/newsfirstlive-kannada/media/media_files/2025/11/19/zoho-founder-sridhar-vembu-and-upasana-2025-11-19-18-10-34.jpg)
ಉಪಾಸನಾ ಮಾತಿಗೆ ಶ್ರೀಧರ್ ವೆಂಬು ವಿರೋಧ
ಯುವಜನತೆ ತಪ್ಪದೇ ಮದುವೆಯಾಗಬೇಕು. 20ರ ಅಸುಪಾಸಿನಲ್ಲಿದ್ದಾಗಲೇ ಮದುವೆಯಾಗಿ ಸಮಾಜ ಮತ್ತು ಪೂರ್ವಜರ ಜನಸಂಖ್ಯಾ ಕರ್ತವ್ಯವನ್ನು ಪೂರೈಸಬೇಕು ಎಂದು ಜೋಹೋ ಕಂಪನಿಯ ಸ್ಥಾಪಕ ಶ್ರೀಧರ್ ವೆಂಬು ಹೇಳಿದ್ದಾರೆ. ನನ್ನನ್ನು ಭೇಟಿಯಾಗುವ ಎಲ್ಲ ಯುವ ಉದ್ಯಮಿಗಳಿಗೂ ಮದುವೆಯಾಗಿ, 20ರ ಅಸುಪಾಸಿನಲ್ಲಿದ್ದಾಗಲೇ ಮಕ್ಕಳನ್ನು ಮಾಡಿಕೊಳ್ಳಿ ಎಂದು ಸಲಹೆ ನೀಡುತ್ತೇನೆ. ಮಕ್ಕಳನ್ನು ಪಡೆಯುವುದನ್ನು ಮುಂದೂಡಬೇಡಿ ಎಂದು ಸಲಹೆ ನೀಡುತ್ತೇನೆ ಎಂದು ಶ್ರೀಧರ್ ವೆಂಬು ಹೇಳಿದ್ದಾರೆ.
"ಸಮಾಜಕ್ಕೆ ಮತ್ತು ಅವರ ಪೂರ್ವಜರಿಗೆ ತಮ್ಮ ಜನಸಂಖ್ಯಾ ಕರ್ತವ್ಯವನ್ನು ಅವರು ಮಾಡಬೇಕು ಎಂದು ನಾನು ಅವರಿಗೆ ಹೇಳುತ್ತೇನೆ. ಈ ಕಲ್ಪನೆಗಳು ವಿಲಕ್ಷಣ ಅಥವಾ ಹಳೆಯದಾಗಿ ಧ್ವನಿಸಬಹುದು ಎಂದು ನನಗೆ ತಿಳಿದಿದೆ ಆದರೆ ಈ ವಿಚಾರಗಳು ಮತ್ತೆ ಪ್ರತಿಧ್ವನಿಸುತ್ತವೆ ಎಂದು ನನಗೆ ಖಚಿತವಾಗಿದೆ."
ಮಹಿಳಾ ಉದ್ಯಮಿ ಹಾಗೂ ನಟ ರಾಮಚರಣ್ ಪತ್ನಿ ಉಪಾಸನಾ ಕೊನಿಡೆಲಾ ಮಾತುಗಳಿಗೆ ಪ್ರತಿಯಾಗಿ ಶ್ರೀಧರ್ ವೆಂಬು ಈ ಮಾತುಗಳನ್ನು ಹೇಳಿದ್ದಾರೆ.
ಉಪಾಸನಾ ಕೊನಿಡೆಲಾ, ನಿಮ್ಮಲ್ಲಿ ಎಷ್ಟು ಮಂದಿ ಮದುವೆಯಾಗಲು ಬಯಸುತ್ತೀರಿ ಎಂದು ಕೇಳಿದಾಗ, ಯುವತಿಯರಿಗಿಂತ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕೈ ಎತ್ತಿದ್ದರು. ಮಹಿಳೆಯರು ಹೆಚ್ಚಾಗಿ ಕೆರಿಯರ್ ನತ್ತ ಗಮನ ಕೇಂದ್ರೀಕರಿಸಿದ್ದರು. ಇದು ಹೊಸ ಮತ್ತು ಪ್ರಗತಿದಾಯಕ ಭಾರತ ಎಂದು ಉಪಾಸನಾ ಕೊನಿಡೆಲಾ ಹೇಳಿದ್ದಾರೆ.
ಇಂಟರ್ ನೆಟ್, ಸೋಷಿಯಲ್ ಮೀಡಿಯಾದಲ್ಲಿ ಈಗ ಉಪಾಸನಾ ಕೊನಿಡೆಲಾ ಮಾತುಗಳು ಹಾಗೂ ಅದಕ್ಕೆ ವಿರುದ್ಧವಾಗಿ ಜೋಹೋ ಸಂಸ್ಥಾಪಕ ಶ್ರೀಧರ್ ವೆಂಬು ಅವರ ಮಾತುಗಳ ಬಗ್ಗೆ ಚರ್ಚೆಗಳು ಬಿರುಸಾಗಿ ನಡೆಯುತ್ತಿವೆ.
I advise young entrepreneurs I meet, both men and women, to marry and have kids in their 20s and not keep postponing it.
— Sridhar Vembu (@svembu) November 19, 2025
I tell them they have to do their demographic duty to society and their own ancestors. I know these notions may sound quaint or old-fashioned but I am sure… https://t.co/5GaEzkMcbQ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us