newsfirstkannada.com

World Meditation day ಯಾವಾಗ.. ಧ್ಯಾನದಿಂದ ನಮಗೆ ಏನೆಲ್ಲ ಪ್ರಯೋಜನ ಗೊತ್ತಾ?

Share :

Published May 20, 2024 at 11:20am

    ಸಮಸ್ಯೆಯಲ್ಲಿ ಮುಳುಗಿರುವವರು ಧ್ಯಾನದಿಂದ ಉಪಯೋಗ ಪಡೆಯಿರಿ

    ಜೀವನ ಮತ್ತೊಂದು ನವಚೇತನ ಪಡೆಯಲು ಧ್ಯಾನ ನೀಡುತ್ತದೆ ಪವರ್​

    ನಿತ್ಯ ಧ್ಯಾನ ಮಾಡಿದರೆ ಮನದ ಸಮಸ್ಯೆಗಳೆಲ್ಲ ಮಾಯ ಆಗೋಗುತ್ತಾವೆ

ನಮ್ಮ ಮನಸಿನ ಅರಿವಿನ ಒಂದು ಕ್ರಮವನ್ನು ಉಂಟುಮಾಡಿ ಸದಾ ಶಾಂತಿಯಿಂದ, ಎಂತಹ ಒತ್ತಡವನ್ನೇ ಆಗಲಿ ನಿಭಾಯಿಸುವಂತಹ ಶಕ್ತಿ ನೀಡುವುದೇ ಧ್ಯಾನವಾಗಿದೆ. ಧ್ಯಾನ ವಿವಿಧ ವಿಶಾಲ ಅರ್ಥ ಹೊಂದಿದ್ದು ಅದು ಕೆಲವು ತಂತ್ರಗಳನ್ನ ಒಳಗೊಂಡಿದ್ದು ಮಾನಸಿಕ ಸ್ಥೈರ್ಯ, ವಿಶ್ರಾಂತಿ, ಆಂತರಿಕ ಶಕ್ತಿ ಅಥವಾ ಜೀವ ಶಕ್ತಿ ನಿರ್ಮಿಸುವಲ್ಲಿ ಧ್ಯಾನ ಅತ್ಯಂತ ಪ್ರಮುಖವಾಗಿದೆ. ನಮ್ಮ ಮನಸು ಹಲವು ಗೊಂದಲಗಳಿಂದ ಕೂಡಿ ಸ್ಥಿರದಲ್ಲಿ ಇರಲಿಲ್ಲ ಎಂದರೆ ನಿತ್ಯ ಧ್ಯಾನ ಮಾಡಿದರೆ ಮನದ ಸಮಸ್ಯೆಗಳೆಲ್ಲ ಮಾಯವಾಗಿ ಆತ್ಮಸ್ಥೈರ್ಯ ನಮ್ಮಲ್ಲಿ ರೂಪುಗೊಳ್ಳುತ್ತದೆ.

ಒತ್ತಡ ಹಾಗೂ ಆತಂಕವನ್ನು ಕಡಿಮೆ ಮಾಡಿ ಮನಸ್ಥಿತಿಯನ್ನು ಹೆಚ್ಚಿಸಿ ಆರೋಗ್ಯಕರ ಜೀವನಕ್ಕೆ ಧ್ಯಾನ ಸಹಕಾರಿ ಆಗುತ್ತದೆ. ಧ್ಯಾನದಿಂದ ಒಳ್ಳೆಯ ನಿದ್ದೆಯು ಆವರಿಸಿಕೊಳ್ಳುತ್ತದೆ. ಜೊತೆಗೆ ಅರಿವಿನ ಕೌಶಲ್ಯ ಪಸರಿಸುತ್ತದೆ. ಆರೋಗ್ಯದ ಅನೇಕ ಪ್ರಯೋಜನಗಳನ್ನು ಪಡೆಯಲು ಇಂದಿನ ಜನರು ಧ್ಯಾನ ಜನಪ್ರಿಯಗೊಳಿಸಿದ್ದಾರೆ.

ಇದನ್ನೂ ಓದಿ: ರಸ್ತೆ ಮಧ್ಯೆ ಕೆಟ್ಟು ನಿಂತ 2 KSRTC ಬಸ್​..‌ ಕಿಲೋ ಮೀಟರ್​ವರೆಗಿನ ಟ್ರಾಫಿಕ್​ನಲ್ಲಿ ನಿಂತ ಆ್ಯಂಬುಲೆನ್ಸ್​; ಎಲ್ಲಿ?

ಪ್ರತಿ ವರ್ಷ ಮೇ 21 ಅನ್ನು ವಿಶ್ವ ಧ್ಯಾನ ದಿನ

ನಿಯಮಿತವಾಗಿ ಧ್ಯಾನ ಮಾಡುವುದರಿಂದ ಅನೇಕ ರೀತಿಯ ದೈಹಿಕ ಆರೋಗ್ಯ ಪ್ರಯೋಜನ ಪಡೆಯಬಹುದು. ಮನಸ್ಥಿತಿ ಚೆನ್ನಾಗಿಟ್ಟುಕೊಳ್ಳಲು ಧ್ಯಾನ ಸಹಾಯ ಮಾಡುತ್ತದೆ. ಧ್ಯಾನದ ಪ್ರಯೋಜನಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಮತ್ತು ಅದರ ಮಹತ್ವ ತಿಳಿಯಪಡಿಸಲು ಪ್ರತಿ ವರ್ಷ ಮೇ 21 ಅನ್ನು ವಿಶ್ವ ಧ್ಯಾನ (world Meditation day) ದಿನವೆಂದು ಆಚರಿಸಲಾಗುತ್ತದೆ. ಅಂದರೆ ನಾಳೆಯೇ ವಿಶ್ವ ಧ್ಯಾನ ದಿನವಾಗಿದ್ದರಿಂದ ಧ್ಯಾನದ ಮಾಡುವುದು ಮರೆಯಬೇಡಿ.

ಧ್ಯಾನ ಮಾಡುವುದರಿಂದ ಒತ್ತಡದಲ್ಲಿರುವ ಹಾರ್ಮೋನ್ ಕಾರ್ಟಿಸೋಲ್ನ ಮಟ್ಟ ಹೆಚ್ಚಿಸುತ್ತದೆ. ಇದೊಂದು ಒತ್ತಡ ನಿವಾರಕವಾಗಿದೆ. ಧ್ಯಾನದ ಬಗ್ಗೆ ಕುರಿತು ಅಧ್ಯಾಯನ ಹಾಗೂ ವಿವಿಧ ಭಂಗಿಗಳನ್ನ ಪ್ರಾಕ್ಟೀಸ್ ಮಾಡಿದರೆ ಒತ್ತಡ ಅದಾಗೆ ಕಡಿಮೆ ಆಗುತ್ತದೆ.

ಇದನ್ನೂ ಓದಿ: ಲೋಕಲ್​ ಬಾಯ್ಸ್​​ನಂತೆ ಹೆಗಲ ಮೇಲೆ ಕೈ ಹಾಕೊಂಡು ಭರ್ಜರಿ ಸ್ಟೆಪ್ಸ್.. ಕಾರ್ತಿಕ್, ಸಿರಾಜ್ ಡ್ಯಾನ್ಸ್ ಹೇಗಿದೆ? ​

ಇದಲ್ಲದೆ, ಒತ್ತಡಕ್ಕೆ ಪ್ರತಿಕ್ರಿಯೆಯಾಗಿ ಬಿಡುಗಡೆಯಾಗುವ ಸೈಟೊಕಿನ್ಸ್ (cytokines) ಎಂಬ ಉರಿಯೂತದ ರಾಸಾಯನಿಕಗಳು ಮನಸ್ಥಿತಿಯ ಮೇಲೆ ಪರಿಣಾಮ ಬೀರಬಹುದು, ಇದು ಖಿನ್ನತೆಗೆ ಕಾರಣವಾಗುತ್ತದೆ. ಹಲವಾರು ಅಧ್ಯಯನಗಳ ವಿಮರ್ಶೆಯು ಧ್ಯಾನವು ಈ ಉರಿಯೂತದ ರಾಸಾಯನಿಕಗಳ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಖಿನ್ನತೆ ಕಡಿಮೆ ಮಾಡುತ್ತೆ ಎಂಬುದನ್ನು ಅಧ್ಯಯನದಿಂದ ಗೊತ್ತಾಗಿದೆ.

ಕೌಶಲ್ಯಗಳನ್ನು ಬೆಳೆಸಿಕೊಳ್ಳಬಹುದು

ಧ್ಯಾನದ ನಮ್ಮಲ್ಲಿ ಕಾನ್ಫೆಡೆಂಟ್ ಹೆಚ್ಚಿಸುತ್ತದೆ. ಇದರಿಂದ ಬಲವಾದ ತಿಳುವಳಿಕೆಯನ್ನು ನಾವು ಬೆಳೆಸಿಕೊಳ್ಳಬಹುದು. ಸಮಾಜದಲ್ಲಿ ಅತ್ಯುತ್ತಮ ವ್ಯಕ್ತಿಯಾಗಿರಲು ಧ್ಯಾನ ಮುಖ್ಯವಾಗಿದೆ. ಸಮಸ್ಯಗಳನ್ನು ಸೃಜನಶೀಲವಾಗಿ ಪರಿಹರಿಸುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಬಹುದಾಗಿದೆ. ಧ್ಯಾನದಲ್ಲಿ ನಮ್ಮನ್ನು ತೊಡಗಿಸುವುದರಿಂದ ಮನಸ್ಸನ್ನು ಶಾಂತಗೊಳಿಸುಬಹುದು. ಗುರಿ ತಲುಪಲು ಬೇಕಾಗಿರುವ ಏಕಾಗ್ರತೆ ಸಾಧಿಸಲು ನೆರವು ನೀಡುತ್ತದೆ. ಹೀಗಾಗಿ ನಾವು ಮಾಡಿದ ಕೆಲಸಗಳಲ್ಲಿ ಸಕ್ಸಸ್ ಅನ್ನು ಬೇಗನೆ ಪಡೆಯಬಹುದು. ಕಾಯಿಲೆಗಳಿಂದ ನಮ್ಮನ್ನು ಮುಕ್ತ ಮಾಡಿ ಆರೋಗ್ಯಕರ ಬದುಕು ನಡೆಸಲು ಧ್ಯಾನ ಸಹಾಯ ಮಾಡುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

World Meditation day ಯಾವಾಗ.. ಧ್ಯಾನದಿಂದ ನಮಗೆ ಏನೆಲ್ಲ ಪ್ರಯೋಜನ ಗೊತ್ತಾ?

https://newsfirstlive.com/wp-content/uploads/2024/05/HEALTH_2.jpg

Load More