ಬೆಳ್ಳುಳ್ಳಿ ತಿನ್ನೋದರಿಂದ ಈ ಕಾಯಿಲೆಗಳು ಮಾಯ; ನೀವು ಓದಲೇಬೇಕಾದ ಸ್ಟೋರಿ

author-image
Ganesh Nachikethu
Updated On
ಬೆಳ್ಳುಳ್ಳಿ ರೇಟ್​​ ಕೇಳಿ ದಂಗಾದ ಗ್ರಾಹಕರು; ಕಳ್ಳರ ಹಾವಳಿ; ಜಮೀನಿನಲ್ಲೇ ರೈತರ ಠಿಕಾಣಿ!
Advertisment
  • ಬೆಳ್ಳುಳ್ಳಿಯನ್ನು ಇಷ್ಟಪಟ್ಟು ತಿನ್ನಿ.. ಆಮೇಲೆ ಪರಿಣಾಮ ನೋಡಿ
  • ಹೃದ್ರೋಗದಿಂದ ರಕ್ಷಿಸುವ ಗುಣ ಬೆಳ್ಳುಳ್ಳಿಗಿದೆ ಅಂದ್ರೆ ನಂಬ್ತೀರಾ?
  • ಕೊಲೆಸ್ಟ್ರಾಲ್​ ಮಟ್ಟವನ್ನು ಕಾಪಾಡುವ ಗುಣವನ್ನು ಹೊಂದಿದೆ

ಅನೇಕರು ಬೆಳ್ಳುಳ್ಳಿ ಸೇವಿಸುತ್ತಾರೆ. ಇನ್ನು ಕೆಲವರು ಬೆಳ್ಳುಳ್ಳಿ ಎಂದರೆ ಮಾರುದ್ದ ಓಡಿ ಹೋಗ್ತಾರೆ. ಆದರೆ ಇದರಲ್ಲಿರುವ ಆರೋಗ್ಯ ಪ್ರಯೋಜನದ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ ಬಿಡಿ. ಅಷ್ಟಕ್ಕೂ ಇದನ್ನು ತಿಂದರೆ ಏನೆಲ್ಲಾ ಸಮಸ್ಯೆ ದೂರ ಸರಿಯುತ್ತೆ ಗೊತ್ತಾ? ಈ ಸ್ಟೋರಿ ಓದಿ.

ಬೆಳ್ಳುಳ್ಳಿಯನ್ನು ಕೆಲವರು ಇಷ್ಟ ಪಟ್ಟು ತಿನ್ನುತ್ತಾರೆ. ಇನ್ನು ಕೆಲವರು ಪದಾರ್ಥದಲ್ಲಿ ಬೆಳ್ಳುಳ್ಳಿ ಕಂಡರೆ ಸಾಕು ಮೂಲೆಗೆಸೆಯುತ್ತಾರೆ. ಆದರೆ ಬೆಳ್ಳುಳ್ಳಿ ಔಷಧೀಯ ಗುಣಗಳನ್ನು ಹೊಂದಿದ್ದು, ಇದರ ಸೇವನೆಯಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ. ಅದರಲ್ಲೂ ರಂಜಕ, ಮ್ಯಾಂಗನೀಸ್​, ಕ್ಯಾಲ್ಸಿಯಂ ಅನೇಕ ಖನಿಜಗಳು ಇದರಲ್ಲಿದೆ.

ಹೃದ್ರೋಗದಿಂದ ರಕ್ಷಿಸುವ ಗುಣ ಇದಕ್ಕಿದೆ

ಬೆಳ್ಳುಳ್ಳಿ ಆಹಾರದಲ್ಲಿ ಹಾಕಿ ತಿನ್ನುವುದು ಒಂದೆಡೆಯಾದರೆ, ಹಸಿಯಾಗಿ ತಿಂದರೂ ಪ್ರಯೋಜನವಿದೆ. ಅದರಲ್ಲೂ ಪ್ರತಿನಿತ್ಯ 2 ಎಸಳು ಬೆಳ್ಳುಳ್ಳಿ ತಿಂದರೆ ಅನೇಕ ಆರೋಗ್ಯ ಸಮಸ್ಯೆ ದೂರವಾಗುತ್ತದೆ. ಹೃದ್ರೋಗದಿಂದ ರಕ್ಷಿಸುವ ಗುಣ ಬೆಳ್ಳುಳ್ಳಿಗಿದೆ.

publive-image

ದೇಹದ ಕಾಯಿಲೆಗಳಿಂದ ರಕ್ಷಿಸುವ ಗುಣ ಬೆಳ್ಳುಳ್ಳಿಗಿದೆ. ಜೊತೆಗೆ ಪೋಷಕಾಂಶಗಳನ್ನು ಬೆಳ್ಳುಳ್ಳಿ ಹೊಂದಿದೆ. ಇದನ್ನು ಚಟ್ನಿ, ಸಾಂಬರ್​, ಒಗ್ಗರಣೆ ಸಮಯದಲ್ಲಿ ಅತಿಯಾಗಿ ಬಳಸುತ್ತಾರೆ. ಆದರೆ ತಿನ್ನುವವರ ಸಂಖ್ಯೆ ಮಾತ್ರ ತೀರಾ ಕಡಿಮೆ.

ರಕ್ತ ಶುದ್ಧೀಕರಣ ಮಾಡುತ್ತೆ

ಮತ್ತೊಂದು ಸಂಗತಿ ಎಂದರೆ ಬೆಳ್ಳುಳ್ಳಿ ಕೊಲೆಸ್ಟ್ರಾಲ್​ ಮಟ್ಟವನ್ನು ಕಾಪಾಡಲು ಸಹಾಯ ಮಾಡುತ್ತದೆ. ಇನ್ನು ರಕ್ತ ಶುದ್ಧೀಕರಣಕ್ಕೂ ಇದು ನಂಬರ್​ ಒನ್. ಜೊತೆ ಜೊತೆಗೆ ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿದೆ.

ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಗುಣ ಬೆಳ್ಳುಳ್ಳಿಗಿದೆ. ಹುರಿದ ಬೆಳ್ಳುಳ್ಳಿ ತಿಂದರೆ ರಕ್ತದೊತ್ತಡವನ್ನ ನಿಯಂತ್ರಣದಲ್ಲಿ ಇಡಬಹುದಾಗಿದೆ. ಆದರೆ ಅಧಿಕ ರಕ್ತದೊತ್ತಡ ಇರುವವರು ನಿಯಮಿತವಾಗಿ ಸೇವಿಸುವುದು ಬೆಸ್ಟ್​.

ಇದನ್ನೂ ಓದಿ:ನಿವೃತ್ತಿ ಬಗ್ಗೆ ಬಿಗ್​ ಅಪ್ಡೇಟ್​ ಕೊಟ್ಟ ವಿರಾಟ್​ ಕೊಹ್ಲಿ; ಈ ಬಗ್ಗೆ ಏನಂದ್ರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment