/newsfirstlive-kannada/media/post_attachments/wp-content/uploads/2024/03/BUTTER-MILK.jpg)
ಇಡೀ ರಾಜ್ಯಾದ್ಯಂತ ಬಿಸಿಲಿನ ಬೇಗೆಗೆ ಜನ ತತ್ತರಿಸಿ ಹೋಗಿದ್ದಾರೆ. ಬೆಳಗ್ಗೆಯಿಂದ ರಾತ್ರಿಯವರೆಗೂ ಸೆಕೆ ಧಗಧಗನೇ ನಮ್ಮನ್ನು ಆವರಿಸಿಬಿಟ್ಟಿದೆ. ಸಂಜೆ ವೇಳೆಗೆ ಬಿಸಿಲು ಮಾಯವಾದರೂ ತಾಪ ಮಾತ್ರ ಕಡಿಮೆ ಆಗಲ್ಲ. ಪರಿಣಾಮ ರಾತ್ರಿ ಮನೆಯಲ್ಲಿ ಫ್ಯಾನ್ ಇಲ್ಲದೆ ಹೋದ್ರೆ ಭಾರೀ ಕಷ್ಟ. ಮಲಗಿದ್ದಲ್ಲೇ ಸೆಕೆಯ ತೀವ್ರತೆಗೆ ಬೆವರಲು ಶುರುವಾಗುತ್ತದೆ. ಇಂಥ ಬೇಸಿಗೆ ಕಾಲದಲ್ಲಿ ಜನ ಐಸ್ ಕ್ರೀಮ್, ತಂಪು ಪಾನೀಯಗಳು ಮೊರೆ ಹೋಗುತ್ತಾರೆ. ಶರಬತ್ತು, ಮಜ್ಜಿಗೆ ಬೇಸಿಗೆಯಲ್ಲಿ ಹೆಚ್ಚು ಸೇವಿಸೋದು ಕಾಮನ್.
ಮಜ್ಜಿಗೆ ಸೇವನೆಯಿಂದ ಆರೋಗ್ಯಕ್ಕೆ ಲಾಭವೇನು?
ನಿಮಗೆ ಮಜ್ಜಿಗೆ ಎಂದರೆ ಕೇವಲ ತಂಪು ಪಾನೀಯಗಳಲ್ಲಿ ಒಂದು. ಆದರೆ, ಇದರಲ್ಲೂ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ ಸೇರಿ ಹಲವು ಪೋಷಕಾಂಶಗಳು ಇರುತ್ತವೆ ಎಂಬುದು ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ಮಜ್ಜಿಗೆ ಆರೋಗ್ಯಕ್ಕೆ ತುಂಬಾನೇ ಪ್ರಯೋಜನ. ಹಾಗಾಗಿ ಬೇಸಿಗೆಯಲ್ಲಿ ಮಜ್ಜಿಗೆ ಕುಡಿದು ಆರೋಗ್ಯ ಕಾಪಾಡಿಕೊಳ್ಳಬೇಕು.
ನಿತ್ಯ ನೀವು ಮಜ್ಜಿಗೆ ಸೇವನೆ ಮಾಡೋದ್ರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಗಳು ಸರಾಗವಾಗಿ ಇರುತ್ತದೆ. ನೀವು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಗ್ಯಾಸ್, ಅಸಿಡಿಟಿಯಂತಹ ಸಮಸ್ಯೆಗಳು ಬರುವುದಿಲ್ಲ. ಇನ್ನು ಮಜ್ಜಿಗೆಯಲ್ಲಿ ಕ್ಯಾಲೋರಿಗಳು ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ ನೀವು ತೂಕವನ್ನೂ ಕಡಿಮೆ ಮಾಡಿಕೊಳ್ಳಬಹುದು.
ಮೂಳೆಗಳು ಬಲಿಷ್ಠವಾಗಲು ಮಜ್ಜಿಗೆ ಮದ್ದು
ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ ಹೆಚ್ಚು ಇರೋದ್ರಿಂದ ನಿಮ್ಮ ಮೂಳೆಗಳು ಬಲಿಷ್ಠವಾಗುತ್ತವೆ. ಮಾತ್ರವಲ್ಲ ಬೆಳ್ಳನೆಯ ಮಜ್ಜಿಗೆ ಚರ್ಮದ ಆರೋಗ್ಯವನ್ನೂ ಪೋಷಿಸುತ್ತದೆ, ಫಳಫಳನೆ ಹೊಳೆಯುವಂತೆ ಮಾಡುವ ಶಕ್ತಿ ಕೂಡ ಇದೆ. ಮಜ್ಜಿಗೆಯಲ್ಲಿರುವ ಕ್ಯಾಲ್ಸಿಯಂ ಹೃದಯ ಸಂಬಂಧಿ ಕಾಯಿಲೆಗಳನ್ನೂ ಗುಣಪಡಿಸುತ್ತದೆ. ಬಹು ಮುಖ್ಯವಾಗಿ ದಿನಾಲೂ ಮಜ್ಜಿಗೆ ಕುಡಿಯೋದ್ರಿಂದ ದೇಹದಲ್ಲಿ ನೀರಿನ ಅಂಶ ಕಮ್ಮಿಯಾಗದಂತೆ ನೋಡಿಕೊಳ್ಳುತ್ತದೆ.
ಇದನ್ನೂ ಓದಿ:ಕೋಟಿ ಕೋಟಿ ಹಣ ಸುರಿದ್ರೂ ಯಾವುದೇ ಪ್ರಯೋಜನ ಇಲ್ಲ! RCB ತಂಡದಿಂದ ಈ ಮೂವರಿಗೆ ಗೇಟ್ಪಾಸ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ