ಮಾವಿನ ಎಲೆಯಲ್ಲಿ ಆರೋಗ್ಯದ ರಹಸ್ಯ! ಈ ವಿಚಾರಗಳು ಗೊತ್ತಾದ್ರೆ ನೀವು ಮಿಸ್ ಮಾಡಲ್ಲ..!

author-image
Ganesh
Updated On
ಮಾವಿನ ಎಲೆಯಲ್ಲಿ ಆರೋಗ್ಯದ ರಹಸ್ಯ! ಈ ವಿಚಾರಗಳು ಗೊತ್ತಾದ್ರೆ ನೀವು ಮಿಸ್ ಮಾಡಲ್ಲ..!
Advertisment
  • ಮಾವಿನ ಎಲೆ ಸೇವನೆಯಿಂದ ಏನೆಲ್ಲ ಲಾಭ ಇದೆ?
  • ಈಗಲೂ ಅನೇಕ ರೋಗಗಳಿಗೆ ಮದ್ದು ಮಾವಿನ ಎಲೆ
  • ಮಾವಿನ ಎಲೆಗಳಲ್ಲೂ ಹಲವಾರು ಔಷಧೀಯ ಗುಣ

ಹಣ್ಣುಗಳ ರಾಜ ಮಾವು.. ಅದರ ರುಚಿಗೆ ಯಾವುದೇ ಹಣ್ಣು ಸಾಟಿ ಆಗಲ್ಲ. ಮೇಲಾಗಿ ಮಾವಿನ ಹಣ್ಣಿನಲ್ಲಿ ಪೋಷಕಾಂಶಗಳೇ ಹೆಚ್ಚು. ಜನರು ಮಾವು ಮತ್ತು ಹಣ್ಣುಗಳನ್ನು ತಿನ್ನಲು ಇಷ್ಟಪಡ್ತಾರೆ. ಆದರೆ ಮಾವಿನ ಎಲೆಗಳಲ್ಲೂ ಹಲವಾರು ಔಷಧೀಯ ಗುಣಗಳಿವೆ.

ಮಾವಿನ ಎಲೆಗಳಲ್ಲಿ ವಿಟಮಿನ್ ಸಿ, ಬಿ ಮತ್ತು ಎ ಸಮೃದ್ಧವಾಗಿದೆ. ಅನೇಕ ಇತರದ ಪೋಷಕಾಂಶಗಳಿಂದ ಕೂಡಿದೆ. ಹೆಚ್ಚಿನ ಪ್ರಮಾಣದ ಫ್ಲೇವನಾಯ್ಡ್ಸ್​​, ಫೀನಾಲ್‌ ಸೇರಿದಂತೆ ರೋಗ ನಿರೋಧಕ ಶಕ್ತಿಯ ಗುಣವನ್ನು ಹೊಂದಿದೆ. ಹಾಗಾಗಿ ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಮಾವಿನ ಎಲೆಗಳ ಚಹಾ ಪ್ರತಿದಿನ ಕುಡಿಯುವುದರಿಂದ ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಬಹುದು. ಮಾವಿನ ಎಲೆಯ ಚಹಾವು ಚಯಾಪಚಯ ಕ್ರಿಯೆಗೆ ಹೆಚ್ಚು ಸಹಾಯ ಮಾಡುತ್ತದೆ. ಇದೇ ಕಾರಣಕ್ಕೆ ಆಯುರ್ವೇದ ಮಾವಿನ ಎಲೆಯನ್ನು ಹೆಚ್ಚು ನಂಬುತ್ತದೆ.

ಇದನ್ನೂ ಓದಿ:ಬೆಳಗಿನ ಈ 5 ಅಭ್ಯಾಸಗಳು ನಿಮ್ಮನ್ನು ಮಾರಣಾಂತಿಕ ಕಾಯಿಲೆಯಿಂದ ಕಾಪಾಡುತ್ತವೆ; ತಪ್ಪದೇ ಪಾಲಿಸಿ!

publive-image

ಏನೆಲ್ಲ ಲಾಭ..?

  • ಮಾವಿನ ಎಲೆಗಳ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ
  • ಎಲೆಗಳಲ್ಲಿರುವ ನಾರಿನಂಶವು ಅಜೀರ್ಣದಂತಹ ಸಮಸ್ಯೆಗಳ ನಿವಾರಣೆ
  • ದೇಹದಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ
  • ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯ ಮಾಡ್ತದೆ
  •  ರಕ್ತದೊತ್ತಡ ನಿಯಂತ್ರಣದಲ್ಲಿಡಲು ಮಾವಿನ ಎಲೆಗಳ ಸೇವನೆ ಒಳ್ಳೆಯದು
  • ಮಾವಿನ ಎಲೆಗಳು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿವೆ
  •  ಚರ್ಮವು ಆರೋಗ್ಯಕರ.. ಕಿರಿಕಿರಿ ಮತ್ತು ದದ್ದುಗಳಂತಹ ಸಮಸ್ಯೆ ಬರಲ್ಲ
  •  ಈ ಎಲೆಗಳ ಸಾರವು ನೀವು ಹೆಚ್ಚು ಯಂಗ್ ಆಗಿ ಕಾಣಲು ಸಹಾಯ ಮಾಡ್ತದೆ
  •  ಮಾವಿನ ಎಲೆಗಳು ಕೂದಲಿನ ಸಮಸ್ಯೆಗಳನ್ನೂ ನಿವಾರಿಸುತ್ತದೆ

ಇದನ್ನೂ ಓದಿ:ಅತಿಯಾದ್ರೆ ಅಮೃತ ಮಾತ್ರವಲ್ಲ, ನೀರು ಕೂಡ ಅಪಾಯ; ವಿಪರೀತ ಆದ್ರೆ ಜೀವಜಲವೂ ಕೂಡ ಕಂಟಕ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment