/newsfirstlive-kannada/media/post_attachments/wp-content/uploads/2025/07/CBL-BETTING.jpg)
ಆತ ಹೆಡ್ ಕಾನ್​​​ಸ್ಟೇಬಲ್ ಒಂದೇ ಠಾಣೆಯಲ್ಲಿ ಸುಮಾರು ಮೂರು ವರ್ಷಗಳಿಂದ ಕೆಲಸ ಮಾಡಿದ್ದ ಅನುಭವ ಹೊಂದಿದ್ದ. ಉತ್ತಮ ಜನಸ್ನೇಹಿ ಪೊಲೀಸ್ ಆಗಿ ಕೆಲಸ ಮಾಡ್ತಿದ್ದ, ತನ್ನ ಸಹಪಾಟಿಳೊಂದಿಗೂ ಫ್ರೆಂಡ್ಲೀಯಾಗಿಯೇ ಇದ್ದ. ನಿನ್ನೆ ರಾತ್ರಿ ಜಾತ್ರೆಗೆ ಬಂದೋಬಸ್ತ್ ನೈಟ್ ಡ್ಯೂಟಿ ಮುಗಿಸಿ ರಾತ್ರಿ ಮೂರು ಗಂಟೆಗೆ ಮನೆಗೆ ಹೋಗಿ ಸ್ವಲ್ಪ ಸಮಯ ರೆಸ್ಟ್ ಮಾಡಿದ್ದಾನೆ. ಪುನಃ ಮುಂಜಾನೆ ಏಳೂವರೆಗೆ ಡ್ಯೂಟಿಗೆ ಹೋಗ್ಬೇಕು ಅಂತ ಮನೆಯವರಿಗೆ ಹೇಳಿ ಠಾಣೆ ಬಳಿ ಬಂದವನು ಠಾಣೆ ಆವರಣದ ರೆಸ್ಟ್ ರೂಮ್​ನಲ್ಲಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾನೆ.
ಬೆಟ್ಟಿಂಗ್​ ಗೀಳಿಗೆ ಬಿದ್ದಿದ್ದ ಹೆಡ್​​ ಕಾನ್ಸ್​​​ಟೇಬಲ್​
ಹೆಸರು ರಾಜಶೇಖರ್, ವೃತ್ತಿ, ಪೊಲೀಸ್​​ ಹೆಡ್​ ಕಾನ್ಸ್​ಟೇಬಲ್​​. ಆದ್ರೆ, ಹೆಚ್ಚಿನ ಹಣ ಸಂಪಾದನೆ ಆಸೆಯಿಂದ ಈ ಪೊಲೀಸಪ್ಪ, ಬೆಟ್ಟಿಂಗ್​​​​​ ಗೀಳಿಗೆ ಬಿದ್ದು, ಲಕ್ಷ ಲಕ್ಷ ಹಣ ಕಳೆದುಕೊಂಡು ತಾನು ಕೆಲಸ ಮಾಡ್ತಿದ್ದ ಮಂಚೇನಹಳ್ಳಿ ಪೊಲೀಸ್ ಠಾಣೆ ಆವರಣದಲ್ಲಿ ಜೀವ ತೆಗೆದುಕೊಂಡಿದ್ದಾನೆ.
ಇದನ್ನೂ ಓದಿ: ಸಿರಿಯಾ ಮೇಲೆ ಇಸ್ರೇಲ್ ಏರ್​​ಸ್ಟ್ರೈಕ್.. ಭಯದಿಂದ ಲೈವ್‌ನಿಂದಲೇ ಓಡಿದ ಟಿವಿ ಆಂಕರ್ -VIDEO
ಬೆಟ್ಟಿಂಗ್​​​ಗೆ ಪೊಲೀಸಪ್ಪ ಬಲಿ!
- ಕಳೆದ 25 ವರ್ಷಗಳಿಂದ ಪೊಲೀಸ್ ಹುದ್ದೆಯಲ್ಲಿದ್ದ ರಾಜಶೇಖರ್​​
- ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ಪೊಲೀಸ್ ಠಾಣೆಗಳಲ್ಲಿ ಕೆಲಸ
- ಕೈ ತುಂಬಾ ಸಂಬಳ, ಸಂಸಾರದೊಂದಿಗೆ ನೆಮ್ಮದಿಯಿಂದ ಇದ್ದರು
- ಆದ್ರೆ, ರಾತ್ರೋ ರಾತ್ರಿ ಶ್ರೀಮಂತ ಆಗ್ಬೇಕೆಂದು ಬೆಟ್ಟಿಂಗ್​ ಚಟ
- ರಮ್ಮಿ ಸರ್ಕಲ್​ನಲ್ಲಿ 40 ಲಕ್ಷ ಹಣ ಕಳೆದುಕೊಂಡ ರಾಜಶೇಖರ್​
- ಇಷ್ಟೇ ಅಲ್ಲದೆ ಕಾನ್ಸ್​​​ಟೇಬಲ್​​​ ರಾಜಶೇಖರ್​ ಸಾಲ ಮಾಡಿದ್ದರು
- ಇದೇ ವಿಚಾರಕ್ಕೆ ಮನೆಯಲ್ಲಿ ಮನಸ್ತಾಪ, ಮನನೊಂದು ದುಡುಕಿನ ನಿರ್ಧಾರ
ಘಟನೆ ಸಂಬಂಧ ಚಿಕ್ಕಬಳ್ಳಾಪುರ ಎಸ್​ಪಿ ಕುಶಲ್​ ಚೌಕ್ಸೆ ಹಾಗೂ ಮಂಚೇನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡ ಮಂಚೇನಹಳ್ಳಿ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ. ಬೆಟ್ಟಿಂಗ್​ ಬಗ್ಗೆ ಜನಸಾಮನ್ಯರಿಗೆ ಬುದ್ಧಿ ಹೇಳಬೇಕಾಗಿದ್ದ ಪೊಲೀಸ್​​​ ಕಾನ್ಸ್​ಟೇಬಲ್​​, ಬೆಟ್ಟಿಂಗ್​ ಗೀಳಿಗೆ ಬಿದ್ದು ಪ್ರಾಣ ಕಳೆದುಕೊಂಡು.. ಇಬ್ಬರು ಮಕ್ಕಳು ಮಡದಿಯನ್ನು ಅನಾಥರನ್ನಾಗಿ ಮಾಡಿರುವುದು ನಿಜಕ್ಕೂ ದುರಂತ.
ಇದನ್ನೂ ಓದಿ: Karnataka Rain: ಮಲೆನಾಡು, ಕರಾವಳಿ ಭಾಗದಲ್ಲಿ ಭಾರೀ ಮಳೆ.. ಶಾಲಾ-ಕಾಲೇಜುಗಳಿಗೆ ರಜೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ