/newsfirstlive-kannada/media/post_attachments/wp-content/uploads/2024/04/EGG.jpg)
ಚಳಿಗಾಲದಲ್ಲಿ ಪ್ರೋಟೀನ್​​ಗಾಗಿ ಅನೇಕರು ಮೊಟ್ಟೆಗಳನ್ನು ತಿನ್ನುತ್ತಾರೆ. ಅದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಒಂದೇ ಬಾರಿ ಮೊಟ್ಟೆಗಳನ್ನ ಖರೀದಿಸುತ್ತಾರೆ. ಆದರೆ ಮೊಟ್ಟೆಗಳಿಗೂ ಅವಧಿ ಮುಗಿಯುವ ದಿನಾಂಕವಿದೆ ಮತ್ತು ಅವುಗಳನ್ನು ಸರಿಯಾಗಿ ಸಂಗ್ರಹಿಸದಿದ್ದರೆ ಬೇಗ ಹಾಳಾಗುತ್ತದೆ. ಅವಧಿ ಮೀರಿದ ಮೊಟ್ಟೆಗಳನ್ನು ತಿಂದರೆ ವಿಷವಾಗಬಹುದು ಎಚ್ಚರ.
ಮೊಟ್ಟೆಗಳು ಏಕೆ ಕೆಡುತ್ತವೆ..?
ಮೊಟ್ಟೆ ಕೆಡಲು ಪ್ರಮುಖ ಕಾರಣ ಸಾಲ್ಮೊನೆಲ್ಲಾ (Salmonella) ಬ್ಯಾಕ್ಟೀರಿಯಾ. ಆಹಾರವನ್ನು ವಿಷವಾಗಿ ಪರಿವರ್ತಿಸುವ ಅಪಾಯಕಾರಿ ಬ್ಯಾಕ್ಟೀರಿಯಾಗಳಲ್ಲಿ ಇದು ಒಂದಾಗಿದೆ. ನಾವು ದೀರ್ಘಕಾಲದವರೆಗೆ ಮೊಟ್ಟೆಯನ್ನು ಸಂಗ್ರಹಿಸಿದರೆ, ಅದರ ಒಳಗಿನ ರಚನೆಯು ಬದಲಾಗುತ್ತದೆ. ಮೊಟ್ಟೆಯೊಳಗಿನ ಗಾಳಿಯ ಚೀಲವು ದಿನದಿಂದ ದಿನಕ್ಕೆ ದೊಡ್ಡದಾಗುತ್ತದೆ. ಇದರಿಂದಾಗಿ ಹಳದಿ ಲೋಳೆ ಗಟ್ಟಿಯಾಗುತ್ತದೆ ಮತ್ತು ಬಿಳಿ ಭಾಗವು ನೀರಿನಂಶವಾಗುತ್ತದೆ. ಇದರಿಂದ ಮೊಟ್ಟೆ ತನ್ನ ತಾಜಾತನ ಕಳೆದುಕೊಳ್ಳುತ್ತದೆ.
ಮೊಟ್ಟೆಗಳನ್ನು ಎಷ್ಟು ದಿನ ತಿನ್ನಲು ಸುರಕ್ಷಿತ?
ಮೊಟ್ಟೆಗಳ ಶೆಲ್ಫ್ ಜೀವಿತಾವಧಿಯು ಅವುಗಳನ್ನು ಹೇಗೆ ಸಂಗ್ರಹಿಸಲಾಗುತ್ತದೆ ಅನ್ನೋದ್ರ ಮೇಲೆ ಅವಲಂಬಿತವಾಗಿರುತ್ತದೆ. ಮೊಟ್ಟೆಯ ಚಿಪ್ಪು ಹಾಗೇ ಇದ್ದು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿದರೆ, ಅವು ಸುಮಾರು 3 ರಿಂದ 5 ವಾರಗಳವರೆಗೆ ಬಾಳಿಕೆ ಬರುತ್ತವೆ. ಒಡೆದ ಮೊಟ್ಟೆಯನ್ನು ನೀವು ಫ್ರೀಜರ್​​ನಲ್ಲಿ ಸಂಗ್ರಹಿಸಡಬಹುದು. ಯಾವಾಗಲೂ ಫ್ರೀಜ್ ಮಾಡಿ ಇಡೋದು ಒಳ್ಳೆಯದಲ್ಲ. ಫ್ರೀಜರ್ ತಾಪಮಾನವು ಯಾವಾಗಲೂ 0 °F ಗಿಂತ ಕಡಿಮೆ ಇರಬೇಕು.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಹಾಳಾದ ಮೊಟ್ಟೆ ಗುರುತಿಸೋದು ಹೇಗೆ..?
ಮೊಟ್ಟೆ ತಾಜಾವಾಗಿದೆಯೇ ಅಥವಾ ಹಾಳಾಗಿದೆಯೇ ಎಂದು ಕಂಡುಹಿಡಿಯಲು ಕೆಲವು ಸರಳ ಪರೀಕ್ಷೆಗಳಿವೆ.
ನೀರಿನ ಪರೀಕ್ಷೆ : ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದರಲ್ಲಿ ಒಂದು ಮೊಟ್ಟೆಯನ್ನು ಹಾಕಿ. ಮೊಟ್ಟೆ ನೀರಿನ ಮೇಲೆ ತೇಲುತ್ತಿದ್ದರೆ, ಅದು ಹಾಳಾಗಿದೆ ಎಂದರ್ಥ. ಮೊಟ್ಟೆ ಸಂಪೂರ್ಣವಾಗಿ ಮುಳುಗಿದ್ದರೆ ಅದು ತಾಜಾವಾಗಿದೆ ಎಂದರ್ಥ.
ವಾಸನೆ ಪರೀಕ್ಷೆ: ಕೊಳೆತ ಮೊಟ್ಟೆಯಿಂದ ಹೆಚ್ಚಾಗಿ ಕೆಟ್ಟ ವಾಸನೆ ಬರುತ್ತದೆ.
ಅಲುಗಾಡುವ ಪರೀಕ್ಷೆ : ಮೊಟ್ಟೆಯನ್ನು ನಿಮ್ಮ ಕಿವಿಯ ಹತ್ತಿರ ಹಿಡಿದು ಅಲ್ಲಾಡಿಸಿ. ದ್ರವದೊಳಗೆ ನೀವು ಈಜು ಶಬ್ದ ಕೇಳಿದರೆ, ಮೊಟ್ಟೆ ಹಳೆಯದು ಎಂದರ್ಥ.
ಬಣ್ಣ - ವಿನ್ಯಾಸ: ಹಳದಿ ಲೋಳೆ ಮುರಿದು ಒಳಭಾಗ ಜಿಗುಟಾದ ನಂತರ ಬಣ್ಣದಲ್ಲಿನ ಬದಲಾವಣೆಗಳು ಸಹ ಕೆಟ್ಟ ಚಿಹ್ನೆಗಳಾಗಿವೆ.
ಮೊಟ್ಟೆಗಳನ್ನು ಶಾಖದಿಂದ ದೂರವಿಟ್ಟು, ತಂಪಾದ, ಕತ್ತಲೆಯ ಸ್ಥಳದಲ್ಲಿ ಸಂಗ್ರಹಿಸುವ ಮೂಲಕ ಹೆಚ್ಚು ಕಾಲ ತಾಜಾವಾಗಿರಿಸಿಕೊಳ್ಳಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us