newsfirstkannada.com

×

ದೊಡ್ಡ ತಪ್ಪು ಮಾಡಿದ ಗಂಭೀರ.. ಮುಖ್ಯ ಕೋಚ್ ಕೈಸುಟ್ಟುಕೊಂಡಿದ್ದು ಎಲ್ಲಿ..?

Share :

Published August 6, 2024 at 10:29am

Update August 6, 2024 at 11:29am

    ಸರಣಿ ಸೋಲಿನ ಭೀತಿಯಲ್ಲಿ ಟೀಮ್ ಇಂಡಿಯಾ

    ಕೋಚ್ ಗಂಭೀರ್ ತಂತ್ರಗಳೇ ಭಾರತಕ್ಕೆ ಮುಳುವಾಗ್ತಿದ್ಯಾ?

    ಹೆಡ್​​​​ಕೋಚ್​​ ಗಂಭೀರ್ ಮಾಡಿದ ಪ್ರಮಾದವೇನು..?

ಅತಿಯಾದ್ರೆ ಅಮೃತವೂ ವಿಷ ಅನ್ನೋ ಮಾತಿದೆ. ಸದ್ಯ ಈ ಮಾತು ಟೀಮ್ ಇಂಡಿಯಾದ ನೂತನ ಹೆಡ್​ಕೋಚ್ ಗೌತಮ್ ಗಂಭೀರ್​​​​​ಗೆ ಸಖತ್ ಸೂಟ್ ಆಗುತ್ತೆ. ಟಿ20 ಸರಣಿ ಗೆದ್ದ ಹುರುಪಿನಲ್ಲಿ ಏಕದಿನದಲ್ಲಿ ಚೇಂಜಸ್ ಮೇಲೆ ಚೇಂಜಸ್ ಮಾಡಿ ಕೈ ಸುಟ್ಟುಕೊಂಡಿದ್ದಾರೆ. ಸರಣಿ ಗೆಲ್ಲೋದಿರ್ಲಿ, ಸರಣಿ ಸಮಬಲ ಸಾಧಿಸೋದೇ ದೊಡ್ಡ ಸವಾಲಾಗಿದೆ. ಅಷ್ಟಕ್ಕೂ ಹೆಡ್​ಕೋಚ್​ ಗಂಭೀರ್​​​ ಮಹಾ ಪ್ರಮಾದ ಎಸಗಿದ್ದಾದ್ರು ಹೇಗೆ?

ಟಿ20 ಸರಣಿಯಲ್ಲಿ ಕ್ಲೀನ್​ಸ್ವೀಪ್ ಸಾಧಿಸಿದ ಟೀಮ್ ಇಂಡಿಯಾ ಅದೇ ಹುಮ್ಮಸ್ಸಿನಲ್ಲಿ ಲಂಕನ್ನರನ್ನ ಬೇಟೆಯಾಡುವ ಲೆಕ್ಕಾಚಾರದಲ್ಲಿತ್ತು. ಲೆಕ್ಕಚಾರಗಳೆಲ್ಲವೂ ಉಲ್ಟಾ ಆಗಿದೆ. ಮೊದಲ ಒನ್ಡೆ ಟೈ ಮಾಡಿಕೊಂಡ ರೋಹಿತ್​​ ಪಡೆ ಎರಡನೇ ಪಂದ್ಯದಲ್ಲಿ ಸೋತು ಸುಣ್ಣವಾಗಿದೆ. ಸರಣಿ ಗೆಲ್ಲುವ ಆಸೆಯು ಕಮರಿದೆ. ಟೀಮ್ ಇಂಡಿಯಾದ ಈ ಸ್ಥಿತಿಗೆ ಕಾರಣ ಹೆಡ್​ಕೋಚ್​​​ ಗೌತಮ್​ ಗಂಭೀರ್​​​.

ಇದನ್ನೂ ಓದಿ:ಲೈವ್ ಡಿಬೇಟ್​ನಲ್ಲಿ ಚಪ್ಪಲಿ ಹೊಡೆದ ಕೇಸ್​ಗೆ ಟ್ವಿಸ್ಟ್; ನಟಿ ಲಾವಣ್ಯ ಹೊಟ್ಟೆಗೆ ಬಲವಾದ ಪೆಟ್ಟು, ಆಸ್ಪತ್ರೆಯಲ್ಲಿ ಚಿಕಿತ್ಸೆ

ಕೋಚ್ ಗಂಭೀರ್ ತಂತ್ರಗಳೇ ಭಾರತಕ್ಕೆ ಮುಳುವು
ಮೊದಲ ಟಾಸ್ಕ್​ನಲ್ಲಿ ಸಕ್ಸಸ್ ಕಂಡ ಕೋಚ್ ಗಂಭೀರ್​​​​, ಅದೇ ಮ್ಯಾಜಿಕ್​​ ಅನ್ನು ಒನ್ಡೆ ಸರಣಿಯಲ್ಲಿ ಕಾಯ್ದುಕೊಳ್ಳುವಲ್ಲಿ ಫೇಲಾಗಿದ್ದಾರೆ. ಇದಕ್ಕೆಲ್ಲಾ ಕಾರಣ ಅವರ ಸ್ವಯಂಕೃತ ಅಪರಾಧ. ಲೆಫ್ಟಿ ರೈಟಿ ಕಾಂಬಿನೇಷನ್​ಗೆ ಒತ್ತು ಕೊಡಲು ಹೋಗಿ, ಮೊದಲೆರಡು ಪಂದ್ಯಗಳ ಬ್ಯಾಟಿಂಗ್ ಕ್ರಮಾಂಕದಲ್ಲಿ ಅತಿಯಾಗಿ ಬದಲಾವಣೆ ಮಾಡಿದ್ದಾರೆ. ಈ ಚೇಂಜಸ್​​ ಅವರಿಗೆ ತಿರುಗುಣ ಬಾಣವಾಗಿದೆ. ಒಂದೊಮ್ಮೆ ಗಂಭೀರ್​​ ಈ ಮಹಾ ಪ್ರಮಾದಗಳನ್ನ ಮಾಡದಿದ್ದಿದ್ರೆ ಟೀಮ್ ಇಂಡಿಯಾ ಬಳಿ ಸೋಲೇ ಸುಳಿಯುತ್ತಿರಲಿಲ್ಲ.

​ರಾಹುಲ್ ರನ್ನ 7ನೇ ಸ್ಲಾಟ್​​ನಲ್ಲಿ ಆಡಿಸಿದ್ದು ಸರಿನಾ?
ಕನ್ನಡಿಗ ಕೆ.ಎಲ್.ರಾಹುಲ್​​ 5ನೇ ಕ್ರಮಾಂಕದಲ್ಲಿ ಸಾಲಿಡ್ ರೆಕಾರ್ಡ್​ ಹೊಂದಿದ್ದಾರೆ. ಇದು ಗೊತ್ತಿದ್ದೂ ಗೊತ್ತಿದ್ದು, ಹೆಡ್​ಕೋಚ್ ಗಂಭೀರ್​ 2ನೇ ಏಕದಿನ ಪಂದ್ಯದಲ್ಲಿ ರಾಹುಲ್​ರನ್ನ 7ನೇ ಕ್ರಮಾಂಕದಲ್ಲಿ ಆಡಿಸಿದ್ದರು. ಇವರ ಜಾಗದಲ್ಲಿ ಅಕ್ಷರ್ ಪಟೇಲ್ ಆಡಿದ್ರು. ರಾಹುಲ್ ಸ್ಲಾಟ್​ನಲ್ಲಿ ಕಣಕ್ಕಿಳಿದ ಅಕ್ಷರ್​​​​​​​ ಕೂಡ ಬಿಗ್ ಇನ್ನಿಂಗ್ಸ್​ ಕಟ್ಟಲಿಲ್ಲ. ಒಂದೊಮ್ಮೆ ರಾಹುಲ್​​ ತಮ್ಮ ಫೇವರಿಟ್ ಸ್ಲಾಟ್​ನಲ್ಲಿ ಆಡಿದ್ರೆ ಸಮಯೋಚಿತ ಇನ್ನಿಂಗ್ಸ್ ಕಟ್ಟಿ ತಂಡವನ್ನು ಗೆಲುವಿನ ದಡ ಸೇರಿಸುತ್ತಿದ್ರು. ಹಿಂದೆ ಅನೇಕ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ.

ಇದನ್ನೂ ಓದಿ:‘ಕೊಹ್ಲಿ, ರೋಹಿತ್​ ಅಗತ್ಯವೇ ಇರಲಿಲ್ಲ’ ಗೌತಮ್ ಗಂಭೀರ್ ವಿರುದ್ಧ ನೆಹ್ರಾ ವಾಗ್ದಾಳಿ

ಶ್ರೇಯಸ್ ಅಯ್ಯರ್ ಸ್ಥಾನದಲ್ಲಿ ಶಿವಂ ದುಬೆಗೆ ಚಾನ್ಸ್
ಹೆಡ್​ಕೋಚ್​ ಗಂಭೀರ್​​ ಮಾಡಿದ ಎರಡನೇ ಬಿಗ್ಗೆಸ್ಟ್ ಬ್ಲಂಡನ್​ ಇದು. ಎರಡನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಔಟಾದ ಬಳಿಕ ಶ್ರೇಯಸ್ ಅಯ್ಯರ್ ಕಣಕ್ಕಿಳಿಯಬೇಕಿತ್ತು. ನೋಡಿದ್ರೆ ಶಿವಂ ದುಬೆ ಪ್ಯಾಡ್ ಕಟ್ಟಿ ಅಂಗಳಕ್ಕಿಳಿದ್ರು. ಯಾವುದೇ ಪ್ರಯೋಜವಾಗಲಿಲ್ಲ. ಶೂನ್ಯಕ್ಕೆ ಔಟಾಗಿ ಅವಕಾಶ ಕೈಚೆಲ್ಲಿದ್ರು. ಅತ್ತ 4ನೇ ಕ್ರಮಾಂಕದಲ್ಲಿ ಆಡಬೇಕಿದ್ದ ಶ್ರೇಯಸ್​ 6ನೇ ಕ್ರಮಾಂಕದಲ್ಲಿ ಆಡಿ ಒಂದಂಕಿಗೆ ಸುಸ್ತಾದ್ರು. ಗಂಭೀರ್​ ಸ್ಟ್ರಾಟಜಿ ವರ್ಕೌಟ್ ಆಗಲಿಲ್ಲ.

ವಾಷಿಂಗ್ಟನ್​​ ಸುಂದರ್ ಬಡ್ತಿ ಸ್ಟ್ರಾಟಜಿ ಠುಸ್
ಈ ನಿರ್ಧಾರವನ್ನಂತೂ ಯಾರೊಬ್ಬರೂ ನಿರೀಕ್ಷೆ ಮಾಡಿರಲಿಲ್ಲ. ಮೊದಲ ಒನ್ಡೆ ಮ್ಯಾಚ್​ನಲ್ಲಿ ವಾಷಿಂಗ್ಟನ್ ಸುಂದರ್​ಗೆ 4ನೇ ಕ್ರಮಾಂಕದಲ್ಲಿ ಬಡ್ತಿ ನೀಡಲಾಯ್ತು. ಏನು ಬಂತು ಹೇಳಿ? ಅವಕಾಶದ ಗಂಭೀರತೆ ಅರಿಯದ ಸುಂದರ್​ ಜಸ್ಟ್​ 5 ರನ್​ಗೆ ವಿಕೆಟ್ ಒಪ್ಪಿಸಿದ್ರು. ಹೆಡ್​ಕೋಚ್​ ಗಂಭೀರ್ ಮಾಡಿದ ತಂತ್ರ ಇಲ್ಲಿಯೂ ಠುಸ್ ಪಟಾಕಿ ಆಯ್ತು.

ಇದನ್ನೂ ಓದಿ:ಟಿವಿ ಲೈವ್​ನಲ್ಲೇ ಚಪ್ಪಲಿಯಿಂದ ಹೊಡೆದ ಸ್ಟಾರ್ ನಟಿ ಲಾವಣ್ಯ; ಅಸಲಿಗೆ ಆಗಿದ್ದೇನು..?

ದುಬೆಯನ್ನ 8ನೇ ಕ್ರಮಾಂಕದಲ್ಲಿ ಆಡಿಸಿ ಬಿಗ್ ಬ್ಲಂಡರ್
ಮೊದಲ ಏಕದಿನದಲ್ಲಿ ಇಂಡಿಯನ್ ಬ್ಯಾಟರ್ಸ್​ ಸ್ಪಿನ್ನರ್ಸ್​ ವಿರುದ್ಧ ತಡಕಾಡಿದ್ರು. ಶಿವಂ ದುಬೆ ಸ್ಪಿನ್ ಬೀಸ್ಟ್ ಅಂತ ಗೊತ್ತಿದ್ರೂ ಅವರನ್ನ 6ನೇ ಕ್ರಮಾಂಕದ ಬದಲು 8ನೇ ಸ್ಲಾಟ್​​​ನಲ್ಲಿ ಆಡಿಸಿದ್ರು. ದುಬೆ ಉತ್ತಮವಾಗಿ ಆಡಿದರಾದ್ರು ಉಳಿದವರಿಂದ ಸರಿಯಾಗಿ ಸಾಥ್​ ಸಿಗ್ಲಿಲ್ಲ. ಒಂದು ವೇಳೆ ದುಬೆ ತಮ್ಮದೇ ಸ್ಲಾಟ್​ನಲ್ಲಿ ಕಣಕ್ಕಿಳಿದಿದ್ದಿದ್ರೆ ಸ್ಪಿನ್ನರ್ಸ್​ ಬೇಟೆಯಾಡಿ ಭಾರತಕ್ಕೆ ಬೇಗನೆ ಗೆಲುವು ಕೊಡುವ ಸಾಧ್ಯತೆ ಇತ್ತು.
ಟೀಮ್ ಇಂಡಿಯಾಗೆ ಉಳಿದಿರೋದು ಇನ್ನೊಂದೇ ಪಂದ್ಯ. ಅದು ಸರಣಿ ಸೋಲಿನ ಮುಖಭಂಗದಿಂದ ಪಾರಾಗಬೇಕಾದ್ರೆ ಗೆದ್ದು ತೀರಲೇಬೇಕಿದೆ. ಇಂತಹ ಡಿಸೈಡರ್ ಮ್ಯಾಚ್​​​ನಲ್ಲಾದ್ರು ಹೆಡ್​ಕೋಚ್ ಗಂಭೀರ್ ತಪ್ಪಿನಿಂದ ಪಾಠ ಕಲಿಯಲಿ. ಇಲ್ಲವಾದ್ರೆ ಏಕದಿನ ಸರಣಿ ಸೋಲು ತಪ್ಪಿದ್ದಲ್ಲ.

ಇದನ್ನೂ ಓದಿ:BSNL 5G ಮೂಲಕ ಮೊದಲ ಕರೆ.. ಇದು ಜಿಯೋ, ಏರ್​ಟೆಲ್​ಗಿಂತ ಎಷ್ಟು ಕಮ್ಮಿಗೆ ರೀಚಾರ್ಜ್ ಸಿಗುತ್ತೆ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ದೊಡ್ಡ ತಪ್ಪು ಮಾಡಿದ ಗಂಭೀರ.. ಮುಖ್ಯ ಕೋಚ್ ಕೈಸುಟ್ಟುಕೊಂಡಿದ್ದು ಎಲ್ಲಿ..?

https://newsfirstlive.com/wp-content/uploads/2024/08/GAMBHIR-2.jpg

Load More