Advertisment

ಭಾರತದಲ್ಲಿ 3 HMPV ಪ್ರಕರಣಗಳು ಪತ್ತೆ; ಯಾರಿಗೆಲ್ಲಾ ಅಪಾಯ? ಏನು ಮಾಡಬೇಕು? ಏನು ಮಾಡಬಾರದು?

author-image
Gopal Kulkarni
Updated On
ಭಾರತದಲ್ಲಿ 3 HMPV ಪ್ರಕರಣಗಳು ಪತ್ತೆ; ಯಾರಿಗೆಲ್ಲಾ ಅಪಾಯ? ಏನು ಮಾಡಬೇಕು? ಏನು ಮಾಡಬಾರದು?
Advertisment
  • ದೇಶದಲ್ಲಿ ಆತಂಕ ಸೃಷ್ಟಿಸಿದ ಚೀನಾದ ವೈರಸ್ ಹೆಚ್​ಎಂಪಿವಿ
  • ಕರ್ನಾಟಕ 2, ಗುಜರಾತ್​ನಲ್ಲಿ 1 ಹೆಚ್​ಎಂಪಿವಿ ಪ್ರಕರಣ ಪತ್ತೆ
  • ಕೇಂದ್ರ ಆರೋಗ್ಯ ಇಲಾಖೆಯಿಂದ ಗೈಡ್​ಲೈನ್ಸ್ ಬಿಡುಗಡೆ

ಸದ್ಯ ಚೀನಾದಲ್ಲಿ ವ್ಯಾಪಕವಾಗಿ ಹರಡಿಕೊಂಡಿರುವ ಹೆಚ್​ಎಂಪಿವಿ ವೈರಸ್​, ಭಾರತದಲ್ಲಿಯೂ ಕೂಡ ಆತಂಕ ಸೃಷ್ಟಿಸುತ್ತಿದೆ. ವೈರಸ್ ಬಗ್ಗೆ ಯಾವುದೇ ಆತಂಕ ಬೇಡ. ಭಾರತದಲ್ಲಿ ಆ ರೀತಿಯ ಯಾವ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿಕೆ ನೀಡಿದ ಎರಡೇ ಎರಡು ದಿನದಲ್ಲಿ ಈಗ ಭಾರತದಲ್ಲಿ ಒಟ್ಟು ಮೂರು ಪ್ರಕರಣಗಳು ದಾಖಲಾಗಿ ಆತಂಕ ಸೃಷ್ಟಿ ಮಾಡಿದೆ.

Advertisment

ಕರ್ನಾಟಕದಲ್ಲಿ ಒಟ್ಟು 2 ಹೆಚ್​ಎಂಪಿವಿ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು. ಗುಜರಾತ್​ನಲ್ಲೂ ಕೂಡ ಒಂದು ಹೊಸ ಕೇಸ್ ಪತ್ತೆಯಾಗಿದೆ. ಅಹ್ಮದಾಬಾದ್​ನಲ್ಲಿ ಎರಡು ತಿಂಗಳ ಮಗುವಿನಲ್ಲಿ ಹೆಚ್​ಎಂಪಿವಿ ವೈರಸ್ ಇರುವುದು ದೃಢಪಟ್ಟಿದೆ. ಕರ್ನಾಟಕದಲ್ಲಿ ಎರಡು ಹಾಗೂ ಗುಜರಾತ್​ನಲ್ಲಿ 1 ಹೆಚ್​ಎಂಪಿವಿ ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲಿ ಒಟ್ಟಾರೆ ಮೂರು ಮಕ್ಕಳಲ್ಲಿ ಈ ವೈರಸ್ ಪತ್ತೆಯಾದಂತಾಗಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ಒಂದೇ ಕುಟುಂಬದ ನಾಲ್ವರ ದುರಂತ.. ಕಾರಣವೇನು?

ಇನ್ನು ಮೂರು ಪ್ರಕರಣಗಳು ದಾಖಲಾಗಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಎಂಆರ್​. ಹೆಚ್​ಎಂಪಿವಿ ಈಗಾಗಲೇ ಭಾರತ ಸೇರಿದಂತೆ ಜಾಗತಿಕವಾಗಿ ಹರಡುತ್ತಿದೆ. ಹೆಚ್​ಎಂಪಿವಿ ಜೊತೆ ವಿಶ್ವದಲ್ಲಿ ಉಸಿರಾಟ ಸಮಸ್ಯೆಗಳ ಕೇಸ್ ಹೆಚ್ಚಾಗುತ್ತಿವೆ. ಈಗಾಗಲೇ ಬೇರೆ ಬೇರೆ ದೇಶಗಳಲ್ಲೂ ವೈರಸ್ ಪತ್ತೆಯಾಗಿದೆ. ಆದ್ರೆ ಭಾರತದಲ್ಲಿ ಉಸಿರಾಟದ ಸಮಸ್ಯೆಗಳು ಅಷ್ಟೊಂದು ಏರಿಕೆ ಕಂಡು ಬಂದಿಲ್ಲ. ಈ ವೈರಸ್ ಬಗ್ಗೆ ಹೆಚ್ಚು ಆತಂಕ ಪಡುವುದು ಬೇಡ, ಜಾಗೃತರಾಗಿರುವಂತೆ ಹೇಳಿದೆ. ಇನ್ನು ಹೆಚ್​ಎಂಪಿವಿ ವೈರಸ್ ವಿಚಾರವಾಗಿ ಆರೋಗ್ಯ ಇಲಾಖೆ ಕೆಲವೊಂದಿಷ್ಟು ಮಾರ್ಗಸೂಚಿಗಳನ್ನು ಹೊರಡಿಸಿದ್ದು. ಏನು ಮಾಡಬೇಕು. ಏನು ಮಾಡಬಾರದು ಎಂದು ಸ್ಪಷ್ಟವಾಗಿ ಹೇಳಿದೆ

ಏನು ಮಾಡಬೇಕು?
ಕೆಮ್ಮುವಾಗ, ಸೀನುವಾಗ ಕರ್ಚೀಫ್/ಟಿಶ್ಯೂ ಪೇಪರ್ ಬಳಸಬೇಕು
ಆಗಾಗ ಸೋಪು, ನೀರು, ಸ್ಯಾನಿಟೈಸರ್​ನಿಂದ ಕೈಗಳನ್ನ ತೊಳೆಯಿರಿ
ಹೆಚ್ಚು ಜನ ದಟ್ಟಣೆ ಇರುವ ಪ್ರದೇಶಗಳಲ್ಲಿ ಓಡಾಟ ಕಡಿಮೆ ಮಾಡಿ
ಜ್ವರ, ಕೆಮ್ಮು, ಶೀತವಿದ್ದಲ್ಲಿ ಸಾರ್ವಜನಿಕ ಸ್ಥಳಗಳಿಗೆ ಹೋಗಬೇಡಿ
ಸೋಂಕು ಹರಡುವಿಕೆ ತಡೆಯಲು ಗಾಳಿ ಇರುವ ಪ್ರದೇಶಗಳಲ್ಲಿರಿ
ಅನಾರೋಗ್ಯವಿದ್ದಲ್ಲಿ ಮನೆಯಲ್ಲೇ ಇರಿ, ಇತರರ ಜೊತೆ ಸಂಪರ್ಕ ಬೇಡ
ಪೌಷ್ಠಿಕ ಆಹಾರವನ್ನ ಸೇವಿಸಿ, ಯಥೇಚ್ಛವಾಗಿ ನೀರು ಕುಡಿಯಿರಿ

Advertisment

ಏನು ಮಾಡಬಾರದು?
ಅದೇ ಕರ್ಚೀಫ್ ಹಾಗೂ ಟಿಶ್ಯೂ ಪೇಪರ್​ನ ಮರುಬಳಕೆ ಬೇಡ
ಅನಾರೋಗ್ಯ ಪೀಡಿತರ ಜೊತೆ ಸಂಪರ್ಕದಲ್ಲಿರುವುದು ಬೇಡ
ಅವರು ಬಳಸಿದ ಟವೆಲ್, ಬಟ್ಟೆಗಳನ್ನ ಬಳಸಬಾರದು
ಪದೇ ಪದೆ ಕಣ್ಣು, ಮೂಗು, ಬಾಯಿಯನ್ನ ಮುಟ್ಟಿಕೊಳ್ಳಬಾರದು
ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು
ವೈದ್ಯರನ್ನ ಸಂಪರ್ಕಿಸದೇ ಸ್ವಯಂ ಔಷಧಿ ತೆಗೆದುಕೊಳ್ಳಬೇಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment