/newsfirstlive-kannada/media/post_attachments/wp-content/uploads/2025/01/HEART-ATTACK-CAS.jpg)
65 ವರ್ಷದ ಪಾಂಡುರಂಗ ಉಲ್ಪೆ ಎನ್ನುವವರಿಗೆ ಡಿಸೆಂಬರ್ 16 ರಂದು ಹೃದಯಾಘಾತವಾಗಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ವೈದ್ಯರು ತಪಾಸಣೆ ಮಾಡಿ ಪಾಂಡುರಂಗ ಬದುಕಿಲ್ಲ, ವಾಪಸ್ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಕಸಬಾ ಬಾವಡಾ ಎಂಬ ಕೊಲ್ಲಾಪುರ ಜಿಲ್ಲೆಯಲ್ಲಿ ಈ ಒಂದು ಘಟನೆ ನಡೆದಿದೆ. ವೈದ್ಯರು ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಹೇಳಿದ ಮೇಲೆ ಅದೇ ಆ್ಯಂಬುಲೆನ್ಸ್​ನಲ್ಲಿ ದೇಹವನ್ನು ತೆಗೆದುಕೊಂಡು ಬರುವಾಗ ಇತ್ತ ಮನೆಯಲ್ಲಿ ಸಂಬಂಧಿಕರು ಹಾಗೂ ನೆರೆಹೊರೆಯವರು ಅಂತಿಮ ಸಂಸ್ಕಾರಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡುತ್ತಿದ್ದರು ಅಷ್ಟರಲ್ಲಿಯೇ ಒಂದು ಪವಾಡ ನಡೆದು ಹೋಗಿದೆ.
ಇದನ್ನೂ ಓದಿ:ಅಮ್ಮ ನೀನೇಕೆ ಎಷ್ಟು ಕ್ರೂರಿಯಾದೆ..? ಮುದ್ದಾದ ಅವಳಿ ಮಕ್ಕಳ ಜೀವ ತೆಗೆದ ತಾಯಿ..
ಆ್ಯಂಬುಲೆನ್ಸ್​ನಲ್ಲಿ ಮೃತದೇಹವನ್ನು ತರುವಾಗ ಒಂದು ರೋಡ್​ಬ್ರೇಕರ್​ ಮೇಲೆ ಆ್ಯಂಬೆಲೆನ್ಸ್ ವೇಗವಾಗಿ ಹೋದಾಗ ಪಾಂಡುರಂಗ ಉಲ್ಪೆಯ ಬೆರಳುಗಳು ಸರಿದಾಡಿದ್ದನ್ನು ನೋಡಿದ್ದಾರೆ ಅವರ ಪತ್ನಿ. ಕೂಡಲೇ ಅದನ್ನು ಡ್ರೈವರ್ ಗಮನಕ್ಕೆ ತಂದಿದ್ದೇ ತಡ, ಆ್ಯಂಬೆಲೆನ್ಸ್ ಬೇರೋಂದು ಆಸ್ಪತ್ರೆಯತ್ತ ಧಾವಿಸಿದೆ. ಅಲ್ಲಿ ಅವರು ಹದಿನೈದು ದಿನಗಳ ಕಾಲ ದಾಖಲಾಗಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಪಡೆದುಕೊಂಡು ನಂತರ ಮನೆಗೆ ನಡೆದುಕೊಂಡು ಬರುವಷ್ಟು ಹುಷಾರಾಗಿದ್ದಾರೆ.
ಇದನ್ನೂ ಓದಿ:ಪಾಕಿಸ್ತಾನದ ಸೀಮಾ ಹೈದರ್ ಮಗುಗೆ ಭಾರತೀಯ ಪೌರತ್ವ ಸಿಗುತ್ತಾ? ಕಾನೂನು ಏನು ಹೇಳುತ್ತೆ?
ವಿಷಯವನ್ನು ಸ್ಥಳೀಯ ಮಾಧ್ಯಮಗಳೊಂದಿಗೆ ಹಂಚಿಕೊಂಡ ಉಲ್ಪೆ, ಡಿಸೆಂಬರ್ 16ರಂದು ನಾನು ವಾಕಿಂಗ್ ಮುಗಿಸಿಕೊಂಡು ಒಂದು ಕಪ್ ಟೀ ಕುಡಿದು ಕುಳಿತಕೊಂಡಿದ್ದೆ. ನನಗೆ ಏಕಾಏಕಿ ಉಸಿರಾದಲ್ಲಿ ತೊಂದರೆಯಾಯ್ತು. ಬಾತ್​ರೂಮ್​ಗೆ ಹೋಗಿ ವಾಂತಿ ಮಾಡಿಕೊಂಡರೆ ಅದಾದ ಮೇಲೆ ಏನಾಯ್ತು ಅಂತ ನೆನಪಿಲ್ಲ. ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಕೂಡ ನೆನಪಿಲ್ಲ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us