ಕೊನೆಗೆ ಐಐಎಸ್​ ಅಧಿಕಾರಿಯಾಗಲು ನಿರ್ಧರಿಸುತ್ತಾನೆ.

ಇದನ್ನೂ ಓದಿ:38 ಪ್ಲೇನ್..300 ಕಾರ್​.. ಅದಾನಿ, ಅಂಬಾನಿಯಷ್ಟು ಶ್ರೀಮಂತನಲ್ಲದಿದ್ದರೂ ಐಷಾರಾಮಿ ಬದುಕಿನ ‘ರಾಜ’ ಈತ

22ನೇ ವಯಸ್ಸಿನಲ್ಲಿ ಯುಪಿಎಸ್​ಸಿ-ಸಿಎಸ್​ಇ ಪರೀಕ್ಷೆಯನ್ನೂ ನೀರು ಕುಡಿದಂತೆ ಮುಗಿಸಿದ ಈತ ಐಎಎಸ್​ ಅಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಾನೆ. ಇದಾದರೂ ಕೂಡ ರೋಮನ್​ ಕನಸುಗಳು ಅಲ್ಲಿಗೆ ನಿಲ್ಲುವುದಿಲ್ಲ. ಇನ್ನೂ ಅಗಾಧವಾದದ್ದನ್ನು ಏನಾದರೂ ಮಾಡಬೇಕು ಎಂಬ ಹಂಬಲ ಶುರುವಾಗುತ್ತಲೇ ಇರುತ್ತದೆ. ಕನಸುಗಾರನ ಕನಸಿಗೆ ಮತ್ತಷ್ಟು ರೆಕ್ಕೆಪುಕ್ಕಗಳು ಸೇರಿ ಸಾಧನೆಗೆ ಆಕಾಶವೇ ಮಿತಿ ಎಂದು ತಮ್ಮದೇ ಆದ ಒಂದು ಎಕಾಡಮಿ ತೆರೆಯಲು ಸಜ್ಜಾಗುತ್ತಾರೆ. ರೋಮನ್ ಹಾಗೂ ಅವರ ಸ್ನೇಹಿತರಾದ ಗೌರವ್ ಮುಂಜಾಲ್ ಮತ್ತು ಹಮೇಶ್ ಸಿಂಗ್ ಸೇರಿ ಅನಅಕಾಡಮಿಕ್ ಎಂಬ ಯೂಟ್ಯೂಬ್ ಚಾನೆಲ್​ನ್ನು ತೆರೆಯುತ್ತಾರೆ.ಆರಂಭದಲ್ಲಿ ಯೂಟ್ಯೂಬ್ ಚಾನೆಲ್ ಆಗಿದ್ದ ಇದು ಮುಂದೆ ಒಂದು ಬೃಹತ್ತಾದ ಎಡ್​ಟೆಕ್​ ವೇದಿಕೆಯಾಗುತ್ತದೆ. ಸದ್ಯ ರೋಮನ್ ಸೈನಿ ಒಟ್ಟು ಆಸ್ತಿ ಸುಮಾರು 26 ಸಾವಿರ ಕೋಟಿ ಅಂದ್ರೆ ನೀವು ನಂಬಲೆಬೇಕು.

ಇದನ್ನೂ ಓದಿ:ವಿಶ್ವದಲ್ಲೇ ಅತ್ಯಂತ ದುಬಾರಿ ನೀರಿನ ಬಾಟಲ್ ಕಣ್ರೀ ಇದು.. ಇದರ ಬೆಲೆ ಸಾವಿರ ಅಲ್ಲ ಲಕ್ಷ, ಲಕ್ಷ!

ರಾಜಸ್ಥಾನದ ರೈಕಾರಾಣಪುರ ಎಂಬ ಸಾಧಾರಣವಾದ ಒಂದು ಊರಿನಿಂದ ಆಚೆ ಬಂದ ಪ್ರತಿಭೆ ರೋಮನ್ ಸೈನಿ. ತಾಯಿ ಗೃಹಿಣಿ ತಂದೆ ಇಂಜನೀಯರ್​. ಬಾಲ್ಯದಲ್ಲಿಯೇ ಕನಸಿಗೆ ರೆಕ್ಕೆಗಳನ್ನು ಕಟ್ಟಿಕೊಂಡು ಹಾರಲು ಶುರುಮಾಡಿದ ರೋಮನ್ ಸೈನಿ, ಎಂದಿಗೂ ಕೂಡ ಸಾಧನೆಯ ಪಥದಲ್ಲಿ ಇಷ್ಟು ನಡೆದಿದ್ದು ಸಾಕು ಎಂದು ಸುಸ್ತಾಗಿ ಕುಳಿತುಕೊಂಡಿಲ್ಲ. ಏನಾದರೂ ಸಾಧಿಸುವುದು. ಆಮೇಲೆ ಅದಕ್ಕಿಂತ ದೊಡ್ಡದು. ಬಳಿಕ ಅಗಾಧವಾದದ್ದು, ನಂತರ ಬೃಹತ್ ಆದದ್ದು ಹೀಗೆ ದೊಡ್ಡ ಕನಸುಗಳ ಗಮ್ಯದತ್ತಲೇ ಹಾರಿದರು ಮತ್ತು ಸಾಧಿಸಿದರು. ಇಂದು ಸಾಧನೆಯ ಪಥದಲ್ಲಿ ಸಾಗಬೇಕು ಎಂಬ ಕನಸು ಕಾಣುತ್ತಿರುವ ಯುವ ಪೀಳಿಗೆಗೆ ತಾವು ನಡೆದ ಹಾದಿಯಲ್ಲಿ ತಮ್ಮ ಹೆಜ್ಜೆ ಗುರುತು ಬಿಟ್ಟು ನಿಂತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment