ವೈದ್ಯರು ಇನ್ನಿಲ್ಲ ಎಂದು ಘೋಷಿಸಿದ್ರು.. ದೇಹ ವಾಪಸ್​ ತರುವಾಗ ರಸ್ತೆಯಲ್ಲಿ ನಡೀತು ದೊಡ್ಡ ಪವಾಡ..!

author-image
Ganesh
Updated On
ವೈದ್ಯರು ಇನ್ನಿಲ್ಲ ಎಂದು ಘೋಷಿಸಿದ್ರು.. ದೇಹ ವಾಪಸ್​ ತರುವಾಗ ರಸ್ತೆಯಲ್ಲಿ ನಡೀತು ದೊಡ್ಡ ಪವಾಡ..!
Advertisment
  • ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿಗೆ ಮರುಜನ್ಮ ಕೊಟ್ಟ ಸ್ಪೀಡ್ ಬ್ರೇಕರ್
  • ಕಾರ್ಯಗಳನ್ನು ಮಾಡಲು ಮೃತದೇಹ ತರುತ್ತಿದ್ದಾಗ ರಸ್ತೆಯಲ್ಲಿ ಆಗಿದ್ದೇನು?
  • ಕುಟುಂಬದಲ್ಲಿ ಶೋಕ ಮುಡುಗಟ್ಟಿ, ಸಂತಸದ ಅಲೆ ಬಂದಿದ್ದು ಹೇಗೆ..?

ಕೆಲವೊಮ್ಮೆ ನಮ್ಮ ಸುತ್ತಮುತ್ತ ವೈದ್ಯಲೋಕವನ್ನೂ ಮೀರಿದ ಪವಾಡಗಳು ಸಂಭವಿಸುತ್ತವೆ. ಅಂತೆಯೇ ಪ್ರಾಣ ಕಳೆದುಕೊಂಡಿದ್ದಾನೆ ಆ್ಯಂಬುಲೆನ್ಸ್​ ಮೂಲಕ ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬರ್ತಿದ್ದಾಗ ಎದ್ದು ಕೂತ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಆಗಿದ್ದೇನು..?

ವ್ಯಕ್ತಿಯ ಹೆಸರು ಪಾಂಡುರಂಗ್ ಉಲ್ಪೆ. ವಯಸ್ಸು 65. ಕೊಲ್ಲಾಪುರ ಜಿಲ್ಲೆಯ ಕಸಾಬ-ಬವಾಡದವರು. ಇವರಿಗೆ ಡಿಸೆಂಬರ್ 16 ರಂದು ಮುಂಜಾನೆ ಹೃದಯಾಘಾತ ಸಂಭವಿಸಿತ್ತು. ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದರು. ತಪಾಸಣೆ ನಡೆಸಿದ ವೈದ್ಯರು ವ್ಯಕ್ತಿಯ ಜೀವ ಹೋಗಿದೆ. ಯಾವುದೇ ಪ್ರಯೋಜನ ಇಲ್ಲ. ವಾಪಸ್ ತೆಗೆದುಕೊಂಡು ಹೋಗಿ ಎಂದಿದ್ದಾರೆ.

ಇದನ್ನೂ ಓದಿ:ಬೆಂಗಳೂರಿಗೆ ಮತ್ತೊಂದು ಕೋರಮಂಗಲ.. ಬಾಡಿಗೆ, ಸೈಟ್‌ಗಳ ಬೆಲೆಯಲ್ಲಿ ಭಾರೀ ಏರಿಕೆ; ಏನಿದರ ವಿಶೇಷ?

ಬೇಸರಗೊಂಡ ಕುಟುಂಬಸ್ಥರು ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ವಾಪಸ್ ತೆಗೆದುಕೊಂಡು ಹೋಗಲು ಮುಂದಾಗಿದ್ದಾರೆ. ಅಂತೆಯೇ ಆ್ಯಂಬುಲೆನ್ಸ್​ ಉಲ್ಪೆ ನಿವಾಸದ ಕಡೆಗೆ ಹೊರಟಿತ್ತು. ಈ ಮಧ್ಯೆ ರಸ್ತೆಯಲ್ಲಿದ್ದ ಸ್ಪೀಡ್​ ಬ್ರೇಕರ್​ ಕ್ರಾಸ್ ಮಾಡುವಾಗ ಆ್ಯಂಬುಲೆನ್ಸ್​ ಮೇಲೆತ್ತರಕ್ಕೆ ಜಿಗಿದಿದೆ. ಆಗ ಉಸಿರು ನಿಲ್ಲಿಸಿ ಮಲಗಿದ್ದ ವ್ಯಕ್ತಿಯ ದೇಹದಲ್ಲಿ ರಕ್ತ ಚಲನೆ ಉಂಟಾಗಿದೆ. ಅಲ್ಲದೇ ಕಣ್ಣು ಬಿಟ್ಟಿದ್ದಾನೆ. ಇದನ್ನು ಗಮನಿಸಿದ ಸಂಬಂಧಿಕರು ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಚೇತರಿಸಿಕೊಂಡಿರುವ ಉಲ್ಪೆ, ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ವಾಪಸ್ ಆಗಿದ್ದಾರೆ.

ಇದನ್ನೂ ಓದಿ:ಧಾರವಾಡಕ್ಕೆ ಗುಡ್​ನ್ಯೂಸ್​; ಪಟಾಕಿ ಸಿಡಿಸಿ, ಫೇಮಸ್​ ಪೇಡ ತಿನ್ನಿಸಿ.. ಈ ಸಂಭ್ರಮಾಚರಣೆ ಯಾಕೆ ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment