/newsfirstlive-kannada/media/post_attachments/wp-content/uploads/2023/12/CORONA-1.jpg)
ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಅನ್ನೋ ಮಾತಿದೆ.. 2020ರಲ್ಲಿ ದೇಶಕ್ಕೆ ಅಪ್ಪಳಿಸಿದ್ದ ಕೊರೊನಾ ಅನ್ನೋ ಹೆಮ್ಮಾರಿಯೂ ಹಾಗೆ.. ಮತ್ತೆ ಆರೋಗ್ಯ, ನೆಮ್ಮದಿ ಎರಡೂ ಹಾಳು ಮಾಡೋ ಸೂಚನೆ ಕೊಟ್ಟಿದೆ.. ಸಿಂಗಾಪುರ್ ಸೇರಿ ಹಲವೆಡೆ ಏರ್ತಿರೋ ಸೋಂಕಿತ ಸಂಖ್ಯೆ ಆತಂಕ ಮೂಡಿಸಿದೆ.
ಏಷ್ಯಾ ಖಂಡದಲ್ಲಿ ಮತ್ತೆ ಕೋವಿಡ್ ಆತಂಕ
ಜಗತ್ತನ್ನೇ ಅಲುಗಾಡಿಸಿದ್ದ ಕೋವಿಡ್ -19 ಮತ್ತೊಮ್ಮೆ ಏಷ್ಯಾ ಖಂಡದಲ್ಲಿ ಅಬ್ಬರಿಸೋ ಸೂಚನೆ ಕೊಟ್ಟಿದೆ. ಪ್ರಮುಖವಾಗಿ ಹಾಂಗ್ ಕಾಂಗ್, ಸಿಂಗಾಪುರ್ ಅಂತಹ ದೇಶಗಳಲ್ಲಿ ವೇಗವಾಗಿ ಹರಡ್ತಿರೋ ವೈರಸ್ ಸೋಂಕಿತ ಸಂಖ್ಯೆ ಹೆಚ್ಚಿಸ್ತಿದೆ.. ಅಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳು ಇದು ಹೊಸ ಅಲೆ ಅಂತ ದೃಢಪಡಿಸಿದ್ದಾರೆ.
ಸಿಂಗಾಪುರದಲ್ಲಿ ಕೋವಿಡ್ ಭೀತಿ
ಸಿಂಗಾಪುರದಲ್ಲಿ ಮೇ 3ರ ಟೈಮ್ನಲ್ಲಿ ಅಂದಾಜು ವಾರದ ಪ್ರಕರಣಗಳ ಸಂಖ್ಯೆ 28% ದಷ್ಟು ಏರಿಕೆಯಾಗಿ 14,200 ಸಕ್ರೀಯ ಪ್ರಕರಣಗಳು ಕಾಣಿಸಿಕೊಂಡಿವೆ ಅಂತ ಆರೋಗ್ಯ ಸಚಿವಾಲಯ ತಿಳಿಸಿದೆ. ಅದೇ ಸಮಯದಲ್ಲಿ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ 30% ದಷ್ಟು ಹೆಚ್ಚಾಗಿದೆ.. ಇನ್ನು ಜನರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾದ್ದರಿಂದ ಈ ಸೋಂಕಿತರ ಸಂಖ್ಯೆ ಹೆಚ್ಚಳವಾಗಿರಬಹುದು ಅಂತ ಹೇಳಲಾಗ್ತಿದ್ದು, ಏಷ್ಯಾದ ಅನೇಕ ಭಾಗಗಳಲ್ಲಿ ಇದೇ ರೀತಿಯ ಪ್ರಕರಣಗಳು ಕಂಡುಬರುತ್ತಿವೆ.
ಇದನ್ನೂ ಓದಿ: ಮಗಳ ಕೈಹಿಡಿದು ಮಂತ್ರಾಲಯಕ್ಕೆ ಬಂದ ಪವಿತ್ರ ಗೌಡ.. ಇನ್ಸ್ಟಾಗ್ರಾಮ್ನಲ್ಲಿ ಏನೆಂದು ಬರೆದುಕೊಂಡಿದ್ದಾರೆ..?
ಚೀನಾದಲ್ಲೂ ಕೋವಿಡ್ ಹೊಸ ಅಲೆಯ ಮುನ್ಸೂಚನೆ
ಇನ್ನೂ ಚೀನಾದಲ್ಲೂ ಕೋವಿಡ್ ಹೊಸ ಅಲೆ ಬರ್ತಿರೋ ಮುನ್ಸೂಚನೆ ಇದೆ.. ಮೇ 4 ರವರೆಗಿನ ಲೆಕ್ಕದ ಪ್ರಕಾರ ಐದು ವಾರಗಳಲ್ಲಿ ಚೀನಾದ ಆಸ್ಪತ್ರೆಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಮಾಣ ದ್ವಿಗುಣಗೊಂಡಿದೆ ಅಂತ ಚೀನೀ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಅಂಕಿ ಅಂಶಗಳು ತಿಳಿಸಿವೆ.
ಕೋವಿಡ್ನ ಈ ಹೊಸ ಅಲೆ ಸಾರ್ವಜನಿಕ ಕಾರ್ಯಕ್ರಮಗಳ ಮೇಲೂ ಪರಿಣಾಮ ಬೀರುತ್ತಿದೆ. ಹಾಂಗ್ ಕಾಂಗ್ ಮೂಲದ ಗಾಯಕ ಈಸನ್ ಚಾನ್ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟ ನಂತರ ಈ ವಾರ ತೈವಾನ್‌ನ ಕಾಹ್ಸಿಯುಂಗ್‌ನಲ್ಲಿ ನಡೆಯಬೇಕಿದ್ದ ಸಂಗೀತ ಕಚೇರಿ ಪ್ರೋಗ್ರಾಮ್ ಅನ್ನೂ ರದ್ದುಗೊಳಿಸಲಾಗಿದೆ.. ಒಟ್ಟಾರೆ ಸಿಂಗಾಪುರ್ ಸೇರಿದಂತೆ ಹಲವೆಡೆ ಕೊರೊನಾ ಹೊಸ ವೈರಸ್ ಪತ್ತೆಯಾಗಿದ್ದು, ಮತ್ತೊಮ್ಮೆ ಬದುಕನ್ನ ಬುಡಮೇಲು ಮಾಡುತ್ತಾ ಅನ್ನೋ ಭೀತಿ ಕಾಡೋಕೆ ಶುರುವಾಗಿದೆ.
ಇದನ್ನೂ ಓದಿ: ಕೆಕೆಆರ್ ವಿರುದ್ಧ ನಾಳೆ ಬಲಿಷ್ಠ ಟೀಂ ಕಣಕ್ಕೆ.. ಆರ್ಸಿಬಿ ತಂಡದಲ್ಲಿ ಯಾರೆಲ್ಲ ಇರ್ತಾರೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ