/newsfirstlive-kannada/media/post_attachments/wp-content/uploads/2023/06/PUMPKIN_HEALTH_5.jpg)
ಕುಂಬಳಕಾಯಿ ಹ್ಯಾಲೋವೀನ್ ಮತ್ತು ಥ್ಯಾಂಕ್ಸ್ಗಿವಿಂಗ್ನಿಂದ ಕೂಡಿದ ತರಕಾರಿ. ಇದು ಹೆಚ್ಚಿನ ಪೌಷ್ಟಿಕಾಂಶ ಹೊಂದಿದ್ದು ಆರೋಗ್ಯಕ್ಕೆ ಅನೇಕ ಉಪಯುಕ್ತತೆಯನ್ನು ನೀಡುತ್ತದೆ. ಆಹಾರದಲ್ಲಿ ಇದನ್ನು ಸೇರಿಸಿಕೊಳ್ಳುವುದಕ್ಕೆ ಕೆಲವು ಕಾರಣಗಳಿವೆ. ಹೀಗಾಗಿಯೇ ಪ್ರತಿ ಮನೆಯಲ್ಲೂ ಈ ಕುಂಬಳಕಾಯಿ ಸ್ಥಾನ ಪಡೆದಿದೆ.
- ಕುಂಬಳಕಾಯಿಯಲ್ಲಿ ಅಧಿಕ ಮಟ್ಟದಲ್ಲಿ ವಿಟಮಿನ್ ಎ, ಇ, ಸಿ ಮತ್ತು ಕಬ್ಬಿಣದ ಅಂಶಗಳಿವೆ. ಹೀಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚುವುದರಿಂದ ದೇಹದಲ್ಲಿ ಸೋಂಕುಗಳು ಹರಡುವುದನ್ನು ತಡೆಯುತ್ತದೆ.
- ತರಕಾರಿಯ ಒಂದು ವಿಧವಾದ ಕುಂಬಳಕಾಯಿಯಲ್ಲಿ ಫೈಬರ್ ಇರುತ್ತದೆ. ಇದರಿಂದ ನಾವು ತಿಂದ ಆಹಾರ ಬೇಗ ಜೀರ್ಣಗೊಳ್ಳುವಂತೆ ಮಾಡುತ್ತದೆ. ಹೀಗಾಗಿ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡಲು ಸಹಾಯವಾಗುತ್ತದೆ.
- ವಿಟಮಿನ್- ಎ ಅಂಶ ಹೊಂದಿದ್ದರಿಂದ ಕಣ್ಣಿಗೆ ಹೆಚ್ಚು ಉಪಕಾರಿಯಾಗಿದೆ. ಇದನ್ನು ಆಹಾರದಲ್ಲಿ ಸೇವಿಸುವುದರಿಂದ ಕಣ್ಣಿನಪೊರೆ ಮತ್ತು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ಅನ್ನು ತಡೆದು ದೃಷ್ಟಿ ಬರುವಂತೆ ಮಾಡುತ್ತದೆ.
- ತೂಕವನ್ನು ಕಳೆದುಕೊಳ್ಳಲು ಕುಂಬಳಕಾಯಿ ಸಹಾಯ ಮಾಡುತ್ತದೆ. ಅತ್ಯಂತ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದೇ ದೇಹವನ್ನು ದಪ್ಪ ಆಗದಂತೆ ತಡೆಯುತ್ತದೆ.
- ಕೊಲೆಸ್ಟ್ರಾಲ್ನಿಂದ ಕೆಲವೊಮ್ಮೆ ಹೃದಯಾಘಾತ ಆಗುವ ಸಂಭವವಿರುತ್ತದೆ. ನಾವು ಆಹಾರದಲ್ಲಿ ಕುಂಬಳಕಾಯಿಯನ್ನು ತಿನ್ನುವುದರಿಂದ ಫೈಬರ್ ಅಂಶವು ಕೊಲೆಸ್ಟ್ರಾಲ್ ಹೋಗಲಾಡಿಸಿ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ.
- ಮಧುಮೇಹಿಗಳಿಗೆ ಉತ್ತಮ ಆಹಾರವಾಗಿರುವ ಕುಂಬಳಕಾಯಿ, ಮೇದೊಜೀರಕ ಗ್ರಂಥಿಯ ಕೋಶಗಳ ಪುನರುತ್ಪಾದನೆ ಹೆಚ್ಚಿಸುತ್ತವೆ. ಇದು ಮಧುಮೇಹಿಗಳಲ್ಲಿ ಮಾತ್ರವಲ್ಲದೆ ಸಕ್ಕರೆ ಕಾಯಿಲೆ ಬರುತ್ತಿದ್ರೆ, ಅಥವಾ ಕಾಯಿಲೆ ಹೆಚ್ಚಾಗಿದ್ದರೆ ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣ ಮಾಡುವ ಸಾಮರ್ಥ್ಯ ಕುಂಬಳಕಾಯಿ ಹೊಂದಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
- ಕುಂಬಳಕಾಯಿ ಜೊತೆಗೆ ಇದರ ಬೀಜಗಳು ಕೂಡ ಆರೋಗ್ಯಕ್ಕೆ ಒಳ್ಳೆಯದು. ಈ ಬೀಜಗಳು ಅಧಿಕ ರಕ್ತದೊತ್ತಡ, ಕ್ಯಾನ್ಸರ್ ರೋಗಗಳನ್ನು ನಿಯಂತ್ರಣ ಮಾಡುತ್ತವೆ. ದೈಹಿಕ ಸಮಸ್ಯೆ ಇರುವವರು ಬೀಜಗಳ ಸೇವನೆ ತಪ್ಪಿಸಬೇಕು. ಆದ್ರೆ ಬೀಜಗಳನ್ನು ಹೇಗೆ ಸೇವಿಸಬೇಕು ಅಂತಾ ವೈದ್ಯರ ಸಲಹೆ ಪಡೆಯಲೇಬೇಕು.
- ಚರ್ಮ ಮತ್ತು ಕೂದಲಿಗೆ ವಿಟಮಿನ್- ಇ ಸೇವನೆ ಅತ್ಯಂತ ಅಗತ್ಯವಾಗಿದೆ. ಫೈಬರ್ ಅಂಶ ಹೊಟ್ಟೆಯ ಜೀರ್ಣಕ್ರಿಯೆ ವ್ಯವಸ್ಥೆ ಆರೋಗ್ಯಕರವಾಗಿ ಉಳಿಸುತ್ತದೆ. ಈ ಕಾರಣದಿಂದ ಮಲಬದ್ಧತೆಯ ಸಮಸ್ಯೆ ನಿವಾರಣೆಯಾಗುತ್ತದೆ.
- ಕುಂಬಳಕಾಯಿಯಲ್ಲಿ ಕಾರ್ಬೋಹೈಡ್ರೇಟ್ಸ್, ಕ್ಯಾಲ್ಸಿಯಂ, ಪೊಟ್ಯಾಷಿಯಮ್, ಮೆಗ್ನೀಷಿಯಮ್, ನಿಯಾಸಿನ್, ರಿಬೋಫ್ಲಾವಿನ್, ಸತು, ಫೋಲೇಟ್ ಇತ್ಯಾದಿ ಅಂಶಗಳು ಹೇರಳವಾಗಿವೆ.
- ಸೌತೆಕಾಯಿಯಲ್ಲಿರುವಂತೆ ಕುಂಬಳಕಾಯಿಯಲ್ಲೂ ನೀರಿನಾಂಶ ಸಮೃದ್ಧವಾಗಿದೆ. ಶೇಕಡಾ 90 ರಷ್ಟು ನೀರು ಈ ತರಕಾರಿಯಲ್ಲಿ ಇರುತ್ತದೆ. ಹೀಗಾಗಿ ಇದನ್ನು ಸೇವನೆ ಮಾಡುವುದರಿಂದ ನೀವು ರಿಫ್ರೆಶ್ ಕೂಡ ಆಗಬಹುದು.
ಇನ್ನು ಕುಂಬಳಕಾಯಿಯಿಂದ ಭಾರತದಲ್ಲಿ ಹಲವಾರು ರುಚಿಕರವಾದ ಉಪಹಾರಗಳನ್ನು ತಯಾರಿಸಲಾಗುತ್ತದೆ. ವಾರದಲ್ಲಿ ಒಮ್ಮೆಯಾದರೂ ಈ ಪದಾರ್ಥವನ್ನು ಮನೆಯಲ್ಲಿ ಉಪಯೋಗಿಸುತ್ತಾರೆ. ದೇಶದಲ್ಲಿ ಗುದ್ದಲಿ ಪೂಜೆ, ದೃಷ್ಟಿ ತೆಗೆಯಲು, ಗೃಹ ಪ್ರವೇಶದಂತಹ ಸಮಾರಂಭಗಳಲ್ಲಿ ಕುಂಬಳಕಾಯಿಯನ್ನು ಒಡೆದು ಶುಭ ಆಗಲೆಂದು ಕೇಳಿಕೊಳ್ಳುವುದು ರೂಢಿಯಲ್ಲಿದೆ.
ಇದನ್ನೂ ಓದಿ:6,6,6,6,6,6; ಸ್ಫೋಟಕ ಶತಕ ಸಿಡಿಸಿ ದಾಖಲೆ ಬರೆದ ಇಶಾನ್ ಕಿಶನ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ