Advertisment

ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ತಿಂದರೆ ಲಾಭವೇನು? ಹತ್ತಾರು ಸಮಸ್ಯೆ ನಿವಾರಿಸುತ್ತೆ!

author-image
Ganesh Nachikethu
Updated On
Dengue: ಪ್ಲೇಟ್ಲೆಟ್​​ ​ಹೆಚ್ಚಿಸಲು ಈ 5 ಹಣ್ಣುಗಳನ್ನು ಸೇವಿಸಿ; ಆಮೇಲೆ ಮ್ಯಾಜಿಕ್​ ನೋಡಿ!
Advertisment
  • ಒಂದಾ, ಎರಡಾ ಪಪ್ಪಾಯಿಯಲ್ಲಿ ಹತ್ತಾರು ಲಾಭವಿದೆ
  • ಖಾಲಿ ಹೊಟ್ಟೆಗೆ ಪಪ್ಪಾಯಿ ಸೇವಿಸಿ ಪರಿಣಾಮ ನೋಡಿ
  • ಚರ್ಮದ ಆರೈಕೆಗೆ ಪಪ್ಪಾಯಿಗಿಂತ ಮದ್ದು ಬೇರೊಂದಿಲ್ಲ

ದೇಶದಾದ್ಯಂತ ಕೊರೋನಾ ಅವಾಂತರವನ್ನು ಕಣ್ಣಾರೆ ಕಂಡ ಮೇಲೆ ಬಹುತೇಕ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಅದರಲ್ಲೂ ಆರೋಗ್ಯದಲ್ಲಿ ಏರುಪೇರು ಆಗಬಾರದು. ಸುರಕ್ಷಿತ ಆರೋಗ್ಯ ನಮ್ಮದಾಗಬೇಕು ಎಂಬ ಕಾರಣಕ್ಕೆ ಗುಣಮಟ್ಟದ ಆಹಾರವನ್ನು ಸೇವಿಸುತ್ತಿದ್ದಾರೆ. ಆದರೆ ಆರೋಗ್ಯ ದೃಷ್ಠಿಯಿಂದ ಪಪ್ಪಾಯಿ ಹಣ್ಣು ಕೂಡ ಒಂದಲ್ಲಾ, ಎರಡಲ್ಲಾ ಹತ್ತು ಹಲವು ಲಾಭಗಳನ್ನು ಹೊಂದಿದೆ. ಇದನ್ನು ಖಾಲಿ ಹೊಟ್ಟೆಗೆ ಸೇವಿಸಿದರೆ ಆರೋಗ್ಯ ಚೆನ್ನಾಗಿರುತ್ತದೆ. ಆದರೂ ಸಹ ಪಪ್ಪಾಯಿ ಸೇವಿಸುವ ಮೊದಲು ದೇಹಕ್ಕೆ ಸಿಗುವ ಲಾಭ? ಇದರಲ್ಲಿರುವ ಗುಣಾಂಶಗಳ ಬಗ್ಗೆ ತಿಳಿದುಕೊಳ್ಳಿ.

Advertisment

ಪಪ್ಪಾಯಿ ಸಿಹಿಯಾದ ರುಚಿಯನ್ನ ಹೊಂದಿದೆ. ಇದರಲ್ಲೂ ಪೌಷ್ಟಿಕಾಂಶ ಸೇರಿದೆ. ಆರೋಗ್ಯ ದೃಷ್ಠಿಯಿಂದ ಬೆಳಗ್ಗಿನ ಜಾವ ಇದನ್ನು ಸೇವಿಸಿದರೆ ಕ್ಯಾಲ್ಸಿಯಂ ಅಂಶ ದೇಹ ಸೇರುತ್ತದೆ. ಇವಿಷ್ಟು ಮಾತ್ರವಲ್ಲ ಪಪ್ಪಾಯಿಂದ ಫೈಬರ್​, ಮೆಗ್ನೀಷಿಯಂ, ಪೊಟ್ಯಾಸಿಯಂ ಸಿಗುತ್ತದೆ.

ಪಪ್ಪಾಯಿ ವಿಟಮಿನ್​ ಎ, ವಿಟಮಿನ್​ ಬಿ, ವಿಟಮಿನ್​ ಸಿ ಮತ್ತು ಇ ಒಳಗೊಂಡಿದೆ. ಹಾಗಾಗಿ ಬಹುತೇಕರಿಗೆ ಈ ವಿಚಾರ ತಿಳಿದಿಲ್ಲ, ಇಷ್ಟೇಲ್ಲಾ ಪ್ರಯೋಜನವಿರುವ ಹಣ್ಣನ್ನು ಮಕ್ಕಳಿಗೆ ನೀಡಿದರೆ ಅವರ ಅರೋಗ್ಯ ಉತ್ತಮವಾಗಿರುತ್ತದೆ.

ಮಲ ಬದ್ಧತೆ ವಿರುದ್ಧ ಹೋರಾಟ

ಅನೇಕರಿಗೆ ಜೀರ್ಣಕಾರಿ ಆರೋಗ್ಯ ಸಮಸ್ಯೆಗಳು ಕಾಡುತ್ತಿರುತ್ತವೆ. ಅದಕ್ಕೆ ಪೂರ್ಣ ವಿರಾಮ ಹಾಕಲು ಪಪ್ಪಾಯಿ ಹಣ್ಣನ್ನು ಸೇವಿಸುವುದು ಉತ್ತಮ. ಅದರಲ್ಲೂ ಬೆಳಗ್ಗಿನ ಜಾವ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯಲ್ಲಿ ಬದಲಾವಣೆ ಕಾಣಬಹುದು. ಜೊತೆಗೆ ಮಲಬದ್ಧತೆ ಸಮಸ್ಯೆ ಹೋಗಲಾಡಿಸುವ ಗುಣ ಇದಕ್ಕಿದೆ.

Advertisment

publive-image

ಇನ್ನು ಪಪ್ಪಾಯಿ ತಿಂದ್ರೆ ಕರುಳಿನ ಚಲನೆ ಸರಾವಾಗುತ್ತದೆ. ಹೊಟ್ಟೆಯ ಅನೇಕ ಸಮಸ್ಯೆಗಳು ಸೇರಿದಂತೆ ಅಜೀರ್ಣ ಸಮಸ್ಯೆಯನ್ನು ಪಪ್ಪಾಯಿ ನಿವಾರಿಸುತ್ತದೆ.

ತೂಕ ಇಳಿಸಿಕೊಳ್ಳಲು ಸಹಾಯ

ತೂಕ ಇಳಿಸಲು ಪ್ರಯತ್ನ ಪಟ್ಟು ಸೋತವರಿಗೆ ದಿನನಿತ್ಯ ಪಪ್ಪಾಯಿ ಹಣ್ಣು ಸೇವಿಸಿ ಇದರ ಪ್ರಯೋಜನ ಪಡೆದುಕೊಳ್ಳಬಹುದು. ಔಷಧಿ ಸೇವಿಸಿ ತೂಕ ಇಳಿಸುವ ಬದಲು ಖಾಲಿ ಹೊಟ್ಟೆಗೆ ಪಪ್ಪಾಯಿ ಸೇವಿಸಿ ಆರೋಗ್ಯದ ಜೊತೆಗೆ ತೂಕವನ್ನು ಕಡಿಮೆ ಮಾಡಬಹುದು.

ಹಾರ್ಟ್​ ಚೆನ್ನಾಗಿರಬೇಕಾ?

ಹೃದಯ ಆರೋಗ್ಯಕರವಾಗಿರಬೇಕಾ?. ಹಾಗಿದ್ರೆ ಪಪ್ಪಾಯಿ ಅದಕ್ಕೆ ಮದ್ದು. ಹೌದು. ಕೊಲೆಸ್ಟ್ರಾಲ್ ದೇಹ ಸೇರಿದ್ದರೆ ಅದನ್ನು ಹೊಡೆದು ಹಾಕಲು ಪಪ್ಪಾಯಿ ಸಹಾಯಕಾರಿ. ಇದರಲ್ಲಿರುವ ಫೈಬರ್​​ ಸತ್ವ ಕೊಲೆಸ್ಟ್ರಾಲ್​ ಮಟ್ಟವನ್ನು ಹೊಡೆದುಹಾಕುತ್ತದೆ.

Advertisment

ಚರ್ಮ ಪಳ ಪಳ ಹೊಳಿತದೆ

ಚರ್ಮದ ಆರೋಗ್ಯವನ್ನು ಕಾಪಾಡಲು ಪರದಾಡುವವರು ಪಪ್ಪಾಯಿ ಟ್ರೈ ಮಾಡಿದರೆ ಒಳ್ಳೆಯದು. ಯಾಕಂದ್ರೆ ಮಿಟಮಿನ್​​ ಸಿ ಇರುವ ಕಾರಣ ಚರ್ಮದ ಕೋಶವನ್ನು ಸರಿಪಡಿಸುತ್ತದೆ. ರಾಡಿಕಲ್​ ಹಾನಿಯಿಂದ ರಕ್ಷಿಸುತ್ತದೆ.

ರೋಗ ನಿರೋಧಕ ಶಕ್ತಿ ಇದರಲ್ಲಿದೆ

ಮೊದಲೇ ಹೇಳಿದಂತೆ ಪಪ್ಪಾಯಿ ಒಂದಲ್ಲಾ, ಎರಡಲ್ಲಾ ಹತ್ತಾರು ಲಾಭವನ್ನು ಹೊಂದಿದೆ. ಅದರಂತೆಯೇ ರೋಗ ನಿರೋಧಕ ಶಕ್ತಿ ಕೂಡ ಇದರಲ್ಲಿದೆ. ವಿಟಮಿನ್​ ಸಿ ಇದರಲ್ಲಿರುವ ಕಾರಣ ಸೋಂಕು ಹೆಚ್ಚಾಗುವುದನ್ನು ತಡೆಯುವ ಗುಣ ಇದಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment