/newsfirstlive-kannada/media/media_files/2025/10/21/pigeons-causes-health-proublem-2025-10-21-13-45-03.jpg)
ಅನಾರೋಗ್ಯಕ್ಕೆ ತುತ್ತಾದ ವೈದ್ಯೆ ಕವಿತಾ ಹಾಗೂ ಪಾರಿವಾಳಗಳು
ಪಾರಿವಾಳಗಳಿಗೆ ರಸ್ತೆಯಲ್ಲಿ, ಮನೆಗಳಲ್ಲಿ , ಎಲ್ಲೆಂದರಲ್ಲಿ ಫೀಡಿಂಗ್ ಮಾಡುವುದನ್ನು ನಾವು ನೋಡಿದ್ದೇವೆ. ಆದರೇ ಪಾರಿವಾಳ ಸಾಕುವುದರಿಂದ ಮನುಷ್ಯರಿಗೆ ಉಸಿರಾಟದ ಸಮಸ್ಯೆ ಎದುರಾಗುತ್ತಿದೆ. ಇದು ಅಚ್ಚರಿಯಾದರೂ ಸತ್ಯ . ವೈಜ್ಞಾನಿಕವಾಗಿಯೂ ಇದು ಸಾಬೀತಾಗಿದೆ. ಪಾರಿವಾಳಗಳಿಂದ ಮನುಷ್ಯನ ಆರೋಗ್ಯಕ್ಕೆ ಹೊಡೆತ ಬೀಳುತ್ತಿದೆ. ಪಾರಿವಾಳಗಳಿಂದ ಮನುಷ್ಯರ ಆರೋಗ್ಯ ಹಾಳಾಗುತ್ತಿದೆ.
ನಮ್ಮ ರಾಜ್ಯ ರಾಜಧಾನಿ , ಸಿಲಿಕಾನ್ ಸಿಟಿಯಲ್ಲಿ ಪಾರಿವಾಳದಿಂದ ವೈದ್ಯೆಯೊಬ್ಬರಿಗೆ ಉಸಿರಾಟದ ಸಮಸ್ಯೆ ಎದುರಾಗಿದೆ. ಡಾಕ್ಟರ್ ಕವಿತಾ ಎಂಬುವವರು ಪಾರಿವಾಳಗಳಿಂದ ಎದುರಾದ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಕಳೆದ 2 ವರ್ಷದಿಂದ ಡಾಕ್ಟರ್ ಕವಿತಾ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಪಾರಿವಾಳ ಸಾಕುವುದರಿಂದ ಜನರು ಉಸಿರಾಟದ ಸಮಸ್ಯೆ, ಶ್ವಾಸಕೋಸದ ಸಮಸ್ಯೆ, ಚರ್ಮದ ಆಲರ್ಜಿ ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ.
ಪಾರಿವಾಳಗಳಿಂದ ಹೇಗೆ ಉಸಿರಾಟದ ಸಮಸ್ಯೆ ಆಗುತ್ತೆ ಅಂತ ವೈದ್ಯೆ ಕವಿತಾ ಅವರೇ ವಿವರಿಸಿದ್ದಾರೆ.
ಪಾರಿವಾಳಗಳಿಗೆ ಆಹಾರ ಹಾಕುವುದರಿಂದ ಹಾಗೂ ಪಾರಿವಾಳಗಳ ಸಾಕುವುದರಿಂದ ಆರೋಗ್ಯ ಸಮಸ್ಯೆ ಮನುಷ್ಯರಿಗೆ ಎದುರಾಗುತ್ತೆ. ಪಾರಿವಾಳಗಳ ವಾಸನೆ ತೆಗೆದುಕೊಂಡರೆ ನ್ಯೂಮೋನೈಟಿಸ್ ಕಾಯಿಲೆ ಬರುವ ಸಾಧ್ಯತೆ ಇದೆ. ಶ್ವಾಸಕೋಶಕ್ಕೆ ಸಮಸ್ಯೆಯಾಗುತ್ತೆ, ಚರ್ಮಕ್ಕೆ ತೊಂದರೆ, ಮೈ ಮೇಲೆ ರಾಷಸ್, ಉಸಿರಾಟದ ಸಮಸ್ಯೆ, ಹೈ ಫೀವರ್ ಕಾಣಿಸಿಕೊಳ್ಳಬಹುದು ಅಂತ ವೈದ್ಯೆ ಕವಿತಾ ಹೇಳಿದ್ದಾರೆ.
ಈಗಾಗಲೇ ಪುನಾ, ಮುಂಬೈ ನಲ್ಲಿ ಪಾರಿವಾಳ ಸಾಕಾಣಿಕೆ ಬ್ಯಾನ್ ಮಾಡಲಾಗಿದೆ. ಪಾರಿವಾಳಗಳಿಗೆ ಸಾರ್ವಜನಿಕವಾಗಿ ಆಹಾರ ಹಾಕುವುದನ್ನು ಕೂಡ ಮುಂಬೈನಲ್ಲಿ ಪಾಲಿಕೆಯೇ ಬ್ಯಾನ್ ಮಾಡಿದೆ. ಅಸ್ತಮಾ ಕಾಯಿಲೆ ಇದ್ದವರಿಗೆ ಬೇಗ ಅಟ್ಯಾಕ್ ಆಗೋ ಸಾಧ್ಯತೆ ಇದೆ.
ಪಾರಿವಾಳ ಸಾಕುವುದರಿಂದ ಕಾಣಿಸಿಕೊಳ್ಳುವ ಲಕ್ಷಣಗಳು
ಸ್ಕಿನ್ ಅಲರ್ಜಿ
ಮೈ ಮೇಲೆ ರ್ಯಷಸ್
ಉಸಿರಾಟದ ಸಮಸ್ಯೆ
ಹೈ ಫೀವರ್
ಟೈಪೋಯ್ಡ್
ವಾಂತಿ
ಮೈ, ಕೈ ನೋವು
ಸುಸ್ತು, ತಲೆ ನೋವು
ಹೀಗೆ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಾವೆ. ಒಂದು ವೇಳೆ ನೀವು ಪಾರಿವಾಳ ಸಾಕುತ್ತಿದ್ದರೇ, ಈಗಲೇ ನಿಲ್ಲಿಸುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಪಾರಿವಾಳಗಳಿಗೆ ರಸ್ತೆಗಳಲ್ಲಿ ಆಹಾರ ಹಾಕುವುದನ್ನು ಕೂಡ ನಿಲ್ಲಿಸುವುದು ಜನರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.