ನಿಂಬೆ ರಸ ಕುಡಿಯೋದರಿಂದ ಒಂದಲ್ಲ ಎರಡಲ್ಲ ಹಲವಾರು ಲಾಭ; ಈ ಎಲ್ಲಾ ಕಾಯಿಲೆ ಮಾಯ!

author-image
Ganesh Nachikethu
Updated On
ನಿಂಬೆ ರಸ ಕುಡಿಯೋದರಿಂದ ಒಂದಲ್ಲ ಎರಡಲ್ಲ ಹಲವಾರು ಲಾಭ; ಈ ಎಲ್ಲಾ ಕಾಯಿಲೆ ಮಾಯ!
Advertisment
  • ಬಿಸಿಲಿನಿಂದ ಬರುವ ಆರೋಗ್ಯ ಸಮಸ್ಯೆಗಳಿಗೆ ನಿಂಬೆಹಣ್ಣು ಪರಿಹಾರ
  • ನಿಂಬೆಹಣ್ಣಿನಿಂದ ನಮ್ಮ ದೇಹಕ್ಕೆ ಇವೆ ಹಲವಾರು ಪ್ರಯೋಜನಗಳು!
  • ಮೂತ್ರಪಿಂಡದಲ್ಲಿ ಸ್ಟೋನ್ ಆಗದಂತೆ ಹೇಗೆ ಸಹಾಯ ಮಾಡುತ್ತೆ?

ಮನೆಯಲ್ಲಿ ಯಾವುದೇ ಹಣ್ಣುಗಳು ಇಲ್ಲದೆ ಇದ್ರೂ ಕೊನೆಗೆ ನಿಂಬೆಹಣ್ಣು ಮಾತ್ರ ಇದ್ದೇ ಇರುತ್ತದೆ. ಏಕೆಂದರೆ ಮನೆಯಲ್ಲಿ ಪೋಷಕರಿಗೆ ಮೊದಲಿನಿಂದಲೂ ನಿಂಬೆಹಣ್ಣನ್ನ ತರುವುದು ಅಭ್ಯಾಸ. ಹೀಗಾಗಿ ನಿಂಬೆ ಹಣ್ಣಿನ ಜ್ಯೂಸ್ ಬಹಳಷ್ಟು ಜನರಿಗೆ ಅಚ್ಚುಮೆಚ್ಚು. ನಿಂಬೆ ಹಣ್ಣು ದೇಹಕ್ಕೆ ಬೇಕಾದಷ್ಟು ಒಳ್ಳೆಯದನ್ನು ಒದಗಿಸುತ್ತದೆ. ಬಿಸಿಲಿನಿಂದ ಉಂಟಾಗುವ ಹಲವಾರು ಆರೋಗ್ಯ ಸಮಸ್ಯೆಗಳಿಗೆ ನಿಂಬೆಹಣ್ಣು ಪರಿಹಾರ ಎಂದೇ ಹೇಳಬಹುದು.

ನಿಂಬೆ ವಿಟಾಮಿನ್- ಸಿ ಅನ್ನು ಯಥೇಚ್ಛವಾಗಿ ಹೊಂದಿದೆ. ಇದರ ವೈಜ್ಞಾನಿಕ ಹೆಸರು ಸಿಟ್ರಸ್ ಎಂದು ಕರೆಯಲಾಗುತ್ತದೆ. ಕ್ಯಾನ್ಸರ್ ವಿರೋಧಿಯಾಗಿ ನಿಂಬೆಹಣ್ಣು ಕೆಲಸ ಮಾಡುತ್ತದೆ. ಬಾಯಿಯಲ್ಲಿ ಹುಣ್ಣುಗಳು ಉಂಟಾದರೆ ನಿಂಬೆ ಜ್ಯೂಸ್ ಸೇವನೆಯಿಂದ ಹೋಗಲಾಡಿಸಬಹುದು. ಸಿಟ್ರಸ್ ಹಣ್ಣುಗಳ ಸಿಪ್ಪೆಗಳು ರಾಸಾಯನಿಕಗಳನ್ನ ಹೊಂದಿದ್ದರಿಂದ ಅವು ಕ್ಯಾನ್ಸರ್ ವಿರೋಧಿಯಾಗಿ ಕೆಲಸ ಮಾಡುತ್ತವೆ.

publive-image

ಇನ್ನು, ನಿಂಬೆ ರಸ ಅಥವಾ ಜ್ಯೂಸ್ ಮೂತ್ರದಲ್ಲಿನ ಸಿಟ್ರೇಟ್ ಮಟ್ಟ ಹೆಚ್ಚಿಗೆ ಮಾಡುತ್ತದೆ. ಪದೇ ಪದೇ ಮೂತ್ರವಿಸರ್ಜನೆ ಮಾಡುವುದರಿಂದ ಮೂತ್ರಪಿಂಡದಲ್ಲಿ ಸ್ಟೋನ್ ಆಗದಂತೆ ಸಹಾಯ ಮಾಡುತ್ತದೆ. ನಿಂಬೆ ಹಣ್ಣಿನ ಜ್ಯೂಸ್ ಸೇವನೆ ಮಾಡುವುದರಿಂದ ಕರುಳಿನ ಭಾಗ ಸ್ವಚ್ಛವಾಗುತ್ತದೆ. ಇದರಿಂದ ಸರಾಗವಾದ ಮಲವಿಸರ್ಜನೆ ಆಗುವಂತೆ ಮಾಡುತ್ತದೆ.

ಇದರ ಸಿಪ್ಪೆ ಮತ್ತು ತಿರುಳಿನಲ್ಲಿ ಪೆಕ್ಟಿನ್ (pectin) ಎಂಬ ಕರಗುವ ಫೈಬರ್ ಇರುತ್ತದೆ. ಇದು ಕರುಳಿನಲ್ಲಿ ಜೀರ್ಣಕಾರಿ ಕಿಣ್ವಗಳ ಉತ್ಪಾದನೆ ಹೆಚ್ಚು ಮಾಡಿ ನಮ್ಮ ದೇಹದಿಂದ ಬೇಡವಾದ ವಸ್ತುವನ್ನು ಹೊರಹಾಕಲು ಸಹಾಯ ಮಾಡುತ್ತದೆ.

publive-image

ಫೈಬರ್ ಕಂಟೆಂಟ್ ಇರೋ ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಸಮ ಪ್ರಮಾಣದಲ್ಲಿ ಇರುವಂತೆ ಮಾಡುತ್ತದೆ. ಹೀಗಾಗಿ ಇದು ಶುಗರ್​ ಕಾಯಿಲೆ ಹೊಂದಿರುವವರೆಗೆ ಹೆಚ್ಚು ಉತ್ತಮವಾಗಿದೆ. ನಿಂಬೆಯಲ್ಲಿ ವಿಟಮಿನ್ ಸಿ ಹೇರಳವಾಗಿ ಕಂಡುಬರುತ್ತದೆ. ಇದು ವಯಸ್ಸಾದ ವಿರೋಧಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಚರ್ಮದ ರಂಧ್ರಗಳಿಂದ ಹೊರಬರುವ ಹೆಚ್ಚುವರಿ ಎಣ್ಣೆ ನಿಯಂತ್ರಿಸುತ್ತದೆ. ಇದರಿಂದ ನಮಗೆ ಮೊಡವೆಗಳಿಂದ ಪರಿಹಾರ ನೀಡುತ್ತದೆ. ಮುಖದಲ್ಲಿ ಕಪ್ಪು ಕಲೆಗಳನ್ನು ತಪ್ಪಿಸಲು ನಿಂಬೆ ಪ್ರಯೋಜನಕಾರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment