newsfirstkannada.com

ಅಫ್ಘನ್ ವಿರುದ್ಧ ಸರಣಿ ಗೆದ್ದರೂ ದ್ರಾವಿಡ್​ಗೆ ಕಾಡ್ತಿದೆ ಆ ಒಂದು ಚಿಂತೆ..!

Share :

Published January 19, 2024 at 12:28pm

    ಇಂಡಿಯಾಗೆ ಕಾಡಲಿದೆ ಅಭ್ಯಾಸ ಪಂದ್ಯಗಳ ಕೊರತೆ

    2021ರ ಟಿ20 ವಿಶ್ವಕಪ್​ ನೆನಪಿಸುತ್ತಿದೆ ಈ ವರ್ಷ

    2021ರಲ್ಲಿ IPL​ ಟು ವಿಶ್ವಕಪ್​.. ಹೀನಾಯ ಪ್ರದರ್ಶನ

ಅಫ್ಘನ್​​​​​ ಸರಣಿಯನ್ನು 3-0 ಅಂತರದಿಂದ ಟೀಮ್ ಇಂಡಿಯಾ ಕ್ಲೀನ್​ಸ್ವೀಪ್ ಮಾಡ್ತು. ಇದರೊಂದಿಗೆ ಟೀಮ್ ಇಂಡಿಯಾದ ಧ್ಯೇಯವೂ ಕಂಪ್ಲೀಟ್ ಆಯ್ತು. ಕೋಚ್ ರಾಹುಲ್​​ ದ್ರಾವಿಡ್​ಗೆ ಮಾತ್ರ, ಈ ರಿಸಲ್ಟ್​ ಸಮಾಧಾನ ತಂದಿಲ್ಲ. ಆ ಇಂದು ಚಿಂತೆ ಇನ್ನಿಲ್ಲದೆ ಕಾಡ್ತಿದೆ.

ಅಫ್ಘನ್ ಎದುರಿನ ಟಿ20 ಸಿರೀಸ್ ಗೆದ್ದಾಗಿದೆ. ವಿಶ್ವ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಕ್ಕಿದೆ. ಆಟಗಾರರ ಸಂಘಟಿತ ಆಟಕ್ಕೆ ಫ್ಯಾನ್ಸ್ ಮನಸೋತಿದ್ದಾರೆ. 3-0 ಅಂತರದಿಂದ ಸರಣಿ ಗೆದ್ದ ಟೀಮ್ ಇಂಡಿಯಾ, ತವರಿನಲ್ಲಿ ಸರಣಿ ಗೆಲುವಿನ ದಂಡಯಾತ್ರೆ ಮುಂದುವರಿಸಿದ್ದಾರೆ. ಅಂತಿಮ ಪಂದ್ಯದಲ್ಲಿ ನಾಯಕನ ಆಟಕ್ಕೆ ಫುಲ್​ ಮಾರ್ಕ್ಸ್​​ ಕೂಡ ಸಿಕ್ಕಿದೆ. ದ್ರೋಣಾಚಾರ್ಯ ರಾಹುಲ್​ ದ್ರಾವಿಡ್​ಗೆ ಟೀಮ್ ಇಂಡಿಯಾ ಗೆದ್ದರೂ, ಬೇಸರ ಮಾತ್ರ ಕಾಡ್ತಿದೆ. ಇದಕ್ಕೆ ಕಾರಣ ಮುಂದಿನ ಟಿ20 ವಿಶ್ವಕಪ್​.

ದುರಾದೃಷ್ಟವಶಾತ್. ನಾವು ಮುಂದೆ ಒಂದು ತಂಡವಾಗಿ ಹೆಚ್ಚು ಕ್ರಿಕೆಟ್ ಆಡಲ್ಲ. ನಿಮಗೆಲ್ಲಾ ಗೊತ್ತಿರುವಂತೆ ಮುಂದೆ ನಮಗೆ ಐಪಿಎಲ್ ಇದೆ. ಎಲ್ಲರೂ ಯಾರು ಹೇಗೆ ಆಡುತ್ತಾರೆ ಎಂದು ನೋಡುತ್ತಾರೆ. ನಾವು ಯಾವ ಸ್ಲಾಟ್‌, ಟೀಮ್​ನಲ್ಲಿ ತುಂಬಬೇಕು ಅನ್ನೋದು ನೋಡುತ್ತಾರೆ -ರಾಹುಲ್ ದ್ರಾವಿಡ್, ಹೆಡ್​ ಕೋಚ್

2024ರ ಟಿ20 ವಿಶ್ವಕಪ್​​ ತಯಾರಿ ಆರಂಭಿಸಿರುವ ಟೀಮ್ ಇಂಡಿಯಾ, ಟಿ20 ವಿಶ್ವಕಪ್​ಗೂ ಮುನ್ನ ಆಡಿದ ಕೊನೆ ಟಿ20 ಸಿರೀಸ್​ ಅಫ್ಘನ್ ಎದುರಿನ ಸರಣಿಯಾಗಿದೆ. ಈ ಬಳಿಕ ಐಪಿಎಲ್​​ನಲ್ಲಿ ಭಾಗವಹಿಸಲಿರುವ ಟೀಮ್ ಇಂಡಿಯಾ ಆಟಗಾರರು, ನಂತರ ನೇರವಾಗಿ ಟಿ20 ವಿಶ್ವಕಪ್​ನಲ್ಲಿ ಭಾಗವಹಿಸ್ತಾರೆ. ಇದೇ ಕೋಚ್ ರಾಹುಲ್​ ದ್ರಾವಿಡ್​ರ ಚಿಂತನೆ ದೂಡಿದೆ. ಇದಕ್ಕೆ ಮೇನ್ ರೀಸನ್ ಕೂಡ ಇದೆ.

ಐಪಿಎಲ್​ ಬಳಿಕ ಭಾರತಕ್ಕಿಲ್ಲ ಟಿ20 ಸಿರೀಸ್

ಅಫ್ಘನ್ ಸರಣಿ ಮುಗಿಸಿರುವ ಟೀಮ್ ಇಂಡಿಯಾ, ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್​ ಸರಣಿಯನ್ನಾಡಲಿದೆ. ಈ ಸರಣಿ ಬಳಿಕ 2 ತಿಂಗಳ ಕಾಲ ಟೀಮ್ ಇಂಡಿಯಾ ಆಟಗಾರರ ಐಪಿಎಲ್​ನಲ್ಲಿ ಬ್ಯುಸಿಯಾಗಲಿದ್ದು, ಇಲ್ಲಿಯೇ ಟಿ20 ವಿಶ್ವಕಪ್​ ತಂಡದ ರೂಪುರೇಷ ಸಿದ್ಧವಾಗಲಿದೆ. ಇದೇ ಈಗ ಟೀಮ್ ಇಂಡಿಯಾಗೆ ಮಾರಕವಾಗಲಿದೆ. ಯಾಕಂದ್ರೆ ಐಪಿಎಲ್​​ನಲ್ಲಿ ಆಡಿದ ಆಟಗಾರರಲ್ಲೇ ಟೀಮ್ ಕಾಂಬಿನೆಷನ್ ಸೆಟ್ ಮಾಡಬೇಕಾಗುತ್ತೆ. ಇದು ನಿಜಕ್ಕೂ ತಂಡದ ಮೇಲೆ ವ್ಯತಿರಕ್ತ ಪರಿಣಾಮವೇ ಬೀಳಲಿದೆ.

ವಿವಿಧ ತಂಡಗಳ ಪರ ಆಡುವ ಆಟಗಾರರು, ಒಂದು ತಂಡವಾಗಿ ಆಡಬೇಕು. ಇದಕ್ಕೆ ತಕ್ಕಂತೆ ತಂಡದ ಕಾಂಬಿನೇಷನ್ ರೆಡಿ ಮಾಡಬೇಕು. ಒಮ್ಮೆಲೆ ಐಪಿಎಲ್​ ಬಳಿಕ ಟಿ20 ವಿಶ್ವಕಪ್ ಆಡುವ ಈ ಆಟಗಾರರು ಒಂದು ತಂಡವಾಗಿ ಆಡುವ ಅವಕಾಶವೇ ಸಿಗಲ್ಲ. ಇದು ಟೀಮ್ ಇಂಡಿಯಾದ ಪ್ರಿಪರೇಷನ್​ ಮೇಲೆ ಸಹಜವಾಗೇ ತಂಡದ ಮೇಲೆ ಎಫೆಕ್ಟ್​ ಆಗಲಿದೆ.

2021ರ ಟಿ20 ವಿಶ್ವಕಪ್​ ಗತಿಯೇ ಆಗುತ್ತಾ?

2021 ಟಿ20 ವಿಶ್ವಕಪ್​​​ ನೆನಪಿರಬೇಕು. ಈ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಆಟಗಾರರ ಅಕ್ಷರಶಃ ನಿರಾಸ ಪ್ರದರ್ಶನ ನೀಡಿದ್ದರು. ಐಪಿಎಲ್​​ ಪ್ರದರ್ಶನದ ಆಧಾರದ ಮೇಲೆ ಸೆಲೆಕ್ಷನ್ ಕಮಿಟಿ ತಂಡ ಪ್ರಕಟಿಸಿತ್ತು. ನೇರವಾಗಿ ಅಂದು ಟೀಮ್ ಇಂಡಿಯಾ ಆಟಗಾರರು ಐಪಿಎಲ್ ಬಳಿಕ ಆಡಿದ್ದು ಟಿ20 ವಿಶ್ವಕಪ್​ ಟೂರ್ನಿಯನ್ನೇ. ಇದೀಗ ಟೀಮ್ ಇಂಡಿಯಾ ಅಂಥದ್ದೇ ಪರಿಸ್ಥಿತಿ ಎದುರಿಸುತ್ತಿದೆ. ಐಪಿಎಲ್ ಬಳಿಕ ನೇರವಾಗಿ ಟಿ20 ವಿಶ್ವಕಪ್​ನಲ್ಲಿ ಭಾಗವಹಿಸಲಿದೆ. ಇದು ಸಹಜವಾಗೇ ಕೋಚ್ ರಾಹುಲ್ ದ್ರಾವಿಡ್​​ ಚಿಂತೆಗೆ ಕಾರಣವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅಫ್ಘನ್ ವಿರುದ್ಧ ಸರಣಿ ಗೆದ್ದರೂ ದ್ರಾವಿಡ್​ಗೆ ಕಾಡ್ತಿದೆ ಆ ಒಂದು ಚಿಂತೆ..!

https://newsfirstlive.com/wp-content/uploads/2023/11/Rahul-Dravid-Coach.jpg

Load More