/newsfirstlive-kannada/media/post_attachments/wp-content/uploads/2024/11/ORANGES.jpg)
ರಸಭರಿತವಾದ ಕಿತ್ತಳೆ ಅಥವಾ ಮೂಸಂಬಿ ಹಣ್ಣು ಅನೇಕ ಉತ್ತಮವಾದ ಪೋಷಕಾಂಶ ಹೊಂದಿದೆ. ಇದರಲ್ಲಿ ಜೀವಸತ್ವಗಳು, ಪೊಟ್ಯಾಷಿಯಂ, ಖನಿಜಗಳು, ಮೆಗ್ನೀಷಿಯಂ, ಬೀಟಾ-ಕ್ಯಾರೋಟಿನ್ (Beta-carotene) ಹಾಗೂ ಫೈಬರ್ ಹೇರಳವಾಗಿ ಇರುತ್ತವೆ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚು ಇರುರುವುದರಿಂದ ಆರೋಗ್ಯಕ್ಕೆ ಉತ್ತಮವಾಗಿದೆ. ಕಿತ್ತಳೆ ಅಥವಾ ಮೂಸಂಬಿ ನಮ್ಮ ಆರೋಗ್ಯಕ್ಕೆ ಹೇಗೆ ಫಲಕಾರಿಯಾಗಿದೆ ಎಂಬುವ ಮಾಹಿತಿ ಇಲ್ಲಿದೆ.
ಮೂಸಂಬಿ ಹಣ್ಣು ನಮ್ಮ ದೇಹದಲ್ಲಿನ ಕೆಟ್ಟದಾದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುವುದರ ಜೊತೆಗೆ ಸಾಮಾನ್ಯ ಶೀತ ಹಾಗೂ ಜ್ವರದ ವಿರುದ್ಧವಾಗಿ ಕೆಲಸ ಮಾಡುತ್ತದೆ. ಕಿತ್ತಳೆ ಜೂಸ್ನಿಂದಲೂ ಹಲವಾರು ಉಪಯೋಗಗಳು ಇವೆ. ವೈದ್ಯರು ಹಲವು ರೋಗಿಗಳಿಗೆ ಇದೇ ಹಣ್ಣನ್ನು ತಿನ್ನಬೇಕು ಎಂದು ಸಜೆಸ್ಟ್ ಮಾಡುತ್ತಿರುತ್ತಾರೆ.
ಇದನ್ನೂ ಓದಿ: ಚಳಿಗಾಲಕ್ಕೆ ನೀವು ಈ ಸೊಪ್ಪುಗಳನ್ನು ತಿನ್ನಲೇಬೇಕು; Winter Seasonಗೆ ಹೇಳಿ ಮಾಡಿಸಿದ ಆರೋಗ್ಯವರ್ಧಕಗಳು
ಕಿತ್ತಳೆ ಹಣ್ಣಿನಲ್ಲಿ ಸಿಟ್ರಸ್ ಹಾಗೂ ವಿಟಮಿನ್ ಸಿ ಹೆಚ್ಚು ಇರುತ್ತದೆ. ಇದು ಜೀವಕೋಶಗಳನ್ನು ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತವೆ. ಅವು ಬೀಟಾ-ಕ್ರಿಪ್ಟೋಕ್ಸಾಂಥಿನ್ (beta-cryptoxanthin) ಸೇರಿದಂತೆ ಕ್ಯಾರೊಟಿನಾಯ್ಡ್ (carotenoids) ಅಧಿಕವಾಗಿವೆ.
ಕಿಡ್ನಿಯಲ್ಲಿ ಕಲ್ಲುಗಳು ಆಗದಂತೆ ತಡೆಯುತ್ತೆ
ಆರೋಗ್ಯಕರ ಆಹಾರದ ಭಾಗವಾಗಿ ಸಿಟ್ರಸ್ ಹಣ್ಣುಗಳನ್ನು ಸೇವಿಸುವುದರಿಂದ ಹೃದಯದ ರಕ್ತನಾಳದ ಕಾಯಿಲೆಯ ಅಪಾಯ ಕಡಿಮೆ ಮಾಡಬಹುದು. ಮೂತ್ರಪಿಂಡದಲ್ಲಿ ಕಲ್ಲುಗಳು ಆಗದಂತೆ ಮೂಸಂಬಿ ತಡೆಗಟ್ಟುತ್ತದೆ.
ರಕ್ತವನ್ನ ತೆಳು ಮಾಡುತ್ತದೆ ಕಿತ್ತಳೆ ಜೂಸ್
4 ವಾರಗಳವರೆಗೆ ನಿತ್ಯ ಒಂದು ಗ್ಲಾಸ್ ಕಿತ್ತಳೆ ಜೂಸ್ ಕುಡಿಯುವುದರಿಂದ ರಕ್ತವನ್ನ ತೆಳು ಮಾಡುತ್ತದೆ. ಇದರಿಂದ ರಕ್ತದೊತ್ತಡ ಕಡಿಮೆ ಆಗುತ್ತದೆ ಎಂದು ವರದಿಯೊಂದು ಹೇಳುತ್ತದೆ. ಉರಿಯೂತ ಕಡಿಮೆ ಮಾಡುವ ಮೂಲಕ ಕಾಯಿಲೆಯಿಂದ ಹೃದಯರಕ್ತನಾಳಗಳನ್ನ ರಕ್ಷಣೆ ಮಾಡುತ್ತದೆ. ರಕ್ತನಾಳಗಳ ಆರೋಗ್ಯ ಕೂಡ ಸುಧಾರಿಸುತ್ತದೆ.
ಮೂಸಂಬಿ ಹಣ್ಣಿನಲ್ಲಿ ಶೇ.87ರಷ್ಟು ನೀರಿನ ಅಂಶ ಇರುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ನೀರು ಕಡಿಮೆ ಕುಡಿಯುತ್ತೇವೆ. ಇಂತಹ ವೇಳೆ ಕಿತ್ತಳೆ ಹಣ್ಣು ಸೇವನೆಯಿಂದ ದೇಹದ ನೀರಿನ ಅಂಶದ ಸಮತೋಲನ ಕಾಪಾಡಬಹುದು. ಯಕೃತ್ (ಲೀವರ್) ಸಮಸ್ಯೆ ಇದ್ದವರಿಗೂ ಕಿತ್ತಳೆ ಹಣ್ಣು ಉತ್ತಮವಾದ ಫಲ ಎಂದು ಹೇಳಬಹುದು.
ತ್ವಚೆಯ ಕೋಶಗಳನ್ನು ಹಾನಿಯಾಗದಂತೆ ಈ ಹಣ್ಣು ರಕ್ಷಿಸುತ್ತದೆ. ಕಿತ್ತಳೆಯ ಅತ್ಯಮೂಲ್ಯ ಆರೋಗ್ಯ ಪ್ರಯೋಜನಗಳಲ್ಲಿ ತ್ವಚೆ ಕಾಪಾಡುವುದು ಒಂದಾಗಿದೆ. ನೀವು ಚಳಿಗಾಲದಲ್ಲಿ ಮರೆಯದೆ ಈ ಹಣ್ಣನ್ನು ಸೇವನೆ ಮಾಡಿದರೆ ಉತ್ತಮ.
ಇದನ್ನೂ ಓದಿ:50 MLAಗಳಿಗೆ ತಲಾ ₹50 ಕೋಟಿ ಆಫರ್.. ರಾಜಕೀಯದಲ್ಲಿ ಸಂಚಲನ ಮೂಡಿಸಿದ ಸಿದ್ದರಾಮಯ್ಯ ಹೇಳಿಕೆ
ಹೃದಯಾಘಾತದ ಅಪಾಯ ಕಡಿಮೆ ಮಾಡುತ್ತೆ
ಕಿತ್ತಳೆ ಹಣ್ಣಿನಲ್ಲಿನ ವಿಟಮಿನ್ ಎ, ಸಿ ಮತ್ತು ಪೊಟ್ಯಾಷಿಯಂನಂಥ ಪೋಷಕಾಂಶಗಳು ಕಣ್ಣಿನ ಆರೋಗ್ಯ ಹೆಚ್ಚಿಸುತ್ತವೆ. ಕಿತ್ತಳೆ ಹಣ್ಣಿನಲ್ಲಿನ ಫೈಬರ್ ಹೊಟ್ಟೆಯ ಹಸಿವನ್ನು ನೀಗಿಸುತ್ತದೆ. ಕಡಿಮೆ ಆಹಾರ ಸೇವಿಸುವಂತೆ ಮಾಡುವುದರಿಂದ ದೇಹದ ತೂಕ ಅಧಿಕಗೊಳ್ಳದಂತೆ ನೋಡಿಕೊಳ್ಳುತ್ತದೆ.
ಮೂಸಂಬಿ ಹಣ್ಣಿನಲ್ಲಿನ ವಿಟಮಿನ್ ಸಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ನಮ್ಮನ್ನು ರಕ್ಷಣೆ ನೀಡುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ