/newsfirstlive-kannada/media/post_attachments/wp-content/uploads/2024/10/pomegranate-Benifits-2.jpg)
ದಾಳಿಂಬೆಯಲ್ಲಿ ಕಡಿಮೆ ಕ್ಯಾಲೋರಿ ಮತ್ತು ಕೊಬ್ಬಿನಾಂಶ ಇದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ ಫೈಬರ್ ಅಂಶ, ವಿಟಮಿನ್‌ಗಳು ಮತ್ತು ಖನಿಜಾಂಶಗಳು ಹೆಚ್ಚಾಗಿ ಇದ್ದು ಇವು ಆರೋಗ್ಯಕ್ಕೆ ಪುಷ್ಠಿ ಒದಗಿಸುತ್ತೆ ಎಂಬುದು ಈಗ ಬಯಲಿಗೆ ಬಂದಿದೆ. ರಕ್ತ ಹೆಚ್ಚು ಮಾಡುವುದರ ಜೊತೆಗೆ ಹೃದಯ, ರಕ್ತನಾಳಗಳು, ಮೂತ್ರಪಿಂಡದ ಆರೋಗ್ಯವನ್ನು ಉತ್ತಮವಾಗಿ ಇಡುವಲ್ಲಿ ಸಹಕರಿಸುತ್ತದೆ. ಪ್ರತಿಯೊಂದು ಹಣ್ಣು ತನ್ನದೇ ಆದ ವಿಟಮಿನ್‌ಗಳಿಂದ ಸಮೃದ್ಧವಾಗಿದ್ದು, ನಮ್ಮ ಆರೋಗ್ಯ ಕಾಪಾಡುತ್ತಾವೆ. ಅದರಲ್ಲಿ ಈ ದಾಳಿಂಬೆ ಕೂಡ ಒಂದಾಗಿದೆ ಎಂದು ವರದಿಯಾಗಿದೆ.
ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ ಈ ದಾಳಿಂಬೆ
ದಾಳಿಂಬೆ ಹಣ್ಣು ಅಂಟಿ ವೈರಲ್, ಟ್ಯೂಮರ್ ಮತ್ತು ಆಕ್ಸಿಡೆಂಟ್ ಲಕ್ಷಣ ಹೊಂದಿದೆ. ಇದರಲ್ಲಿ ವಿಟಮಿನ್ A, ವಿಟಮಿನ್ C ಮತ್ತು ವಿಟಮಿನ್ E ಮತ್ತು ಫೋಲಿಕ್ ಆಮ್ಲಗಳಿವೆ. ದಿನಲೂ ದಾಳಿಂಬೆಯನ್ನು ತಿನ್ನುವುದರಿಂದ ಅಥವಾ ಅದರ ಜ್ಯೂಸ್ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಗೆ ಅತ್ಯುತ್ತಮವಾಗಿ ಸಹಾಯ ಮಾಡುತ್ತದೆ. ರಕ್ತದೊತ್ತಡ, ಮಧುಮೇಹವನ್ನು ಸುಧಾರಿಸುವುದರ ಜೊತೆ ಜೊತೆಗೆ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
ಇಷ್ಟೇ ಅಲ್ಲ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಅದು ಸನ್‌ಸ್ಕ್ರೀನ್ ಆಗಿ ಕೆಲಸ ಮಾಡುತ್ತದೆ. ಚರ್ಮವನ್ನು ಒಳಗಿನಿಂದ ರಕ್ಷಿಸಿ ಕಾಂತಿಯುತವಾಗಿ ಇರುವಂತೆ ನೋಡಿಕೊಳ್ಳುತ್ತದೆ. ಇದನ್ನು ನಿತ್ಯ ಸೇವನೆ ಮಾಡುವುದರಿಂದ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
ದಾಳಿಂಬೆ ತಿನ್ನುವುದರಿಂದ ಹೇಗೆ ಉಪಯೋಗ..?
- ಹೃದಯದ ಆರೋಗ್ಯವನ್ನು ಕಾಪಾಡುತ್ತದೆ
- ಉರಿಯೂತದ ಲಕ್ಷಣಗಳನ್ನ ಕಡಿಮೆ ಮಾಡುತ್ತೆ
- ಕ್ಯಾನ್ಸರ್ ವಿರೋಧಿಯಾಗಿ ಕೆಲಸ ಮಾಡುತ್ತದೆ
- ಸರಾಗವಾಗಿ ಮೂತ್ರವಿಸರ್ಜನೆಗೆ ಸಹಕರಿಸುತ್ತದೆ
- ಆಹಾರ ಜೀರ್ಣವಾಗಲು ದಾಳಿಂಬೆ ಒಳ್ಳೆಯದು
- ಬಾಯಿಯ ವಸಡಲ್ಲಿ ಕಾಯಿಲೆ ವಿರುದ್ಧ ಹೋರಾಡುತ್ತದೆ.
- ನಾರಿನಂಶ ಹೆಚ್ಚು ಇರುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ
- ದಾಳಿಂಬೆ ಮಲಬದ್ಧತೆ ತಡೆಯಲು ಸಹಾಯ ಮಾಡುತ್ತೆ
- ಮಧುಮೇಹ ಹೊಂದಿರುವವರು ದಾಳಿಂಬೆ ಸೇವನೆ ಮಾಡಬೇಕು
- ದಾಳಿಂಬೆ ರಕ್ತದಲ್ಲಿನ ಪ್ಲೇಟ್‌ಲೆಟ್ಸ್ ಹೆಪ್ಪು ಗಟ್ಟುವುದನ್ನು ತಡೆಯುತ್ತದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ