Advertisment

ಅತಿಯಾದ ಲೈಂಗಿಕ ಕ್ರಿಯೆಯಿಂದ ಎದುರಾಗೋ ಸಮಸ್ಯೆಗಳೇನು? ನೀವು ಓದಲೇಬೇಕಾದ ಸ್ಟೋರಿ!

author-image
Ganesh Nachikethu
Updated On
ಅತಿಯಾದ ಲೈಂಗಿಕ ಕ್ರಿಯೆಯಿಂದ ಎದುರಾಗೋ ಸಮಸ್ಯೆಗಳೇನು? ನೀವು ಓದಲೇಬೇಕಾದ ಸ್ಟೋರಿ!
Advertisment
  • ಅತಿಯಾದರೆ ಅಮೃತವು ವಿಷ ಅನ್ನೋ ಮಾತೊಂದು ಇದೆ..!
  • ಇದು ಜನಸಾಮಾನ್ಯರ ಲೈಂಗಿಕ ಜೀವನಕ್ಕೂ ಅನ್ವಯಿಸುತ್ತದೆ
  • ಅತಿಯಾದ ಸಂಭೋಗದಿಂದ ಲಾಭವಿದ್ರೂ ಅಷ್ಟೇ ಅಪಾಯ

ಅತಿಯಾದರೆ ಅಮೃತವು ವಿಷ ಅನ್ನೋ ಮಾತೊಂದು ಇದೆ. ಇದು ಎಲ್ಲದಕ್ಕೂ ಅನ್ವಯಿಸುತ್ತದೆ. ಮನುಷ್ಯನಲ್ಲಿ ಕಾಮಾಸಕ್ತಿ ನಿರಂತರವಾಗಿ ಇರಲಿದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಅದರಲ್ಲೂ ಲೈಂಗಿಕತೆಯ ತುಡಿತ ಸ್ವಲ್ಪ ಹೆಚ್ಚು ಇರುವುದು ಮನುಷ್ಯನ ಸಾಮಾನ್ಯ ಗುಣ. ನಿತ್ಯ ನಡೆಸೋ ಸಂಭೋಗದಿಂದ ಆರೋಗ್ಯಕ್ಕೆ ಲಾಭ ಇದ್ರೂ ಅಷ್ಟೇ ಅಪಾಯ ಕೂಡ ಇದೆ ಅನ್ನೋದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.

Advertisment

ಈ ಬಗ್ಗೆ ಆರೋಗ್ಯ ತಜ್ಞರು ಹೇಳುವುದೇನು..?

ಬೆಂಗಳೂರಿ ರೀತಿಯ ಮಹಾ ನಗರಗಳಲ್ಲಿ ಕೆಲಸದಲ್ಲಿ ಬ್ಯುಸಿಯಾಗಿರೋ ಜನ ಒತ್ತಡದ ನಿವಾರಣೆಗಾಗಿ ಸೆಕ್ಸ್​​ನಲ್ಲಿ ಭಾಗಿಯಾಗೋದು ಸಹಜ. ಕೆಲವರಿಗೆ ಲೈಂಗಿಕತೆ ಎಂಬುದು ರತಿಕ್ರೀಡೆ. ಹೀಗಾಗಿ ಒಂದೇ ದಿನ ಹಲವು ಸಲ ವಿವಿಧ ಭಂಗಿಗಳಲ್ಲಿ ಸಂಪರ್ಕಕ್ಕಾಗಿ ಹಾತೊರೆಯುತ್ತಾರೆ. ಇದು ಕೆಟ್ಟ ಅಭ್ಯಾಸ ಆಗಿದ್ದು, ಆರೋಗ್ಯದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.

ಅತಿಯಾಗಿ ಲೈಂಗಿಕತೆ ನಡೆಸುವುದರಿಂದ ಜೀವನದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಸೆಕ್ಸ್​ನಲ್ಲಿ ಹೆಚ್ಚು ತೊಡಗಿಸಿಕೊಂಡಷ್ಟು ದೇಹದ ಕ್ಯಾಲೊರಿಗಳು ಕಡಿಮೆಯಾಗುತ್ತಲೇ ಹೋಗುತ್ತವೆ. ಇದು ಮಿತಿಮೀರದೆ ನಡೆದರೆ ಆರೋಗ್ಯಕ್ಕೆ ಉತ್ತಮ. ಅಧಿಕ ಸಮಯ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ದೇಹವೂ ನೊರ್ಪೈನ್ಫ್ರಿನ್, ಎಪಿನ್ಫ್ರಿನ್ (ಅಡ್ರಿನಾಲಿನ್) ಮತ್ತು ಕಾರ್ಟಿಸೋಲ್ ರಿಲೀಸ್​ ಮಾಡುತ್ತದೆ. ಇದರಿಂದ ಹೃದಯಬಡಿತ ಹೆಚ್ಚಾಗುತ್ತದೆ. ಜತೆಗೆ ರಕ್ತದೊತ್ತಡ ಸಹ ಜಾಸ್ತಿಯಾಗುತ್ತದೆ. ದೇಹವು ಆಯಾಸದಿಂದ ಕೂಡಿರುತ್ತದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ:ಬಾಡಿ ಸ್ಮೆಲ್​​, ಲೈಂಗಿಕ ಅತೃಪ್ತಿ; ಸಂಬಂಧ ಮುರಿದು ಬೀಳಲು ನೈಜ ಕಾರಣಗಳೇನು? ನೀವು ಓದಲೇಬೇಕು!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment