/newsfirstlive-kannada/media/post_attachments/wp-content/uploads/2024/11/FAST-2.jpg)
ಭಾರತದಲ್ಲಿ ಶತಮಾನಗಳಿಂದ ಆಯುರ್ವೇದ ಮೂಲಕ ರೋಗಗಳಿಗೆ ಚಿಕಿತ್ಸೆ ನೀಡುವ ವಿಧಾನ ಇದೆ. ಆಯುರ್ವೇದದಲ್ಲಿ ಔಷಧಿಯಾಗಿ ಕೆಲಸ ಮಾಡುವ ಹಲವಾರು ಗಿಡಮೂಲಿಕೆಗಳಿವೆ. ಅಲ್ಲದೇ ಉಪವಾಸದ ಮೂಲಕವೂ ಕೆಲವು ರೋಗಗಳನ್ನು ನಿಯಂತ್ರಿಸಬಹುದು ಎಂದು ಆಯರ್ವೇದ ಹೇಳುತ್ತದೆ.
ಆಯುರ್ವೇದದಲ್ಲಿ ರೋಗಗಳ ದೊಡ್ಡ ಕಾರಣವೆಂದರೆ ದೇಹದಲ್ಲಿರುವ ತ್ರಿದೋಷ. ಅಂದರೆ ವಾತ, ಪಿತ್ತ ಮತ್ತು ಕಫ. ಅಂತೆಯೇ ರೋಗದ ಕಾರಣಗಳ ಮೇಲೆ ಆಯುರ್ವೇದ ಕಾರ್ಯನಿರ್ವಹಿಸುತ್ತದೆ. ಆಯುರ್ವೇದವು ವ್ಯಕ್ತಿಯ ದೇಹ, ಮನಸ್ಸು ಮತ್ತು ಆತ್ಮವನ್ನು ಕೇಂದ್ರೀಕರಿಸಿ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ:ಆಹಾರ ಪ್ರಿಯರೇ ಮರೆಯದಿರಿ.. ನ್ಯೂಸ್ ಫಸ್ಟ್ ‘ಆರೋಗ್ಯ ಹಬ್ಬ’ಕ್ಕೆ ಬಂದ್ರೆ ನಿಮಗೆ 10 ಲಾಭ!
ಆಯುರ್ವೇದದ ಪ್ರಕಾರ.. ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಉಸಿರಾಟದ ತೊಂದರೆ, ಜ್ವರ, ಶೀತ ಸೇರಿದಂತೆ ಹಲವು ಕಾಯಿಲೆಗಳನ್ನು ಉಪವಾಸದಿಂದ ಗುಣಪಡಿಸಬಹುದು. ಚಯಾಪಚಯ ರೋಗಗಳನ್ನು (metabolic disease) ಗುಣಪಡಿಸಲು ಉಪವಾಸವನ್ನು ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗುತ್ತದೆ. ಉಪವಾಸದಿಂದ ದೇಹದ ಕಫವನ್ನು ನಿಯಂತ್ರಣದಲ್ಲಿ ಇಡಬಹುದು. ಕಫ ದೇಹದಲ್ಲಿ ರೋಗಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಉಪವಾಸದಿಂದ ರೋಗಗಳು ಕಡಿಮೆಯಾಗುತ್ತವೆ. ಜೀರ್ಣಕ್ರಿಯೆ ವ್ಯವಸ್ಥೆ ಕೂಡ ಸರಿ ಹೋಗುತ್ತದೆ. ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಬಹುದು. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಮೆದುಳಿನ ಕಾರ್ಯವು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ.
ಆಯುರ್ವೇದದಲ್ಲಿ ಉಪವಾಸ
ಆಯುರ್ವೇದದಲ್ಲಿ ಹಲವಾರು ರೀತಿಯ ಉಪವಾಸಗಳನ್ನು ಉಲ್ಲೇಖಿಸಲಾಗಿದೆ. ಅದರಲ್ಲಿ ಮೊದಲನೇಯದು ಇಡೀ ದಿನ ಉಪವಾಸ ಮಾಡುವುದು. ಈ ಅವಧಿಯಲ್ಲಿ ನೀರನ್ನು ಮಾತ್ರ ಕುಡಿಯುತ್ತಾರೆ ಮತ್ತು ದಿನವಿಡೀ ಉಪವಾಸ ಮಾಡುತ್ತಾರೆ. ಇನ್ನೊಂದು ವಿಧಾನವೆಂದರೆ ದಿನವಿಡೀ ಹಣ್ಣು ಮತ್ತು ತರಕಾರಿಗಳ ರಸ ಕುಡಿಯುವುದು ಮತ್ತು ತಿನ್ನುವುದು. ಆ ಮೂಲಕ ದೇಹಕ್ಕೆ ವಿಶ್ರಾಂತಿ ನೀಡುವುದು.
ಮೂರನೇಯ ಮಾರ್ಗವೆಂದರೆ ಮಧ್ಯಂತರ ಉಪವಾಸ. ಇದರಲ್ಲಿ ಅನುಕೂಲಕ್ಕೆ ತಕ್ಕಂತೆ ಸಮಯವನ್ನು ನಿರ್ಧರಿಸಬಹುದು. ದಿನಕ್ಕೆ 8 ಗಂಟೆಗಳ ಕಾಲ ಮಾತ್ರ ಆಹಾರ ಸೇವಿಸುವುದು. ಉಳಿದ ಸಮಯದಲ್ಲಿ ನೀರು ಮಾತ್ರ ಕುಡಿಯುವುದು. ಈ ರೀತಿಯ ಉಪವಾಸವು ದೇಹವನ್ನು ಆರೋಗ್ಯಕರವಾಗಿಡುವಲ್ಲಿ ಪರಿಣಾಮಕಾರಿಯಾಗಿದೆ ಎನ್ನಲಾಗುತ್ತದೆ. ಆದರೆ ಉಪವಾಸ ಎಲ್ಲರಿಗೂ ಆಗಿಬರಲ್ಲ. ಅದೇ ಕಾರಣಕ್ಕೆ ಆಯುರ್ವೇದ ತಜ್ಞರ ಸೂಕ್ತ ಸಲಹೆ ಪಡೆದು ಉಪವಾಸ ಮಾಡಬಹುದು.
ಇದನ್ನೂ ಓದಿ:ಹಸಿ ಹಾಲು ಕುಡಿಯೋದು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ? ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ