/newsfirstlive-kannada/media/post_attachments/wp-content/uploads/2024/01/Pant_KL-Rahul.jpg)
ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಯಾರ್ ವಿಕೆಟ್ ಕೀಪರ್ ಆಗ್ತಾರೆ?. ಇದು ಟೀಮ್ ಅನೌನ್ಸ್ಗೂ ಮುನ್ನವೇ ಹುಟ್ಟಿಕೊಂಡ ಪ್ರಶ್ನೆ. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆದರೆ, ಈ ಉತ್ತರದ ಜೊತೆಗೆ ಮತ್ತೊಂದು ಪ್ರಶ್ನೆ ಉದ್ಭುವವಾಗಿದೆ. ಅದೇ ರಿಷಬ್ ಪಂತ್ ಭವಿಷ್ಯ.
ವಿಕೆಟ್ ಕೀಪರ್.. ಪ್ರತಿ ಐಸಿಸಿ ಇವೆಂಟ್ಸ್ನಲ್ಲಿ, ಪ್ರತಿ ಸರಣಿಯಲ್ಲೂ ಈತನ ರೋಲ್ ಮೋಸ್ಟ್ ಇಂಪಾರ್ಟೆಂಟ್. ಕ್ಯಾಪ್ಟನ್ಗೆ ಇರುವಷ್ಟೇ ಜವಾಬ್ದಾರಿ ಈ ವಿಕೆಟ್ ಕೀಪರ್ ಆ್ಯಂಡ್ ಬ್ಯಾಟರ್ ಮೇಲಿರುತ್ತದೆ. ವಿಕೆಟ್ ಹಿಂದೆ ಜಾದೂ ಮಾಡುವ ಜೊತೆಗೆ ವಿಕೆಟ್ ಮುಂದೆ ಪರ್ಫಾರ್ಮ್ ಮಾಡಬೇಕು. ಗೇಮ್ ರೀಡ್ ಮಾಡಬೇಕು. ಇಂಥಹ ರೋಲ್ಗೆ ಫಸ್ಟ್ ವಿಕೆಟ್ ಕೀಪರ್ ಆ್ಯಂಡ್ ಬ್ಯಾಟರ್ ಚಾಯ್ಸ್ ಯಾರು ಅಂದ್ಹಾಗೆ ಕೇಳಿ ಬರುವ ಹೆಸರುಗಳೇ ಡೆಲ್ಲಿ ಡ್ಯಾಶರ್ ರಿಷಬ್ ಪಂತ್ ಆ್ಯಂಡ್ ಕೆಎಲ್.ರಾಹುಲ್.
ಪ್ರತಿ ಸಲ ಟೀಮ್ ಇಂಡಿಯಾದ ಫಸ್ಟ್ ಚಾಯ್ಸ್ ವಿಕೆಟ್ ಕೀಪರ್ ಯಾರು ಅಂದ್ರೆ, ಬಹುತೇಕರು ಸ್ಪೆಷಲಿಸ್ಟ್ ವಿಕೆಟ್ ಕೀಪರ್ ರಿಷಬ್ ಪಂತ್ ಹೆಸರನ್ನೇ ಸೂಚಿಸ್ತಾರೆ. ಇನ್ಫ್ಯಾಕ್ಟ್- ದಿಗ್ಗಜ ಆಟಗಾರರು, ಸ್ಪೆಷಲಿಸ್ಟ್ಗಳೂ ಕೂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಫಸ್ಟ್ ಚಾಯ್ಸ್ ವಿಕೆಟ್ ಕೀಪರ್ ಪಂತ್ ಅಂತಾನೇ ಭವಿಷ್ಯ ನುಡಿದಿದ್ದುಂಟು. ಆದ್ರೀಗ ಇದೆಲ್ಲವೂ ಬದಲಾಗಿದೆ.
ಊಹಾಪೋಹಕ್ಕೆ ಹೆಡ್ ಕೋಚ್ ಗೌತಮ್ ಗಂಭೀರ್ ತೆರೆ
ಇಂಗ್ಲೆಂಡ್ ಸರಣಿ ಆರಂಭಕ್ಕೂ ಮುನ್ನವೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಯಾರ್ ಆಗ್ತಾರೆ ಎನ್ನುವ ಡಿಬೇಟ್ ಜೋರಾಗಿತ್ತು. ಪಂತ್ ಹಾಗೂ ಕೆ.ಎಲ್ ರಾಹುಲ್ ನಡುವೆ ನೇರಾನೇರ ಪೈಪೋಟಿ ಇತ್ತು. ಆದ್ರೆ, ಈ ಪೈಪೋಟಿಯಲ್ಲಿ ಬಹುತೇಕರು ಪಂತ್, ಬೆಸ್ಟ್ ಚಾಯ್ಸ್ ಅನ್ನೋದನ್ನೇ ಸಾರಿ ಸಾರಿ ಹೇಳಿದ್ದರು. ಇಂಗ್ಲೆಂಡ್ ಎದುರಿನ 2ನೇ ಏಕದಿನ ಪಂದ್ಯದ ಬಳಿಕವಂತೂ ಮತ್ತಷ್ಟು ಕೆ.ಎಲ್ ರಾಹುಲ್ಗೆ ಬೆಂಚ್ ಗತಿ ಅಂತಾನೇ ಭವಿಷ್ಯ ಹೇಳಿದರು. ಆದ್ರೀಗ ಈ ಅಂತೆ ಕಂತೆಗಳಿಗೆಲ್ಲಾವೂ ಹೆಡ್ ಕೋಚ್ ಗೌತಮ್ ಗಂಭೀರ್, ಫುಲ್ ಸ್ಟಾಪ್ ಇಟ್ಟಿದ್ದಾರೆ.
ನಾನು ಈಗ ಕೆಎಲ್ ರಾಹುಲ್ ಅವರು ನಮ್ಮ ತಂಡದ ನಂಬರ್ ಒನ್ ವಿಕೆಟ್ ಕೀಪರ್ ಎಂದು ಹೇಳಬಲ್ಲೆ. ಪ್ರಸ್ತುತ ರಾಹುಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇಬ್ಬರು ವಿಕೆಟ್ ಕೀಪರ್ಗಳಿದ್ದಾಗ ಇಬ್ಬರೊಂದಿಗೂ ಆಡಲು ಸಾಧ್ಯವಿಲ್ಲ. ಯಾವಾಗ ಚಾನ್ಸ್ ಸಿಗುತ್ತೋ ಆಗ ಉತ್ತಮ ಪ್ರದರ್ಶನ ನೀಡಲು ರೆಡಿಯಾಗಿರಬೇಕು. ಇದೊಂದೆ ನಾನು ಹೇಳಬಲ್ಲೆ. ಸದ್ಯ ನಾವು ರಾಹುಲ್ ಜೊತೆ ಆರಂಭಿಸುತ್ತೇವೆ.
ಗೌತಮ್ ಗಂಭೀರ್, ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್
ಈ ಒಂದೇ ಒಂದು ಮಾತಿನಿಂದ ವಿಕೆಟ್ ಕೀಪರ್ ಡಿಬೇಟ್ಗೆ ಗಂಭೀರ್ ಬ್ರೇಕ್ ಹಾಕಿದ್ದಾರೆ. ಕೆಎಲ್ ರಾಹುಲ್, ಚಾಂಪಿಯನ್ಸ್ ಟ್ರೋಫಿಯಲ್ಲಿ ವಿಕೆಟ್ ಕೀಪರ್ ರೋಲ್ ಪ್ಲೇ ಮಾಡ್ತಾರೆ ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ. ಆದ್ರೆ, ಇದೇ ಹೇಳಿಕೆ ಪಂತ್ ಭವಿಷ್ಯದ ಪ್ರಶ್ನೆ ಹುಟ್ಟಿಕೊಂಡಿದೆ.
ಕೀಪಿಂಗ್ ಸೂಪರ್.. ಬ್ಯಾಟಿಂಗ್ ಬೊಂಬಾಟ್..!
ಪಂತ್ ಟೀಮ್ ಇಂಡಿಯಾದ ಡೇರ್ ಡೆವಿಲ್ ಬ್ಯಾಟರ್. ವಿಕೆಟ್ ಹಿಂದೆ ಜಾದೂ ಮಾಡುವ ಪಂತ್, ವಿಕೆಟ್ ಮುಂದೆ ಗೇಮ್ ಚೇಂಜರ್ ಪ್ಲೇಯರ್. ಹೊಡಿಬಡಿ ಆಟಕ್ಕೆ ಹೆಸರುವಾಸಿ. 5ನೇ ಕ್ರಮಾಂಕದಲ್ಲಿ ಆಡಿರುವ 7 ಪಂದ್ಯಗಳಿಂದ 310 ರನ್ ಗಳಿಸಿದ್ದಾರೆ. ಅದು ಕೂಡ 136ರ ಬ್ಯಾಟಿಂಗ್ ಸ್ಟ್ರೈಕ್ರೇಟ್ನಲ್ಲಿ.
ಲೋವರ್ ಆರ್ಡರ್ನಲ್ಲಿ ಕೌಂಟರ್ ಅಟ್ಯಾಕ್ ಮಾಡಬಲ್ಲ ಪಂತ್, ವಿಕೆಟ್ ಹಿಂದೆ ಚುರುಕಿನ ಕೀಪಿಂಗ್ ಮಾಡಬಲ್ಲವರು. ಆದ್ರೆ, 2 ವರ್ಷದಿಂದ ಜಸ್ಟ್ ಒಂದೇ ಒಂದು ಏಕದಿನ ಪಂದ್ಯವನ್ನಷ್ಟೇ ಆಡಿರುವ ಪಂತ್, ಇಂಗ್ಲೆಂಡ್ ಎದುರಿನ ಸರಣಿಯಲ್ಲೂ ಬೆಂಚ್ ಕಾದಿದ್ದಾರೆ. ಆದ್ರೀಗ ಕೆಎಲ್ ರಾಹುಲ್ಗಿಂತ ಅಟ್ಯಾಕಿಂಗ್ ಬ್ಯಾಟಿಂಗ್ ಮಾಡಬಲ್ಲ ಪಂತ್ರನ್ನೇ ಸೆಕೆಂಡ್ ಚಾಯ್ಸ್ ವಿಕೆಟ್ ಕೀಪರ್ ಆಗಿ ಮಾಡ್ತಿರುವುದು ಮುಂದಿನ ಭವಿಷ್ಯ ಏನೆಂಬ ಪ್ರಶ್ನೆಗೆ ನಾಂದಿಯಾಡಿದೆ.
ಇದನ್ನೂ ಓದಿ: Dhananjay Dhanyatha Wedding; ಚಾಮುಂಡಿ ದೇವಿ ಗುಡಿಯಂತೆ ಕಲ್ಯಾಣ ಮಂಟಪ, ಹೇಗಿದೆ ಸಿದ್ಧತೆ?
ಕೆ.ಎಲ್.ರಾಹುಲ್ ಕೈ ಹಿಡಿದ 2023ರ ಏಕದಿನ ವಿಶ್ವಕಪ್ ಆಟ!
ಕೆ.ಎಲ್.ರಾಹುಲ್ಗಿಂತ ರಿಷಭ್ ಪಂತ್, ಬೆಸ್ಟ್ ವಿಕೆಟ್ ಕೀಪರ್ ನಿಜ. ಡೆಡ್ಲಿ ಬ್ಯಾಟರ್ ಅನ್ನೋದು ಸತ್ಯ. ಆದ್ರೆ, ರಾಹುಲ್, ಬೆಸ್ಟ್ ಒಡಿಐ ಮ್ಯಾಚ್ ಪ್ಲೇಯರ್. 2023ರ ಏಕದಿನ ವಿಶ್ವಕಪ್ನಲ್ಲಿ ಸಾಲಿಡ್ ಬ್ಯಾಟಿಂಗ್ ನಡೆಸಿದ್ದ ರಾಹುಲ್, ವಿಕೆಟ್ ಹಿಂದೆ ಮ್ಯಾಜಿಕ್ ಮಾಡಿದ್ದರು. ಕಷ್ಟದ ಮ್ಯಾಚ್ಗಳಲ್ಲಿ ಬಿಗ್ ರೂಲ್ ಪ್ಲೇ ಮಾಡಿ ಸೇವಿಯರ್ ಆಗಿದ್ದರು. ಇದೇ ಆಟವೇ ಈಗ ಕನ್ನಡಿಗನ ಪಾಲಿಗೆ ವರದಾನವಾಗಿದೆ.
ಆದ್ರೀಗ ಏಕದಿನ ವಿಶ್ವಕಪ್ನಲ್ಲಿ ತೋರಿದ್ದ ಪ್ರದರ್ಶನವನ್ನೇ ಕೆ.ಎಲ್.ರಾಹುಲ್, ಚಾಂಪಿಯನ್ಸ್ ಟ್ರೋಫಿಯಲ್ಲಿ ಮುಂದುವರಿಸಿದ್ರೆ. 2027ರ ಏಕದಿನ ವಿಶ್ವಕಪ್ ತನಕ ಕೆ.ಎಲ್.ರಾಹುಲ್, ಫಸ್ಟ್ ಚಾಯ್ಸ್ ವಿಕೆಟ್ ಕೀಪರ್ ಆಗೋದು ಗ್ಯಾರಂಟಿ. ಪಂತ್ ಭವಿಷ್ಯಕ್ಕೆ ಕುತ್ತಾಗುವುದರಲ್ಲಿ ಡೌಟೇ ಇಲ್ಲ.
ರಾಹುಲ್ ಫಸ್ಟ್ ಚಾಯ್ಸ್ ವಿಕೆಟ್ ಕೀಪರ್ ಆಗ್ತಿರೋದು. ಪಂತ್ ಪಾಲಿಗೆ ಹೊಸ ತಲೆನೋವು ಹುಟ್ಟಿಹಾಕಿದೆ. ಭವಿಷ್ಯವನ್ನು ಅಂತತ್ರಕ್ಕೆ ಸಿಲುಕಿಸ್ತಿದೆ. ಆದ್ರೆ, ಇದೆಲ್ಲವೂ ಕೆ.ಎಲ್.ರಾಹುಲ್, ಆಟದ ಮೇಲೆಯೇ ನಿರ್ಣಯವಾಗಲಿದ್ದು, ಯಾರಿಗೆ ಯಾರು ವಿಲನ್ ಆಗ್ತಾರೆ ಅನ್ನೋದನ್ನ ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ