/newsfirstlive-kannada/media/post_attachments/wp-content/uploads/2024/12/BLY-DINESH-GUNDURAO-1.jpg)
ಒಂದಲ್ಲ, ಎರಡಲ್ಲ, ಒಟ್ಟು ಐವರು ಬಾಣಂತಿಯರ ಸಾವು! ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವು ದಿನದಿಂದ ದಿನಕ್ಕೆ ಒಂದೊಂದು ತಿರುವು ಪಡೆದುಕೊಳ್ಳುತ್ತಿದ್ರೆ, ಮತ್ತೊಂದೆಡೆ ರಾಜಕೀಯ ತಿಕ್ಕಾಟಕ್ಕೂ ಕಾರಣವಾಗಿದೆ. ಸರ್ಕಾರ ಈ ಸಾವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಅನ್ನೋ ಆರೋಪವೂ ಕೇಳಿ ಬರುತ್ತಿದೆ.
‘ಕೈ’ ವಿರುದ್ಧ ಕಿಚ್ಚು ಹಚ್ಚಿದ ಬಾಣಂತಿಯರ ಸಾವು
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಾದ ಬಾಣಂತಿಯರ ಸರಣಿ ಸಾವಿನಿಂದಾಗಿ ರಾಜ್ಯದಲ್ಲಿ ಎಲ್ಲಿಲ್ಲದ ಚರ್ಚೆ ಶುರುವಾಗಿದೆ.. ಬಾಣಂತಿರ ಸಾವಿಗೆ ಕಾರಣವಾದ್ರೂ ಏನು.. ವೈದ್ಯರು ನಿರ್ಲಕ್ಷ್ಯ ವಹಿಸಿದ್ರಾ ಅಥವಾ ಸೂಕ್ತ ಸೌಲಭ್ಯಗಳಿಲ್ಲದೆ ದುರಂತ ಸಂಭವಿಸ್ತಾ ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕ್ತಿದೆ.. ಇದೆಲ್ಲದರ ಮಧ್ಯೆ ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವರು ಭೇಟಿ ನೀಡಿ ಪರಿಶೀಲನೆ ಕೂಡ ಮಾಡಿದ್ದಾರೆ.
ಇದನ್ನೂ ಓದಿ:ಮಕ್ಕಳ ಎದುರೇ ಗೃಹಿಣಿಯ ಜೀವ ತೆಗೆದ ಪ್ರಿಯಕರ.. ಕೆರೆಗೆ ಎಸೆದು ಕಾಡಿನೊಳಗೆ ಎಸ್ಕೇಪ್; ಆಮೇಲೇನಾಯ್ತು?
ಬಳ್ಳಾರಿ ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ
ಬಾಣಂತಿಯರ ಸಾವಿನ ಬಗ್ಗೆ ಆರೋಪ-ಪ್ರತ್ಯಾರೋಪಗಳ ಮಧ್ಯೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜಿಲ್ಲಾಸ್ಪತ್ರೆಗೆ ಖುದ್ದು ಭೇಟಿ ನೀಡಿದ್ರು.. ಇದೇ ವೇಳೆ ಮಾತನಾಡಿದ ಗುಂಡೂರಾವ್, ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.. ಘಟನೆ ಕುರಿತು ಉನ್ನತ ತಜ್ಞರ ಸಮಿತಿ ರಚಿಸಿ ತನಿಖೆ ನಡೆಸ್ತೇವೆ ಅಂತ ಭರವಸೆ ಕೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/12/BLY-RAMULU-DHARANI.jpg)
ಸರ್ಕಾರದ ವಿರುದ್ಧ ಶ್ರೀರಾಮುಲು ಉಪವಾಸ ಸತ್ಯಾಗ್ರಹ
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವನ್ನು ಖಂಡಿಸಿ ಸರ್ಕಾರದ ವಿರುದ್ಧ ಮಾಜಿ ಸಚಿವ ಶ್ರೀರಾಮುಲು ಉಪವಾಸ ಸತ್ಯಾಗ್ರಹ ನಡೆಸಿದರು. ಜಿಲ್ಲಾಸ್ಪತ್ರೆ ಮುಂಭಾಗದಲ್ಲೇ ಧರಣಿ ಕುಳಿತ ರಾಮುಲು, ಸರ್ಕಾರದಿಂದ ಬಹುದೊಡ್ಡ ಲೋಪವಾಗಿದೆ. ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದರೆ ಸಮಸ್ಯೆ ಪರಿಹಾರ ಆಗಲ್ಲ ಅಂತ ಕಿಡಿಕಾರಿದರು. ಇನ್ನು ಪ್ರತಿಭಟನಾ ಸ್ಥಳಕ್ಕೆ ಬಂದ ದಿನೇಶ್ ಗುಂಡೂರಾವ್, ಬಾಣಂತಿಯರ ಸಾವಿನ ಗಂಭೀರ ತನಿಖೆ ಆಗುತ್ತೆ. ನೀವು ಪ್ರತಿಭಟನೆ ಹಿಂಪಡೆಯಬೇಕು ಅಂತ ಮನವಿ ಮಾಡಿದ್ರು.
ಮೃತ ಬಾಣಂತಿಯರ ನಿವಾಸಕ್ಕೆ ಗುಂಡೂರಾವ್ ಭೇಟಿ, ಸಾಂತ್ವನ
ಐವರು ಬಾಣಂತಿಯರ ಸರಣಿ ಸಾವಿನ ಬಳಿಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮೃತ ಬಾಣಂತಿಯರಾದ ನಂದಿನಿ, ಲಲಿತಾ ಕುಟುಂಬಸ್ಥರನ್ನು ಭೇಟಿ ಮಾಡಿದರು. ಸಚಿವರೆದುರು ಕುಟುಂಬ ಕಣ್ಣಿರು ಹಾಕಿದ್ರೆ, ಧೈರ್ಯವಾಗಿರಿ. ನಾವು ನಿಮ್ಮ ಜೊತೆ ಇದ್ದೇವೆ ಅಂತ ಕುಟುಂಬಸ್ಥರಿಗೆ ಗುಂಡೂರಾವ್ ಸಾಂತ್ವನ ಹೇಳಿದ್ದಾರೆ.
ಅದೇನೆ ಇರಲಿ, ತಾಯಿಯಿಲ್ಲದೆ ತಬ್ಬಲಿಯಾಗಿರುವ ಮಗು, ಪತ್ನಿಯನ್ನು ಕಳೆದುಕೊಂಡು ಕಂಗಾಲಾಗಿರುವ ಪತಿ. ಮಗಳನ್ನು ಕಳೆದುಕೊಂಡ ಹೆತ್ತವರ ಕಣ್ಣೀರು ಯಾರಿಂದಲೂ ಕೂಡ ನೋಡಲು ಸಾಧ್ಯವಿಲ್ಲ ಇನ್ನಾದರೂ ಈ ಸಾವಿನ ಸರಣಿಗೆ ಬ್ರೇಕ್ ಬೀಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us