/newsfirstlive-kannada/media/post_attachments/wp-content/uploads/2025/03/Rishabh_Panth_Dhoni.jpg)
ಐಪಿಎಲ್ ಪಂದ್ಯದ ಜಿದ್ದಾಜಿದ್ದಿನ ಕಾಳಗದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆ ಕ್ಷಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪಂದ್ಯವನ್ನು ಕೈ ಚೆಲ್ಲಿದೆ. ಕ್ರಿಕೆಟ್ ಲೋಕದಲ್ಲಿ ಸದ್ಯ ಈ ಪಂದ್ಯ ಚರ್ಚೆಗೆ ಕಾರಣವಾಗಿದೆ. 210 ರನ್ಗಳ ಚೇಸಿಂಗ್ ಸಾಮಾನ್ಯ ಅಲ್ಲವೇ ಅಲ್ಲ. ಆದರೆ ಇದನ್ನೇ ಮುಂದಿಟ್ಟುಕೊಂಡು ಕೆಲವರು ಲಕ್ನೋ ನಾಯಕ ರಿಷಭ್ ಪಂತ್ ಕಡೆ ಬೊಟ್ಟು ಮಾಡಿದ್ರೆ, ಭಾರತದ ಮಾಜಿ ಆಟಗಾರ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಕ್ರೂಶಿಯಲ್ ಸಮಯದಲ್ಲಿ ಸ್ಪಿನ್ನರ್ಗಳನ್ನು ನಂಬುವ ವಿಷಯಕ್ಕೆ ಬಂದಾಗ ಎಂ.ಎಸ್ ಧೋನಿಯಂತೆ ಕೊನೆಯಲ್ಲಿ ರಿಷಭ್ ಪಂತ್ ನಿರ್ಧಾರ ತೆಗೆದುಕೊಂಡರು ಎನ್ನಬಹುದು. ಪಂತ್ ಅವರ ಪ್ಲಾನ್ ಸರಿಯಾಗಿ ಇದ್ದಿರಬಹುದು. ಆದರೆ ಅದನ್ನು ಪ್ಲೇ ಮಾಡುವಾಗ ಏನಾದರೂ ಆಗಬಹುದು. ಅದೇ ಪಂದ್ಯದಲ್ಲಿ ಆಗಿದೆ ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.
ಇದನ್ನೂ ಓದಿ:ಮೋದಿ ಸ್ಟೇಡಿಯಂನಲ್ಲಿ ರನ್ಗಳ ಹೊಳೆ ಪಕ್ಕಾ.. ಗುಜರಾತ್ vs ಪಂಜಾಬ್ಗೆ ಟಾಸ್ ಮುಖ್ಯ ಆಗುತ್ತಾ?
ಪಂತ್ ಅವರು ಐಪಿಎಲ್ ಆಡುವುದು ಹೊಸದೇನು ಅಲ್ಲ. ಆದರೆ ಅವರ ಪ್ಲಾನ್ಗಳು ವರ್ಕೌಟ್ ಆಗದೇ ಇದ್ದಾಗ ತೀವ್ರ ಟೀಕೆಗಳನ್ನು ಪಂತ್ ಎದುರಿಸುತ್ತಿದ್ದಾರೆ. ಈ ಪಂದ್ಯದ ಕೊನೆಯಲ್ಲಿ ಸ್ಪಿನ್ನರ್ ಕೈಗೆ ಚೆಂಡು ಕೊಟ್ಟಿದ್ದನ್ನ ಮೆಚ್ಚಲೇಬೇಕು. ಆದರೆ ಇದು ಕೆಲವೊಮ್ಮೆ ಫಲ ಕೊಟ್ಟರೇ, ಕೆಲವೊಮ್ಮೆ ಫಲ ನೀಡಲ್ಲ ಎಂದು ಹೇಳಿದ್ದಾರೆ.
ಕೊನೆ ಕ್ಷಣದಲ್ಲಿ ಪಂತ್ ಕಾರ್ಯತಂತ್ರದಂತೆ ಸ್ಪಿನ್ನರ್ ಶಹಬಾಜ್ ಅಹಮದ್, ಡೆಲ್ಲಿಯ ಒಂದೇ ಒಂದು ವಿಕೆಟ್ ಪಡೆದಿದ್ರೆ ಪಂತ್ ಒಬ್ಬ ಮಾಸ್ಟರ್ ತಂತ್ರಜ್ಞ ಎಂದು ಎಲ್ಲರೂ ಪ್ರಶಂಸಿಸುತ್ತಿದ್ದರು. ಇನ್ನು ಇದು ಐಪಿಎಲ್ ಆರಂಭ ಮಾತ್ರ. ಎಲ್ಎಸ್ಜಿಗೆ ಪುಟಿದೇಳಲು ಇನ್ನು ಅವಕಾಶಗಳಿವೆ. ಟೀಕೆಗಳು ಬರುತ್ತವೆ, ಹೋಗುತ್ತವೆ. ಆದ್ರೆ ರಿಷಭ್ ಪಂತ್ ಅವರಿಗೆ ರಾಯುಡು ಅವರಂಥಹ ಬೆಂಬಲದ ಬೇಕಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ