/newsfirstlive-kannada/media/media_files/2025/12/24/world-ayurveda-summit-at-palace-ground-2-2025-12-24-19-38-14.jpg)
ನಾಳೆಯಿಂದ 4 ದಿನ ಆಯುರ್ವೇದ ವರ್ಲ್ಡ್ ಸಮ್ಮಿಟ್ ಆಯೋಜನೆ
ಆಯುರ್ವೇದ.. ಇದು ಗೊತ್ತಿದ್ರೆ ಆರೋಗ್ಯ ಅಂಗೈನಲ್ಲಿ ಅನ್ನೋ ಮಾತಿದೆ.. ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರೆದ್ರೂ ಆಯುರ್ವೇದಕ್ಕೆ ಸರಿ ಸಾಟಿ ಯಾವುದು ಇಲ್ಲ ಬಿಡಿ.. ಈಗ ಈ ಮಾತು ಹೇಳೋಕೆ ಒಂದು ಕಾರಣ ಇದೆ.. ಅದೇ ನಾಳೆಯಿಂದ ಅರಮನೆ ಮೈದಾನದಲ್ಲಿ ನಡೆಯುತ್ತಿರೋ ಆಯುರ್ವೇದ ವರ್ಲ್ಡ್ ಸಮ್ಮಿಟ್.. ಏನಿದರ ವಿಶೇಷತೆ? ನೋಡೋಣ ಈ ರಿಪೋರ್ಟ್ ನಲ್ಲಿ..
ಆರೋಗ್ಯ.. ಆರೋಗ್ಯವೇ ಭಾಗ್ಯ.. ಇದು ನೂರಕ್ಕೆ ನೂರು ಸತ್ಯ.. ಈಗಿನ ಕಾಲದಲ್ಲಿ ಆರೋಗ್ಯ ಇದ್ದವನೇ ಶ್ರೀಮಂತ.. ಆದ್ರೆ ಟೆಕ್ನಾಲಜಿ ಎಷ್ಟೇ ಮುಂದುವರೆದ್ರೂ ಕೆಲವರಿಗೆ ಆರೋಗ್ಯದ ಮಹತ್ವ ಇನ್ನೂ ತಿಳಿದಿಲ್ಲ.. ಹಾಗಾಗಿಯೇ ಆರೋಗ್ಯದ ಮಹತ್ವ ತಿಳಿಸಲು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯುರ್ವೇದಿಕ್ ವರ್ಲ್ಡ್ ಸಮ್ಮಿಟ್ ಆಯೋಜನೆ ಮಾಡಲಾಗ್ತಿದೆ..
ಹೌದು.. ಕಜೆ ಆಯುರ್ವೇದಿಕ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ಸಹಯೋಗದೊಂದಿಗೆ ಈ ಸಮ್ಮಿಟ್ ಆಯೋಜನೆ ಮಾಡಲಾಗ್ತಿದೆ.. ಎಲ್ಲಿ ಅಂದ್ರ? ಅರಮನೆ ಮೈದಾನದ ಗೇಟ್ ನಂಬರ್ 6, ರಾಯಲ್ ಸೆನೇಟ್ ಅಂಡ್ ಗ್ರಾಂಡ್ ಕಾಸಲ್ ನಲ್ಲಿ.. ನಾಳೆಯಿಂದ ಡಿಸೆಂಬರ್ 28 ರವರೆಗೂ ಬೆಳಗ್ಗೆ 9 ರಿಂದ ರಾತ್ರಿ 9 ರವೆಗೂ ಆಯೋಜನೆ ಮಾಡಲಾಗ್ತಿದೆ..
ಈ ಕಾರ್ಯಕ್ರಮದಲ್ಲಿ ಆಹಾರ ಮೇಳ, ದೇಸಿ ಮೇಳ ಮಾತ್ರವಲ್ಲ ಸಾಂಸ್ಕೃತಿಕ ಹಬ್ಬ, ಧನ್ವಂತ್ರಿ ಯಜ್ಞ ಸೇರಿದಂತೆ ನಾಲ್ಕು ದಿನವೂ ವಿವಿಧ ಕಾರ್ಯಕ್ರಮಗಳಿಗೆ ಈ ಆಯುರ್ವೇದ ಸಮ್ಮಿಟ್ ಸಾಕ್ಷಿಯಲಿದೆ.. ದೇಶ ವಿದೇಶಗಳಿಂದ ವೈದ್ಯರು, ಆಯುರ್ವೇದದ ಎಕ್ಸ್ಪರ್ಟ್ಸ್, ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ.. ಜೊತೆಗೆ ನಾಳಿನ ಕಾರ್ಯಕ್ರಮದಲ್ಲಿ ನ್ಯೂಸ್ ಫಸ್ಟ್ ನ ಎಡಿಟರ್ ಇನ್ ಚೀಫ್ ಮಾರುತಿ ಎಸ್. ಹೆಚ್. ಅವರು ಭಾಗಿಯಾಗ್ತಿರೋದು ವಿಶೇಷ..
ಆಯುರ್ವೇದ ಅನುಭವ ಕೇಂದ್ರಗಳು, ಆಯುರ್ವೇದ ಆಹಾರ ಪ್ರದರ್ಶಿನಿ, ಆಯುರ್ವೇದ ಪಾಕೋತ್ಸವ, ಧನ್ವಂತರಿ ಮಹಾಯಜ್ಞ, ಆಯುರ್ವೇದ ಮೆಗಾ ಎಕ್ಸ್'ಪೋ, ಔಷಧೀಯ ಸಸ್ಯಗಳ ಉಚಿತ ವಿತರಣೆ, ಲೇಸರ್ ಶೋ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ಸಮ್ಮೇಳನದಲ್ಲಿ ಇರಲಿದೆ.
/filters:format(webp)/newsfirstlive-kannada/media/media_files/2025/12/24/world-ayurveda-summit-at-palace-ground-2025-12-24-19-40-39.jpg)
ಇನ್ನು, ಈ ಕಾರ್ಯಕ್ರಮದ ಉದ್ದೇಶ ಏನು ಅನ್ನೋದ್ರ ಬಗ್ಗೆ ಡಾ. ಗಿರಿಧರ್ ಕಜೆ ಅವರು ನ್ಯೂಸ್ ಫಸ್ಟ್ ಜೊತೆ ಮಾತನಾಡಿದ್ದಾರೆ. ಆಯುರ್ವೇದವನ್ನು ಜನರಿಗೆ ತಲುಪಿಸಿ, ಅದರ ಪ್ರಯೋಜನ ಜನರಿಗೆ ಸಿಗುವಂತೆ ಮಾಡುವ ಉದ್ದೇಶ ಹೊಂದಿದ್ದಾರೆ.
ಆಯುರ್ವೇದ ವೈದ್ಯರು ಹಾಗೂ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ, ಜನಸಾಮಾನ್ಯರಿಗೂ ಪ್ರಯೋಜನಕಾರಿಯಾಗುವಂತೆ ಸಮ್ಮೇಳನವನ್ನು ಆಯೋಜಿಸಲಾಗಿದೆ. ಹೀಗಾಗಿ ಎಲ್ಲರೂ ಅರಮನೆ ಮೈದಾನಕ್ಕೆ ಬನ್ನಿ, ಭಾಗಿಯಾಗಿ.
/filters:format(webp)/newsfirstlive-kannada/media/media_files/2025/12/24/world-ayurveda-summit-at-palace-ground-1-2025-12-24-19-40-54.jpg)
ಚಂದನಾ ಶೆಟ್ಟಿ, ನ್ಯೂಸ್ ಫಸ್ಟ್, ಬೆಂಗಳೂರು
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us